Lions Club Shirala Koppa ಲಯನ್ಸ್ ಜಿಲ್ಲೆ, 317 ಸಿ ಪದವಿ ಪ್ರಧಾನ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಶಿರಾಳಕೊಪ್ಪ ತಂಡಕ್ಕೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ.
ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ಲಯನ್ ಜಿಲ್ಲೆ, 317ಸಿ ಯ ಪ್ರಶಸ್ತಿ ಪ್ರದಾನ ಸಮಾರಂಭ ಮಹಾಬಲ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಸಾವಿರಕ್ಕೂ ಹೆಚ್ಚು ಲಯನ್ ಸದಸ್ಯರು ಪಾಲ್ಗೊಂಡಿದ್ದರು.
ಜಿಲ್ಲೆಯ 118 ಕ್ಲಬ್ ಗಳ ಸೇವಾ ಕಾರ್ಯಕ್ರಮಗಳ ಸಾಧನೆಯ ಸಮಾವೇಶ ಇದಾಗಿತ್ತು. ಈ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಶಿರಾಳಕೊಪ್ಪ ಜಿಲ್ಲೆಯ ಅತ್ಯುತ್ತಮ ಎರಡನೇ ಕ್ಲಬ್ ಎಂದು ಪರಿಗಣಿಸಿ ಹಲವಾರು ಪ್ರಶಸ್ತಿಗಳನ್ನು ನೀಡಲಾಯಿತು.
2022-23ನೇ ಸಾಲಿನ ತಂಡದ ಸಾಧನೆ ಹಾಗೂ ಲಯನ್ಸ್ ಗಳ ವೈಯಕ್ತಿಕ ಕೊಡುಗೆಯನ್ನು ಆಧರಿಸಿ ಪ್ರಶಸ್ತಿ ನೀಡಲಾಯಿತು.
ಹಸಿವು ನಿವಾರಣೆ ,ನೇತ್ರ ತಪಾಸಣೆ ,ಪರಿಸರ ಸಂರಕ್ಷಣೆ ಶಿಕ್ಷಣ, ರಾಷ್ಟ್ರೀಯ ಭಾವೈಕ್ಯತೆ ಮಧುಮೇಹ ಕ್ಷೇತ್ರಗಳಲ್ಲಿ ನೀಡಿದ ಅತಿ ಹೆಚ್ಚು ಸೇವ ಕಾರ್ಯಕ್ರಮಗಳನ್ನು ಹಾಗೂ ಲಯನ್ಸ್ ಫೌಂಡೇಶನ್ ಗೆ ನೀಡಿದ ಕೊಡುಗೆಗಳನ್ನು ಆಧರಿಸಿ ಕ್ಲಬ್ ಹಾಗೂ ಕ್ಲಬ್ ನ ಸದಸ್ಯರುಗಳ ಸೇವೆಗೆ ಗೌರವ ಸಲ್ಲಿಸಲಾಯಿತು.
ತೇಜಸ್ ಪೋಷಕರ ರತ್ನ ತೇಜಸ್ ಕ್ರೀಡಾ ರತ್ನ ತೇಜಸ್ ಲೈಮ್ ಲೈಟ್ ಪ್ರಶಸ್ತಿ , ತೇಜಸ್ ಸುಪ್ರೀಂ ಎಕ್ಸಲೆನ್ಸ್ ವಲಯಾಧ್ಯಕ್ಷ ಪ್ರಶಸ್ತಿ ಸಿಲ್ವರ್ ಸ್ಟಾರ್ ಪ್ರಶಸ್ತಿ , ತೇಜಸ್ ರಣಧೀರ ಪ್ರಶಸ್ತಿ , ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ, ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ , ಅತ್ಯುತ್ತಮ ಖಜಾಂಚಿ ಪ್ರಶಸ್ತಿ, ಸ್ಕ್ರಾಪ್ ಬುಕ್ ಪ್ರಶಸ್ತಿ, ಅಭಿನಂದನ ಪತ್ರಗಳು ಅಂತರರಾಷ್ಟ್ರೀಯ ಅಧ್ಯಕ್ಷರ ಪ್ರಶಸ್ತಿ ಪತ್ರ ಹೀಗೆ ಸುಮಾರು 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಕ್ಲಬ್ ಮುಡಿಗೆeರಿಸಿಕೊಂಡಿತು. 2022-23 ಮೇ ಸಾಲಿನ ಜಿಲ್ಲಾ ಗವರ್ನರ್ ಲಯನ್ ಎಂಕೆ ಭಟ್ ಭವ್ಯ ವೇದಿಕೆಯಲ್ಲಿ ಈ ಪ್ರಶಸ್ತಿಗಳನ್ನ ನೀಡಿದರು.
Lions Club Shirala Koppa ಈ ಪ್ರಶಸ್ತಿಗಳನ್ನು ಗಳಿಸಿರುವುದು ನಮ್ಮ ತಂಡದ ಸಾಂಘಿಕ ಪ್ರಯತ್ನ ಎಲ್ಲ ಸದಸ್ಯರ ತನು ಮನ ಧನ ಸಹಕಾರದಿಂದ ನಾವು ಈ ಪ್ರಶಸ್ತಿಗಳನ್ನು ಪಡೆದಿದ್ದೇವೆ ಎಂದು 2022- 23ರ ಪದಾಧಿಕಾರಿಗಳು ಅಭಿಪ್ರಾಯ ಪಟ್ಟು ಸಂತಸ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಶಿರಾಳಕೊಪ್ಪ ಕ್ಲಬ್ ನ 20 ಕ್ಕೂ
ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.