Diamond Cross Movie ಸಿನಿಮಾಗಳಲ್ಲಿ ಸಿದ್ಧ ವಸ್ತುಗಳಿಂದ ಪ್ರೇಕ್ಷಕರ ಕಿಸೆಗೆ ಕೈಹಾಕುವ ಕಾಲ ಈಗಿಲ್ಲ. ಹೊಸಧಾಟಿಯಲ್ಲಿ
ನಿರೂಪಿಸುವ ಸಿನಿಮಾಗಳಿಗೆ ಪ್ರೇಕ್ಷಕ ಮಣೆ ಹಾಕುವ ಟ್ರೆಂಡ್ ಈಗ ಸೆಟ್ಟಾಗಿದೆ.
ಅಂತಹ ಸಿನಿಮಾಗಳ ಸಾಲಿಗೆ ” ಡೈಮಂಡ್ ಕ್ರಾಸ್”
ಸೇರಲಿದೆ.
ಹೀರೋ ಸಾಫ್ಟ್ ವೇರ್ ಗುರು. ಅವನ ಕೌಶಲದ ಸುತ್ತ ಕತೆ ತಿರುಗಾಡುತ್ತದೆ.
ನಾಯಕ ಅಪ್ಪು ( ರಜತ್ ಅಣ್ಷಪ್ಪ)
ಕೌಟುಂಬಿಕ ಕಾರಣಗಳಿಂದ ಒಂಟಿಯಾಗುತ್ತಾನೆ.
ಕಾಲೇಜಿನಲ್ಲಿ ಕಲಿತ
ಸಾಫ್ಟ್ ವೇರ್ ಕೌಶಲ ಅವನಿಗೆ ಕರತಲಾಮಲಕ.
ಸನ್ನಿವೇಶ ವಶಾತ್ ಅವನು ನಗರಕ್ಕೆ ಒಂಟಿ ಬಂದು ಬದುಕುವ ದಾರಿ ಹುಡುಕುತ್ತಾನೆ.
ಟ್ಯಾಕ್ಸಿ ಚಾಲಕ ಮತ್ತು ಆತನ ಮೂಕ ಪತ್ನಿ ಅವನನ್ನ ಸಲಹುತ್ತಾರೆ.
ಗುಂಪಿನ ಹೊಡೆದಾಟದಲ್ಲಿ ಸಿಕ್ಕ ಅಗಂತುಕ ಇಂಜಿನಿಯರ್ ಯುವಕರ ಗುಂಪನ್ನ ಡಿಶುಂ ಡಿಶುಂ ಹೋರಾಡಿ ಬದುಕಿಸುತ್ತಾನೆ.
ಆ ಯುವಕರೂ ಸಾಫ್ಟ್ ವೇರ್ ಕುಶಲಿಗರೇ ಆಗಿ ಅವರ ಗೆಳೆತನ ಬೆಳೆಯುತ್ತದೆ. ಡಿಜಿಟಲ್ ಖಾತೆ,
ಪಾಸ್ ವರ್ಡ್ ಹ್ಯಾಕಿಂಗ್ ಮುಂತಾದವುಗಳಲ್ಲಿ ಹೀರೋ ತನ್ನ ಕೈಚಳಕ ತೋರಿದಾಗ ಗುಂಪಿಗೆ ಅಪ್ಪು ಬಾಸ್ ಪಟ್ಟ ಸಿಗುತ್ತದೆ. ಗುಂಪಿಗೆ ಮಯೂರ ಎಂಬ ಹೆಸರಿಡಲಾಗುತ್ತದೆ.
ಈ ನಡುವೆ ಅಣ್ಣಾವ್ರ ಮಯೂರ ಸಿನಿಮಾದ ಹಾಡಿಗೂ ಹೀರೋನ ಐಡಿಯಲ್ಸ್ ಗಳಿಗೂ ತಳುಕು ಹಾಕುವ ಪ್ರಯತ್ನ ಮಾಡಲಾಗಿದೆ.
