Friday, March 20, 2026
Friday, March 20, 2026

Yakshagana ಮಲೆನಾಡಿನ ಮಹಿಳೆಯರು ಯಕ್ಷಬಳಗ ಸ್ಥಾಪಿಸಿ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ-ಡಾ.ಆರ್. ಶ್ರೀಧರ್ ಹುಲ್ತಿಕೊಪ್ಪ

Date:

Yakshagana ಸೊರಬ ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀ ಸುರಭಿ ಮಹಿಳಾ ಯಕ್ಷ ಬಳಗದವರು ಪ್ರದರ್ಶಿಸಿದ ಚಂದ್ರಾವತಿ ವಿಲಾಸ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು.

ಮುಮ್ಮೇಳದಲ್ಲಿ ಕೃಷ್ಣನಾಗಿ ವೈಷ್ಣವಿ ಮುರಳಿಧರ್ ಹಾಗೂ ಶ್ವೇತಾ ರಾಮಚಂದ್ರ, ಗೋಪಾಲಕರಾಗಿ ವೀಣಾ ಶ್ರೀಧರ್, ಶೋಭಾ ಸತ್ಯಾ, ಹರ್ಷಿತಾ ಹೆಗಡೆ ಹಾಗೂ ಸುಮಿತ್ ಚಂದ್ರಾವಳಿಯಾಗಿ ಶ್ರೀಮತಿ ಬೆನ್ನೂರ್, ರಾಧೆಯಾಗಿ ಅನುಷಾ ನಾವುಡ, ಚಂದಗೋಪನಾಗಿ ಲಕ್ಷ್ಮಿ ಮುರಳಿಧರ್ ನಿರ್ವಹಿಸಿದ ಪಾತ್ರಗಳು ಗಮನ ಸೆಳೆದವು.
ಝಗಮಗಿಸುವ ವೇಷಭೂಷಣ, ಚುರುಕುನಡೆಯ ನಾಟ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅಜ್ಜಿಯಾಗಿ ಜೈ ಕುಮಾರ್ ಅವರ ಹಾಸ್ಯ ಸಕಾಲಿಕವಾಗಿತ್ತು.

ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳದಲ್ಲಿ ಸೃಜನ್ ಹೆಗಡೆ ಮಾರುತಿಪುರ ಅವರ ಭಾಗವತಿಕೆ, ಮಂಜುನಾಥ್ ಭಟ್ ಗುಡ್ಡೆದಿಂಬ ಅವರ ಮದ್ದಳೆವಾದನ, ಗಣೇಶ್ ಹೆಗಡೆ ಕೆರೆಕೈ ಅವರ ಚೆಂಡೆವಾದನ ಸಭಿಕರನ್ನು ಮೈನವಿರೇಳಿಸಿತು.

ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನವನ್ನು ಮಹಿಳೆಯರು ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯವಾಗಿದೆ.

ಮಹಿಳೆಯರು ಕೇವಲ ಒಂದು ತಿಂಗಳಲ್ಲಿ ಯಕ್ಷಗಾನ ಕಲೆಯನ್ನು ಕಲಿತು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ಈ ಮೂಲಕ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಶ್ರಮಿಸುತ್ತಿರುವವರ ಕಾರ್ಯ ಪ್ರಶಂಸನೀಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷ ಡಾ. ಆರ್. ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ಮಲೆನಾಡು ಭಾಗದ ಸಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ವಿಶೇಷವಾಗಿ ನಾಡಿನ ಪ್ರಮುಖ ಕಲೆಯಾದ ಯಕ್ಷಗಾನಕ್ಕೆ ಸಾಕಷ್ಟು ಮಹತ್ವವಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸಿನ ಸಾಧನೆ ಮಾಡುತ್ತಿದ್ದಾರೆ. ಇದೇ ಸಾಲಿನಲ್ಲಿ ಇದೀಗ ಮಹಿಳೆಯರು ಯಕ್ಷ ಬಳಗವನ್ನು ಸ್ಥಾಪಿಸಿಕೊಂಡು ಯಕ್ಷಗಾನ ಪ್ರದರ್ಶನ ನೀಡುತ್ತಿರುವುದು ಮೆಚ್ಚುವಂತಹದ್ದಾಗಿದೆ ಎಂದರು.

Yakshagana ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ. ಮುರುಳೀಧರ್, ಬಯಲಾಟ ಹಿರಿಯ ಕಲಾವಿದ ಎಚ್.ಕೆ. ಯಶವಂತಪ್ಪ ಚಂದ್ರಗುತ್ತಿ, ಹಿರಿಯ ನಾಗರೀಕ ಕೆ. ಪ್ರಭಾಕರ್ ರಾಯ್ಕರ್, ಕಲಾ ಪೋಷಕ ದಿವಾಕರ್ ಭಾವೆ, ದಿನಕರ ಭಟ್ ಭಾವೆ, ಶ್ರೀಧರ್ ನೆಮ್ಮದಿ, ಹನುಮಂತಪ್ಪ ಮಾಸ್ತರ್, ನಾಗರಾಜ ಗುತ್ತಿ, ಹರ್ಷಾ ಹೆಗಡೆ, ಜೆ.ಎಸ್. ಚಿದಾನಂದಗೌಡ ಇನ್ನು ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...