Assembly Election ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯನ್ನು ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿರುವ ಪ.ಜಾತಿ ಮುಖಂಡ ಹಿರೇಮಗಳೂರು ರಾಮಚಂದ್ರ ಅವರಿಗೆ ನೀಡಬೇಕು ಎಂದು ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಬಣ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಭಾನುವಾರ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತ್‌ಕುಮಾರ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ದಲಿತ ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವ ಪರಿಣಾಮ ರಾಜ್ಯದಲ್ಲಿ ಬಹುಮತ ಪಡೆಯಲು ಸಾಧ್ಯವಾಗಿದ್ದು ಆ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಸಿಡಿಎ ಅಧ್ಯಕ್ಷ ಸ್ಥಾನವನ್ನು ದಲಿತ ಸಮುದಾಯದ ಮುಖಂಡರಿಗೆ ನೀಡಬೇಕು ಎಂದರು.
ಕಳೆದ ಕೆಲದಿನಗಳಿಂದ ದಸಂಸ ಪದಾಧಿಕಾರುಗಳು ಸಭೆ ನಡೆಸಿ ಸಿಡಿಎ ಅಧ್ಯಕ್ಷ ಹುದ್ದೆಯನ್ನು ಪರಿಶಿಷ್ಟ ಜಾತಿ ಯ ಮುಖಂಡ ಹಿರೇಮಗಳೂರು ರಾಮಚಂದ್ರ ಅವರಿಗೆ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಾ ಗಲೇ ಹಲವಾರು ವರ್ಷಗಳಿಂದ ಸಿಡಿಎ ಹುದ್ದೆಯನ್ನು ಸಾಮಾನ್ಯ, ಅಲ್ಪಸಂಖ್ಯಾತರ ಸಮುದಾಯಕ್ಕೆ ನೀಡಲಾಗಿದ್ದು ಮುಂಬರುವ ಅವಧಿಗೆ ಪ.ಜಾತಿ ಮುಖಂಡರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ.ಜಾತಿ ಮುಖಂಡ ರಾಮಚಂದ್ರ ಅವರನ್ನು ಸಿಡಿಎ ಅಧ್ಯಕ್ಷ ಹುದ್ದೆಗೆ ಆಯ್ಕೆಗೊಳಿಸುವ ಮೂಲಕ ಮೊದಲ ಬಾರಿಗೆ ಜಿಲ್ಲೆಗೆ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರ ಆಯ್ಕೆ ಮಾಡಿದ ಇತಿಹಾಸ ಪ್ರಾರಂಭವಾಗಲಿದೆ ಎಂದು ಹೇಳಿದರು.
Assembly Election ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಬಿ.ಎನ್.ಚೌಡಪ್ಪ, ಮುಖಂಡರುಗಳಾದ ಧರ್ಮೇಶ್, ಓಂಕಾರಮೂರ್ತಿ, ಶಾಂತಕುಮಾರ್, ವೇಣುಗೋಪಾಲ್, ಇಲಿಯಾಜ್ ಮತ್ತಿತರರು ಹಾಜರಿದ್ದರು.