ಹಿಂದಿನ ಸಿನಿಮಾಗಳಲ್ಲಿ ಶ್ರೀಮಂತರನ್ನ ದರೋಡೆ ಮಾಡಿ ಬಡವರಿಗೆ ಸಹಾಯಮಾಡುವ
ನಾಯಕನನ್ನ ಈವರೆಗೆ ಸಿನಿಮಾದಲ್ಲಿ ನೋಡಿದ್ದೆವು. ಈಗ
ಇಲ್ಲಿಯ ನಾಯಕ
ಆರ್ಥಿಕ ಅಪರಾಧಿಗಳ ಬ್ಯಾಂಕ್ ಖಾತೆಗಳನ್ನ ಹ್ಯಾಕ್ ಮಾಡುತ್ತಾನೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ
ಯುವತಿಯರ ಖಾತೆ ಹ್ಯಾಕ್ ಆಗಿ
ಹೀರೋ ಆಕೆಯನ್ನ ಪಾರು ಮಾಡುವ
ಡಿಜಿಟಲ್ ಸಾಹಸವೂ ಇದೆ.
ಹಾಗೆ ನೋಡಿದರೆ ಮಾತು ಮತ್ತು ಸಂಗೀತ ಅಡ್ಡಿಯಿಲ್ಲ. ಇನ್ನೂ ಹೇಳಬೇಕೆಂದರೆ ಸಂಗೀತವೇ ಸೆಕೆಂಡ್ ಹೀರೋ.
ನಿರ್ದೇಶನದ ಬಗ್ಗೆ ಕೊಂಕು ಹೇಳುವಹಾಗಿಲ್ಲ. ಹಿತಮಿತ. ಚಿತ್ರಕತೆ ಬಿಗಿಯಾಗಿದೆ. ಅದೇ ಈ ಸಿನಿಮಾದ ಗುಟ್ಟು.
ದೃಶ್ಯಗಳ ಎಳೆದಾಟವಿಲ್ಲ.
ಅಂತ್ಯ ಬರೆಯಬಾರದು ಎಂದರೆ ಈ ಸಿನಿಮಾಗೆ ಕೊನೆಯೇ ಇಲ್ಲ.
ವಿಲನ್ ಯಾರು? ಅಂತಲೇ to be continued ಎಂದು ಸಿನಿಮಾ ಮುಗಿಯುತ್ತದೆ.
ಅಭಿನಯದಲ್ಲಿ ಎಲ್ಲ ಪಾತ್ರಧಾರಿಗಳು ಹೊಸಬರೆ. ಸೆಳೆಯುವವರೆಂದರೆ ರಜತ್ ,ಅಭಯ ಶಂಕರ್, ಬೆಣ್ಣೆ ಯಂತೆ ಮುದ್ದಾದ ಬೆಲ್ಲಾ ಪಾತ್ರದ ರೂಪಿಕಾ.
ಫೋಟೋಗ್ರಫಿಗೆ ಹೆಚ್ಚುಗಾರಿಕೆಯಿಲ್ಲ. ಮೊದಲು ಮಡಿಕೇರಿ ಪರಿಸರ ಬಿಟ್ಟರೆ ಇನ್ನೆಲ್ಲ ಲೈಟ್ ಅಂಡ್ ಶೇಡ್ ತಂತ್ರದಿಂದ
ಶೂಟ್ ಮಾಡಲಾಗಿದೆ.
ಶಿವಮೊಗ್ಗದ ಪ್ರತಿಭೆಗಳಿಲ್ಲಿವೆ. ರಸ್ತೆ ಸಾರಿಗೆ ನಿಗಮದ ನಾಗರಾಜ್ ಪುತ್ರ ವಿನಯ್ ಇದರಲ್ಲಿ ವಿಕ್ರಮ್ ಆಗಿ ನಟಿಸಿದ್ದಾರೆ. ಶಿವಮೊಗ್ಗದ
ಸುತ್ತಮುತ್ತ ಬಹುಪಾಲು ಚಿತ್ರೀಕರಣವಾಗಿದೆ. ಇಷ್ಟೆಲ್ಲ ವಿಷಯಗಳಿಂದ ಸಿನಿಮಾ ಸಿಹಿಮೊಗೆಯ ಅಭಿಮಾನಿಗಳಿಗೆ ಆಪ್ತವಾಗುತ್ತದೆ.
Diamond Cross Movie ಒಂದು ಹಾಲಿವುಡ್ ಟ್ರೆಂಡ್ ಇರುವ ಮೂವಿಯ ಲಕ್ಷಣಗಳಿಲ್ಲಿವೆ. ನಿರ್ದೇಶಕ ರಾಮ್ ದೀಪ್ ಅವರ ಬಗ್ಗೆ ಭರವಸೆ ಇರಿಸಬಹುದು.
