Saturday, November 23, 2024
Saturday, November 23, 2024

Kuvempu University ಅಸಂಘಟಿತ ಕಾರ್ಮಿಕರ ಬಗ್ಗೆ ಸಂವೇದನಾ ಸಾಹಿತ್ಯ ಸ್ಥಿತಿ ಬದಲಾಗಬೇಕಿದೆ -ಪ್ರೊ.ಬಿ.ಕೆ.ರವಿ

Date:

Kuvempu University ನಗರಗಳನ್ನು ಶುಚಿಗೊಳಿಸಿ ನಮ್ಮ ಬದುಕನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು, ಆಹಾರ ಉತ್ಪಾದಿಸುವ ಕೃಷಿಕೂಲಿಕಾರರು, ಅಂದಗಾಣಿಸುವಂತಹ ಉಡುಪುಗಳನ್ನು ತಯಾರಿಸುವ ಗಾರ್ಮೆಂಟ್ಸ್ ನೌಕರರಂತಹ ಹಲವು ಅಸಂಘಟಿತ, ಅದೃಶ್ಯ ಕಾರ್ಮಿಕರ ಬದುಕಿನ ಕಡೆಗೆ ನಮ್ಮ ಸಮಾಜದಲ್ಲಿರುವ ನಿರ್ಲಕ್ಷ್ಯ ಮತ್ತು ಸಂವೇದನಾರಹಿತ ಮಾನಸಿಕತೆಗಳು ಬದಲಾಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಕೆ. ರವಿ ಅಭಿಪ್ರಾಯಪಟ್ಟರು.

ಡಾ. ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಕುವೆಂಪು ವಿವಿಯ ಡಾ. ಬಾಬುಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಮಾಜಕಾರ್ಯ ವಿಭಾಗಗಳು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಜಂಟಿಯಾಗಿ ‘ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳು ಮತ್ತು ಬಲವರ್ಧನೆಯ ಮಾರ್ಗಗಳು’ ವಿಷಯ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಬದುಕಿನ ಮೂಲಭೂತ ಅವಶ್ಯಕತೆಗಳಾದ ಆಹಾರ, ಆರೋಗ್ಯ-ಸ್ವಚ್ಚತೆ, ಸೂರುಗಳನ್ನು ನಿರ್ಮಿಸಲು ಶ್ರಮಿಸುವ ಲಕ್ಷಾಂತರ ಕಾರ್ಮಿಕರು ಸ್ವತಃ ಮೂಲಭೂತ ಸೌಕರ್ಯಗಳಿಲ್ಲದೇ ನರಳಾಟದ ಬದುಕು ನಡೆಸುತ್ತಿರುವುದನ್ನು ನೋಡದೇ ವ್ಯವಸ್ಥೆ ನಿರ್ಲಕ್ಷಿಸುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ರೈತರು, ಪೆಟ್ರೋಲ್ ಬಂಕ್ ನೌಕರರು, ಡೆಲಿವರಿ ಬಾಯ್‌ಗಳ ವೃತ್ತಿಗಳನ್ನು ಅಪಾರ ಘನತೆಯಿಂದ ನೋಡಲಾಗುತ್ತದೆ. ಭಾರತದಲ್ಲಿರುವ ಸಂವೇದನಾರಹಿತ ಮನಸ್ಥಿತಿಯನ್ನು ಸರಿಪಡಿಸಲು ಕೇವಲ ನೆಪಮಾತ್ರದ ಯೋಜನೆಗಳ ಬದಲಾಗಿ ಸಮಾಜದಲ್ಲಿ ಪ್ರತಿಯೊಬ್ಬರ ದೃಷ್ಟಿಕೋನದಲ್ಲಿ, ಅಂತಃಕರಣದಲ್ಲಿ ಬದಲಾವಣೆ ಆಗಬೇಕಿದೆ ಎಂದರು.
ವಿವಿಧ ಸ್ತರಗಳಲ್ಲಿ ಅದೃಶ್ಯವಾಗಿ, ಮೈಮುರಿದುಕೊಂಡು ಕೆಲಸ ಮಾಡಿ ಬಡಾವಣೆಗಳನ್ನು, ನಗರಗಳನ್ನು, ಉಳ್ಳವರ ಅವಶ್ಯಕತೆಗಳು-ಸೌಧಗಳನ್ನು ನಿರ್ಮಿಸಲು ಶ್ರಮಿಸುತ್ತಿರುವ ಕಾರ್ಮಿಕರ ಬದುಕು-ಬವಣೆಗಳೆಡೆಗೆ ಮಾಧ್ಯಮಗಳು, ಸಂಶೋಧಕರು ಸದಾ ಸೂಕ್ಷ್ಮ ಮನಸ್ಥಿತಿ ನೋಡುತ್ತಿರಬೇಕು. ಜನರಿಗೆ, ಆಳುವವರಿಗೆ, ಸರ್ಕಾರಗಳಿಗೆ ಶೋಷಿತರ ದನಿಯನ್ನು ತಲುಪಿಸಿ ಸಾಮಾಜಿಕ ನ್ಯಾಯ, ಕಾರ್ಮಿಕರ ಬದುಕುಗಳ ಬಲವರ್ಧನೆ ಹಾಗೂ ಸಂವಿಧಾನದ ಅನುಷ್ಠಾನಕ್ಕೆ ಕೈಜೋಡಿಸಬೇಕು ಎಂದು ಸಲಹೆಯಿತ್ತರು.

