Saturday, December 6, 2025
Saturday, December 6, 2025

Uttaradi Math ತತ್ವಜ್ಞಾನ ನೀಡುವ ಉಪಕಾರವೇ ಎಲ್ಲಕ್ಕಿಂತ ದೊಡ್ಡದು- ಶ್ರೀಸತ್ಯಾತ್ಮ ತೀರ್ಥರು

Date:

Uttaradi Math ಸಕಲ ಭಕ್ತರ ಉದ್ಧಾರಕ್ಕಾಗಿ ಶ್ರೀಕೃಷ್ಣ ಭೂಮಿಯಲ್ಲಿ ಅವತಾರ ಮಾಡಿದ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರು ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯದಲ್ಲಿ ನಡೆದ ವಿದ್ವತ್ ಸಭೆಯಲ್ಲಿ ದಶಮ ಸ್ಕಂದ ಭಾಗವತ ಕುರಿತು ಅವರು ಪ್ರವಚನ ನೀಡಿದರು.

ದೇವರ ಅವತಾರದ ಸಂದರ್ಭದಲ್ಲಿ ಅವರ ಸ್ತೋತ್ರ ಮಾಡಬೇಕಾದ್ದು ಭಕ್ತರ ಕರ್ತವ್ಯ. ಹೀಗಾಗಿ ಬ್ರಹ್ಮ ಮತ್ತು ರುದ್ರಾದಿ ದೇವತೆಗಳು ಗರ್ಭ ಸ್ತುತಿಯನ್ನು ಮಾಡಿದ್ದಾರೆ. ಆ ಮೂಲಕ ಭಗವಂತನ ಸರ್ವೋತ್ತಮತ್ವವನ್ನು ನಮಗೆ ತಿಳಿಸುತ್ತಿದ್ದಾರೆ ಎಂದರು.

ಲೌಖಿಕ ಲಾಭ ಕ್ಷಣಿಕ :
ಒಂದು ಸಿಹಿ ತಿನಿಸನ್ನು ಕೊಡುವುದರಿಂದ ಒಬ್ಬರಿಗೆ ಆಗುವ ಸಂತೋಷ ಮತ್ತು ಲಾಭ ಅತ್ಯಂತ ಸಣ್ಣ ಲಾಭ. ಆದರೂ ಅದು ಕೂಡ ತತ್ಕಾಲದ ಸಂತೋಷ ನೀಡುತ್ತದೆ. ತಾತ್ಕಾಲಿಕ ಉಪಕಾರವೇ ಒಂದು ಸ್ಮರಣೀಯ ಉಪಕಾರ ಅಂತಾದ್ರೆ ಜ್ಞಾನವನ್ನು ನೀಡುವ ಜ್ಞಾನದ ಉಪಕಾರ ಮೋಕ್ಷದವರೆಗೂ ಮತ್ತು ಮೋಕ್ಷದಲ್ಲೂ ಇರುವ ಉಪಕಾರ. ಅನಂತ ಕಾಲದವರೆಗೂ ಜ್ಞಾನವನ್ನು ನೀಡುತ್ತದೆ ಎಂದರು.

Uttaradi Math ಹಾಗ0ತ ಲೌಖಿಕವಾದ ಲಾಭ ಕೊಡುವ ಯೋಚನೆ ತಪ್ಪು ಅಂತಲ್ಲ. ಬದುಕಿಗಾಗಿ ಹೊಟ್ಟೆ, ಬಟ್ಟೆ ಇವೆಲ್ಲದರ ಅವಶ್ಯಕತೆ ಇದ್ದೇ ಇದೆ. ಆದರೆ ಇದೇ ನಿಜವಾದ ಉಪಕಾರ ಅಲ್ಲ. ತತ್ವಜ್ಞಾನವನ್ನು ಕೊಡುವ ಉಪಕಾರ ಎಲ್ಲಕ್ಕಿಂತ ದೊಡ್ಡದು. ತಂದೆ ತಾಯಿಯರು ಮಕ್ಕಳಿಗೆ ಈ ಜ್ಞಾನದ ಉಪಕಾರ ಮಾಡಬೇಕು ಎಂದರು.

ಪ0ಡಿತ ಅಭಯಾಚಾರ್ಯ ಪಾಟಿಲ್ ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...