Sunday, December 7, 2025
Sunday, December 7, 2025

Vande Mataram Trust ಮನಸ್ಸಿನ ನಿಯಂತ್ರಣದಿಂದ ವ್ಯಸನಮುಕ್ತರಾದರೆ ಬದುಕು ಸುಂದರ-ಡಾ.ವಿನಯ್ ಕುಮಾರ್

Date:

Vande Mataram Trust ವ್ಯಸನಗಳ ಚಟದಿಂದ ಅತ್ಯಮೂಲ್ಯ ಜೀವನ್ನು ತೊರೆಯುವ ಬದಲು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಮುನ್ನೆಡೆದರೆ ಸುಂದರ ಮತ್ತು ಆರೋಗ್ಯ ಬದುಕು ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ|| ವಿನಯ್‌ಕುಮಾರ್ ಹೇಳಿದರು.

ಚಿಕ್ಕಮಗಳೂರು ನಗರದ ಶ್ರೀ ಶಕ್ತಿ ಮದ್ಯಪಾನ ವ್ಯಸನ ಮುಕ್ತ ಕೇಂದ್ರದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಯ ಅಂಗವಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ ಮತ್ತು ವಂದೇ ಮಾತರಂ ಟ್ರಸ್ಟ್, ಸಹಯೋಗ ದಲ್ಲಿ ಏರ್ಪಡಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಬೀಡಿ, ಸಿಗರೇಟ್, ಮದ್ಯಪಾನದಂತಹ ದುಶ್ಚಟಗಳು ಮನುಷ್ಯನ ಬದುಕು ಸೇರಿದಂತೆ ಕುಟುಂಬದ ಜೀವನ ವನ್ನು ಹಾಳುಗೆಡವಲಿದೆ. ಮಾನಸಿಕ ಆರೋಗ್ಯವಾಗಿರಲು ಪ್ರತಿಯೊಬ್ಬರು ಇಂತಹ ದುಶ್ಚಟಗಳಿಂದ ದೂರವಿದ್ದರೆ ಸ್ವಾಸ್ಥö್ಯ ಬದುಕಿನೊಂದಿಗೆ ಸ್ವಾತೀಕ ಜೀವನ ನಡೆಸಬಹುದು ಎಂದು ಸಲಹೆ ಮಾಡಿದರು.
ಕೆಲವರು ನಿತ್ಯದ ಜೀವನದಲ್ಲಿ ಮಾದಕ ವಸ್ತುಗಳ ಸೇವನೆ ಅಭ್ಯಾಸಗಳಾಗಿವೆ. ಇವುಗಳು ಕೆಲವು ದಿನಗಳು ಮಾತ್ರ ಚುರುಕುತನ ಹೊಂದಿದರೆ ಮುಂದಿನ ಭವಿಷ್ಯದಲ್ಲಿ ಶರೀರದ ಒಂದೊಂದು ಅಂಗಾಂಗಳ ಮೇಲು ಪರಿಣಾಮ ಬೀರುವ ಮೂಲಕ ರೋಗಗ್ರಸ್ಥವಾಗಲಿದೆ ಎಂದು ಎಚ್ಚರಿಸಿದರು.

Vande Mataram Trust ಶ್ರೀ ಶಕ್ತಿ ಮದ್ಯಪಾನ ವ್ಯಸನ ಮುಕ್ತ ಕೇಂದ್ರದ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ ಮದ್ಯಪಾನ ಸೇವನೆ ಕ್ಷಣ ಕ ಸುಖವನ್ನು ಮಾತ್ರ ನೀಡಲಿದ್ದು ತದನಂತರ ಅದೇ ಮುಂದುವರೆಯಲಿದೆ. ಇವುಗಳಿಂದ ಹೊರಬರಲು ಬಿಡುವಿನ ವೇಳೆಯಲ್ಲಿ ಧ್ಯಾನ, ಯೋಗ ಸೇರಿದಂತೆ ಇನ್ನಿತರೆ ಕಾರ್ಯಚಟುವಟಿಕೆಗಳಲ್ಲಿ ತೊಡಗಿದರೆ ನಿಧಾನಗತಿ ಯಲ್ಲಿ ದುಶ್ಚಟಗಳು ದೂರವಾಗಲಿದೆ ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮನೋ ಸಾಮಾಜಿಕ ಕಾರ್ಯಕರ್ತ ಎಸ್.ಹೆಚ್.ಜಯಣ್ಣ, ಮದ್ಯವರ್ಜನ ಶಿಬಿರಾರ್ಥಿ ಗಳು, ಆಡಳಿತ ಮಂಡಳಿ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...