Sri Vidyalakshmi Bhajanamandali Shivamogga ಅಧಿಕ ಶ್ರಾವಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅಧಿಕ ಪುಣ್ಯವನ್ನು ಸಂಪಾದಿಸಿಕೊಳ್ಳುತ್ತೇವೆ. ನಮ್ಮ ಕಾಯಕ ಶ್ರದ್ದೆಯಿಂದ ಕೂಡಿರಬೇಕು ಎಂದು ಶ್ರೀ ವಿದ್ಯಾಲಕ್ಷ್ಮೀ ಭಜನಾಮಂಡಳಿಯ ಅಧ್ಯಕ್ಷೆ ವಿದೂಷಿ ರಾಜಲಕ್ಷ್ಮಿ ಇಂದುಶೇಖರ್ ಅವರು ಹೇಳಿದರು.
ಶಿವಮೊಗ್ಗದ ವಿನೋಬನಗರದಲ್ಲಿ ಸಿ.ವಿ.ವಿಜಯೇಂದ್ರ ಅವರ ಮನೆಯಲ್ಲಿ ಭಜನಾ ಮಂಡಳಿಯಿoದ ಆಯೋಜಿಸಿದ್ದ ಅಧಿಕ ಶ್ರಾವಣ ಮಾಸದ ಭಜನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶ್ರಾವಣ ಮಾಸ ಎನ್ನುವುದು ಪ್ರಾಕೃತಿಕವಾಗಿ ಎಷ್ಟು ಬದಲಾವಣೆಗಳನ್ನು ತರುತ್ತದೆಯೋ ಧಾರ್ಮಿಕವಾಗಿಯೂ ಅಷ್ಟೇ ಪುಣ್ಯದ ಕಾಲವಾಗಿದೆ. ಅದರಲ್ಲಿಯೂ ಅಧಿಕ ಶ್ರಾವಣದಲ್ಲಿ ಹೆಚ್ಚಿನ ದಾನಧರ್ಮ, ಧಾರ್ಮಿಕ ಕಾರ್ಯಕ್ರಮಗಳು ನಡೆಸುವುದರಿಂದ ಪುಣ್ಯವನ್ನು ಸಂಪಾದಿಸುತ್ತೇವೆ. ಭಕ್ತಿ ಮತ್ತು ಸಂಗೀತ ಭಗವಂತನ ಸಾಕ್ಷಾತ್ಕಾರಕ್ಕೆ ಸುಲಭ ಮಾರ್ಗ ಎಂದರು.
ಸoಸ್ಥೆಯ ಜ್ಯೋತಿ ರಾವ್ ಮಾತನಾಡಿ, ಅಧಿಕ ಶ್ರಾವಣದ ಅಂಗವಾಗಿ ನಾವು ವಿವಿಧ ಮನೆಗಳಲ್ಲಿ ಭಜನೆಯನ್ನು ನಡೆಸುವ ಮೂಲಕ ಕಾರ್ಯಕ್ರಮವನ್ನು ನಡೆಸುತ್ತೇವೆ. ನಮ್ಮ ಆಚರಣೆ ಮತ್ತು ಆರಾಧನೆಗಳ ಮಹತ್ವವನ್ನು ತಿಳಿದುಕೊಂಡು ಅನುಸರಿಸಿದರೆ ಅದಕ್ಕೆ ಇನ್ನಷ್ಟು ಮಹತ್ವ ಬರುತ್ತದೆ.ಯುವ ಜನರಿಗೆ ಭಜನೆಯಂತಹ ಪ್ರಾಕಾರವನ್ನು ಪರಿಚಯಿಸುವ ಅಗತ್ಯತೆ ಇದೆ ಎಂದರು.
Sri Vidyalakshmi Bhajanamandali Shivamogga ಈ ಸಂದರ್ಭದಲ್ಲಿ ಸಂಸ್ಥೆಯ ಗಿರಿಜಮ್ಮ, ಜಯಲಕ್ಷ್ಮಿ ಗಾಯತ್ರಿ, ವಸಂತ, ವಾಣಿ ಮದನಮೋಹನ್ ಇತರರು ಹಾಜರಿದ್ದರು.