ದೊರೈ ಭಗವಾನ್
ನಂತರ ಬಹಳಷ್ಟು ಮಳೆಗಾಲವನ್ನ ಕನ್ನಡ ಚಿತ್ರರಂಗ ಕಂಡಿದೆ. ರಾಮ್ ದೀಪ್ ಈಗ ಒಂದು ಝಳಕ್ ಆಗಿದ್ದಾರೆ.
ರಾಮಚಂದ್ರ ಬಾಬು ಅವರ ಚಿತ್ರಕತೆ ಬಿಗಿಯಾಗಿದೆ. ಅದೂ ಕೂಡ ಸಿನಿಮಾದ ಪ್ಲಸ್ ಪಾಯಿಂಟ್.
ಸಿನಿಮಾದ ವಿಲನ್
ಲವಲವಿಕೆಯಂದ ನಟಿಸಿದ್ದಾರೆ. ಮುಖವಾಡ ಹಾಕಿ ಪ್ರೇಕ್ಷಕರನ್ನ ವಿಸ್ಮಯದಲ್ಲಿ ಮುಳುಗಿಸಿದ್ದಾರೆ.
ಕಡೆಗೂ ಆತ ಯಾರು ಅಂತ ಗೊತ್ತಾಗದೇ ಪ್ರೇಕ್ಷಕ ಕನ್ ಫ್ಯೂಸ್
ಆಗಿ ಹೊರ ಬರಬೇಕಾಗುತ್ತದೆ.
ನೊಡುತ್ತ ನೋಡುತ್ತ ನಡುವೆ ಎದ್ದು ಹೊಗಲು ಬಿಡದೇ ಕೂರುವಂತೆ ಮಾಡುತ್ತದೆ ಡೈಮಂಡ್ ಕ್ರಾಸ್.
ಇಷ್ಟೆಲ್ಲ ಹ್ಯಾಕ್ ಹಿರೋಗೆ ಇನ್ನೊಬ್ಬ ವಿಲನ್ ಎಂ.ಡಿ. ಹುಟ್ಟಿಕೊಂಡು ಚಿತ್ರಕತೆ ತಿರುವು ಪಡೆಯುತ್ತದೆ. ಹೀರೋಗಿಂತ ಸ್ಟಂಟ್ ಗಳಲ್ಲೂ
ಸ್ಟ್ರಾಂಗ್. ಮಾರಾಮಾರಿಯಲ್ಲಿ ಹೀರೋಗೆ ಚಳ್ಳೆಹಣ್ಣು ತಿನ್ನಸುತ್ತಾನೆ.
ಹ್ಯಾಕ್ ಮಾಡುವಲ್ಲಿ ಹೀರೋಗಿಂತ ಚಾಂಪಿಯನ್ ಆಗಿರುವ ಎಂ.ಡಿ.ಗೆ
ಮಗ್ಗುಲುಮುರಿಯುವ ಪ್ರಯತ್ನಗಳು ವಿಫಲವಾಗಿ ಮಯೂರ ಗುಂಪಿಗೆ
ಹತಾಶೆಯಾಗುತ್ತಿರುತ್ತದೆ.
ಒಟ್ಟಿನಲ್ಲಿ ಡಿಜಿಟಲ್ ಜಗತ್ತಿನ ನಿರೂಪಣೆಯಲ್ಲಿ
ಘಟನೆಗಳನ್ನ ಹೆಣೆದು ಪ್ರತೀ ನಿಮಿಷಕ್ಕೂ ಕುತೂಹಲ ಕಟ್ಟಿಕೊಡುತ್ತದೆ ಡೈಮಂಡ್ ಕ್ರಾಸ್.
ಒಂದೂ ಹಾಡಿಲ್ಲದೆ
ಸಾಗುವ ಕತೆಯಲ್ಲಿ ನಾಯಕಿ ಇದ್ದಾಳೆ ( ರೂಪಿಕಾ). ಆದರೆ ಹಾಡು ಬೇಕಂತ ಅನ್ನಿಸುವುದಿಲ್ಲ.
ಇಡೀ ಸಿನಿಮಾದ ಜೀವಾಳ ಹಿನ್ನೆಲೆ ಸಂಗೀತ ( ಅನೀಶ್ ಚೆರಿಯನ್).
