Karthikere Gram Panchayat ಚಿಕ್ಕಮಗಳೂರು, ತಾಲ್ಲೂಕಿನ ಕರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಶಾರಾಣಿ ಹಾಗೂ ಉಪಾಧ್ಯಕ್ಷರಾಗಿ ಕೆ.ಆರ್.ಗಣೇಶ್‌ರಾಜ್ ಅರಸ್ ಅವರು ಅವಿರೋಧವಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಶಾರಾಣಿ ಮತ್ತು ಗಣೇಶ್ ಹೊರತು ಪಡಿಸಿ ಬರ‍್ಯಾವ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಚರಣ್‌ರಾಜ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಮುಖಂಡ ಕೋಟೆ ರಂಗನಾಥ್ ಸಿಕ್ಕಿರುವಂತಹ ಅವಕಾಶದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು ಗ್ರಾಮಸ್ಥರ ಪರವಾಗಿ ಕೆಲಸ ಮಾಡಬೇಕು. ಜಾತೀ ತಾರತಮ್ಯವೆಸಗದೇ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸರಿಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷೆ ಆಶಾರಾಣಿ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮಗಳಿಗೆ ಮೂಲ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು. ರಸ್ತೆ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ಎಲ್ಲಾ ಸಹಕಾರದೊಂದಿಗೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಗಣೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ಉನ್ನತ ಸ್ಥಾನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಯ್ಕೆಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
Karthikere Gram Panchayat ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಯತೀಶ್, ಸದಸ್ಯರುಗಳಾದ ಆರ್.ಎಲ್.ಭಾಗ್ಯ, ನಾಗೇಶ್, ಚಂದ್ರಶೇಖರ್‌ರಾಜ್ ಅರಸ್, ಟಿ.ಹೆಚ್.ಹೇಮಾವತಿ, ಬಿ.ಮೋಹನ್, ಸಿ.ಎಲ್.ಸಿದ್ದರಾಮೇಶ್ವರ, ಪಾರ್ವತಮ್ಮ, ಪುಟ್ಟಸ್ವಾಮಿಶೆಟ್ಟಿ, ರೇಣುಕಾ, ರೇಖಾ, ಕೆ.ಪಿ.ಸೌಮ್ಯ, ಲೋಕೇಶ್, ಪಿಡಿಓ ಪ್ರಕಾಶ್, ಕಾರ್ಯದರ್ಶಿ ಜಯರಾಮ್ ಹಾಗೂ ಗ್ರಾಮಸ್ಥರು ಹಾಜರಿದ್ದರು.