National Education Policy ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಜೊತೆಗೆ ಶಿಕ್ಷಣವನ್ನು ಸಾರ್ವತ್ರಿ ಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020ರಲ್ಲಿ ಪರಿಚಯಿಸಿದೆ.
ಎನ್.ಇ.ಪಿ ಅನುಷ್ಟಾನಕ್ಕೆ ತಂದ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಡಾ. ಹೆ.ಟಿ ಕೃಷ್ಣಮೂರ್ತಿ ನಿವೃತ್ತ ಪ್ರಾಂಶುಪಾಲರು, ಡಿ.ವಿ.ಎಸ್ ಕಾಲೇಜು, ಶಿವಮೊಗ್ಗ ತಿಳಿಸಿದ್ದಾರೆ.
ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗ ಕಾರ‍್ಯಾಲಯವು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020; ಮೂರು ವರುಷ ಗಳ ಸಾಧನೆ’ ಕುರಿತ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇದೇ ಜುಲೈ 29 ರಂದು ಎನ್.ಇ.ಪಿ ಜಾರಿಗೊಂಡು ಮೂರು ವರುಷಗಳು ಪರ್ಯಾಣ ಗೊಳ್ಳುತ್ತವೆ. ವಿದ್ಯಾರ್ಥಿ ಗಳ ಚಿಂತನೆ ಹಾಗೂ ಸೃಜನಶೀಲ ಸಾಮಾರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೀತಿ ಮಹತ್ವದ್ದಾಗಿದೆ. ಕೌಶಲ್ಯಾಧರಿತ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಎನ್.ಇ.ಪಿ ಯಲ್ಲಿ ಒತ್ತು ನೀಡಲಾಗಿದೆ. ಬಡ ಜನರಿಗೂ ಉತ್ತಮ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಈ ನೀತಿ ಕ್ರಾಂತಿಕಾರಿಯಾಗಿದೆ ಎಂದು ಅವರು ಹೇಳಿದರು.
ಕ್ಷೇತ್ರ ಪ್ರಚಾರ ಅಧಿಕಾರಿ ಶ್ರೀಮತಿ .ಅಕ್ಷತಾ ಸಿ.ಹೆಚ್ ಮಾತನಾಡಿ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವಲ್ಲಿ ಎನ್.ಇ.ಪಿ ಪ್ರಧಾನ ಪಾತ್ರ ವಹಿಸಿದೆ ಎಂದರು.
National Education Policy ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ರಾಜಕುಮಾರ, ಯು. ಎಸ್, ಆಂಗ್ಲ ಪ್ರಾಧ್ಯಾಪಕ ಡಾ. ವಿ. ನವೀನ್ , ವಾಣಿಜ್ಯ ವಿಭಾಗದ ಡಾ. ವಾಸಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.