Saturday, December 6, 2025
Saturday, December 6, 2025

Customer Support ಗ್ರಾಹಕರ ಸಹಕಾರದಿಂದ ಸಂಘಕ್ಕೆ ನಿವ್ವಳ ಲಾಭ-ಕೆ.ಬಿ.ದೇವರಾಜ್

Date:

Customer Support ಸಹಕಾರಿ ಸಂಘದ ಠೇವಣಿದಾರರು, ಷೇರುದಾರರು ಹಾಗೂ ಗ್ರಾಹಕರ ನಿರಂತರ ಬೆಂಬಲದಿoದ ಪ್ರತಿವರ್ಷವು ಸಂಘ ನಿವ್ವಳ ಲಾಭವನ್ನು ಹೆಚ್ಚಿಸಿಕೊಂಡು ಅಭಿವೃದ್ದಿಪಥದತ್ತ ದಾಪುಹಾಲು ಸಾಧಿಸುತ್ತಿದೆ ಎಂದು ಸಮಾನ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಬಿ.ದೇವರಾಜ್ ಹೇಳಿದರು.

ಚಿಕ್ಕಮಗಳೂರು ನಗರದ ಖಾಸಗೀ ಹೋಟೆಲ್‌ವೊಂದರಲ್ಲಿ ಸಮಾನ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ 2022-23ನೇ ಸಾಲಿನ ಸರ್ವಸದಸ್ಯರ ಮಹಾಸಭೆಯ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಸದಸ್ಯರಿಗೆ ಸೂಕ್ತ ಸಮಯದಲ್ಲಿ ಬಳಕೆಯಾಗುವ ನಿಟ್ಟಿನಲ್ಲಿ ಆಡಳಿತ ಮಂಡಳಿ ವತಿಯಿಂದ 10ಕೋಟಿ ಹೆಚ್ಚು ಸಾಲ ವಿತರಣೆ ಮಾಡಲಾಗಿದೆ. ಜೊತೆಗೆ 11 ಕೋಟಿ ರೂ. ಠೇವಣಿ ಹೊಂದಿದ್ದು 2022-23ನೇ ಸಾಲಿನಲ್ಲಿ 35.17 ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಿ ಅಭಿವೃದ್ದಿಯತ್ತ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿ ಸಿದರು.
ನಿವ್ವಳ ಲಾಭದಲ್ಲಿ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೇ.16 ರಷ್ಟು ಡಿವಿಡೆಂಟ್ ನೀಡಲಾಗಿದೆ. ಕಳೆದ ಸಾಲಿಗಿಂತ ಹಣಕಾಸು ವ್ಯವಹಾರದಲ್ಲಿ ಶೇ.20 ವೃದ್ದಿ ಹೊಂದಿದೆ. ಮುಂದಿನ ದಿನಗಳಲ್ಲಿ 25 ಕೋಟಿ ಗೂ ಹೆಚ್ಚು ವ್ಯವಹಾರ ಹಾಗೂ ನಿವ್ವಳ ಲಾಭಾಂಶವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವೈ.ವೆಂಕಟೇಶ್ ಮಾತನಾಡಿ ತಾಲ್ಲೂಕಿನ ಬ್ಯಾಗದಹಳ್ಳಿ ಮತ್ತು ಬ್ಯಾರವಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸಂಘದ ವತಿಯಿಂದ ಶಾಲಾಬ್ಯಾಗ್, ಕ್ರೀಡಾವಸ್ತುಗಳು ಮತ್ತು ಪೀಠೋಪರಣಗಳನ್ನು ಒದಗಿಸುವ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಸಂಘದ ಪ್ರವರ್ತಕ ಹೆಚ್.ಎಂ.ನೀಲಕoಠಪ್ಪ ವಾರ್ಷಿಕ ವರದಿ ಮಂಡಿಸಿದರು.

Customer Support ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಡಿ.ಪಿ.ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಕೆ.ಎನ್.ದೊಡ್ಡೇಗೌಡ, ಬಿ.ಜಿ.ಸೋಮಶೇಖರಪ್ಪ, ಯು.ಎಂ. ಜಯರಾಮೇಗೌಡ, ಬಿ.ಎ.ಬಾಲಕೃಷ್ಣ, ಎಂ.ಎ.ರವಿಕುಮಾರ್, ಶ್ರೀಮತಿ ಕೆ.ವಿ. ಮಮತ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...