ಕನ್ನಡ ಪ್ರಭ ದಿನಪತ್ರಿಕೆಯ ವಿಶೇಷ ವರದಿಗಾರ ಗೋಪಾಲ್ ಎಸ್ ಯಡಗೆರೆ ಅವರು ‘ಮಾಧ್ಯಮಗಳಲ್ಲಿ ಅಸಂಘಟಿತ ಕಾರ್ಮಿಕರ ಚಿತ್ರಣ’ ವಿಷಯದ ಕುರಿತು ಮಾತನಾಡಿ, ಪತ್ರಿಕೋದ್ಯಮದಲ್ಲಿರುವ ಸಾಮಾಜಿಕ ಜವಾಬ್ದಾರಿಯನ್ನು ಮಾನವೀಯ ಅಂತಃಕರಣದೊಂದಿಗೆ ಬಳಸಿದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನೋವುಗಳಿಗೆ, ಸಮಸ್ಯೆಗಳಿಗೆ ದಕ್ಷ ದನಿಯಾಗಬಹುದು, ಸುಧಾರಣೆ ತರಬಹುದು. ರಾಜಕೀಯ, ಅಪರಾಧ ವರದಿಗಳಿಗಿಂತ ಒಳಿತನ್ನು ಗುರುತಿಸುವ, ಶೋಷಿತರಲ್ಲಿರುವ ಪ್ರತಿಭೆಗಳು, ಅವರ ಸಂಕಟ-ಅವಶ್ಯಕತೆಗಳ ಕುರಿತು ದನಿಯಾಗಿ ಜನರಲ್ಲಿ ಉತ್ತಮ ಸಂವೇದನೆಯನ್ನು ಮೂಡಿಸಬಹುದು. ಟಿಆರ್‌ಪಿ ಬದಲಾಗಿ ಜನರ ಒಳಿತಿಗಾಗಿ ಕೆಲಸ ಮಾಡುವಂತಹ ಮಾಧ್ಯಮಗಳನ್ನು, ಪತ್ರಕರ್ತರನ್ನು ಜನರು ಬೆಂಬಲಿಸಬೇಕು ಎಂದರು.

Kuvempu University ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಪ್ರೊ. ಗೀತಾ ಸಿ., ಡಾ. ಬಾಬುಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಎಂ. ಆರ್., ಸಮಾಜಕಾರ್ಯ ವಿಭಾಗಾಧ್ಯಕ್ಷ ಪ್ರೊ. ಪ್ರಶಾಂತ್ ನಾಯಕ್ ಜಿ., ಮಾತನಾಡಿದರು. ವಿವಿಧ ವಿಶ್ವವಿದ್ಯಾಲಯಗಳಿಂದ ಸಂಶೋಧನಾ ಪತ್ರಿಕೆಗಳನ್ನು ಪ್ರಸ್ತುತ ಪಡಿಸಲು ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾರ್ಥಿಗಳು ಆಗಮಿಸಿದ್ದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...