B. Y. Raghavendra ಶಿವಮೊಗ್ಗ ನಗರದ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ
ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ
ಪತ್ರಿಕಾ ಭವನದಲ್ಲಿ
ಪತ್ರಿಕಾ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿ ವೈ ರಾಘವೇಂದ್ರ ಅವರು ನೆರವೇರಿಸಿದರು.
ನಂತರದಲ್ಲಿ ಮಾತನಾಡಿದ ಅವರು,
ಆಧುನಿಕ ಭರಾಟೆಯಲ್ಲಿ ಪತ್ರಿಕೋದ್ಯಮದಲ್ಲಿ ಅನೇಕ ಪ್ರಯೋಗಾತ್ಮಕ ಕೆಲಸಗಳು
ನಡೆಯುತ್ತಿವೆ. ಆಧುನಿಕತೆಗೆ ತಕ್ಕಂತ ಪತ್ರಕರ್ತರು
ಹೊಸ ಜಗತ್ತಿಗೆ, ಹೊಸ ಆಯಾಮಗಳಿಗೆ ತೆರೆದು
ಕೊಳ್ಳಬೇಕು. ಪತ್ರಿಕೆಗಳು ವಿರೋಧ ಪಕ್ಷಗಳಂತೆ
ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮದಲ್ಲಿ ಕೇವಲ ಸುದ್ದಿಗಳು ಮಾತ್ರ ಇರುವು
ದಿಲ್ಲ. ಜೀವನಕ್ಕೆ ಬೇಕಾದ ಎಲ್ಲ ವಿಷಯಗಳೂ
ಇರುತ್ತವೆ. ಪತ್ರಿಕೆಗಳಲ್ಲಿ ಬರುವ ಅ೦ಕಣಗಳ
ಮೂಲಕ ನಮ್ಮ ಬದುಕನ್ನೇ ತಿದ್ದಿಕೊಳ್ಳಬಹುದಾಗಿದೆ.
ಪತ್ರಕರ್ತರು ಜಾಗೃತರಾಗಬೇಕು. ಮೌಲ್ಯಗಳನ್ನು
ಉಳಿಸಿಕೊಳ್ಳಬೇಕು. ಮುಖ್ಯವಾಗಿ ಅಧ್ಯಯನ
ಕೀಲರಾಗಿರಬೇಕು ಎಂದರು.
B. Y. Raghavendra ಶಿವಮೊಗ್ಗ
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ,
ಪತ್ರಕರ್ತರು ಒತ್ತಡಗಳ ನಡುವೆಕೆಲಸ ಮಾಡುತ್ತಾರೆ.
ಪತ್ರಿಕಾ ದಿನಾಚರಣೆ ಎಂಬುದು ಗೌರವವನ್ನು
ಹೆಚ್ಚಿಸುವಂಥದ್ದಾಗಿದೆ. ಅದರಲ್ಲೂ ಸಾಧಕರನ್ನು
ಗುರುತಿಸಿ ಸನ್ಮಾನ ಮಾಡುವುದು ಬಹಳ ಮುಖ್ಯ
ವಾಗಿದೆ. ಪತ್ರಕರ್ತರು ಸಂಕಷ್ಟಗಳಲ್ಲಿದ್ದಾರೆ.
ಪಾಲಿಕೆ ವತಿಯಿ೦ದಲೂ ಪತ್ರಕರ್ತರ ಕ್ಷೇಮಾಭಿವೃದ್ಧಿ
ಗಾಗಿ ಹಣವನ್ನು ತೆಗೆದಿರಿಸಲಾಗಿದೆ. ಇದರ ಸದು
ಪಯೋಗವನ್ನು ಪತ್ರಕರ್ತರು ಪಡೆದುಕೊಳ್ಳಬೇಕು.
ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸಿ.ಎಸ್. ಷಡಾಕ್ಷರಿ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.