Rotary East Shivamogga ಮನುಷ್ಯ ಭೂಮಿಮೇಲೆ ಆರೋಗ್ಯದಿಂದ ಜೀವಿಸಲು ಉತ್ತಮ ಪರಿಸರಬೇಕು. ಪರಿಸರ, ಪ್ರಕೃತಿ ಚನ್ನಾಗಿಲ್ಲದಿದ್ದರೆ ಭೂಮಿ ಮೇಲೆ ಜೀವಿಸುವುದು ತುಂಬಾ ಕಷ್ಟವಾಗುತ್ತದೆ ರಂದು ಮಾಜಿ ಜಿಲ್ಲಾ ಗೌರ್ನರ್ ಜಿ.ವಿಜಯಕುಮಾರ್ ಅವರು ಹೇಳಿದರು.
ಶಿವಮೊಗ್ಗದ ಕೊಮ್ಮನಾಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಇಂಟರಾಕ್ಟ್ ಕ್ಲಬ್ ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಸಸಿಗಳನ್ನು ನೆಡುವ ಮೂಲಕ ಆಚರಿಸಿದರು.
ಪ್ರಕೃತಿಯಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದ ನಾವು ಇಂದು ಪ್ರಕೃತಿಯನ್ನು ಎಷ್ಟು ಸಾದ್ಯವೋ ಅಷ್ಟು ಕಲ್ಮಷ ಗೊಳಿಸುತ್ತಿದ್ದೇವೆ ಪ್ರತಿಯೊಬ್ಬರು ಸಸಿಯನ್ನು ನೆಡುವುದರ ಮೂಲಕ ಅವುಗಳ ಪಾಲನೆ ಪೋಷಣೆ ಮಾಡಬೇಕು ಎಂದರು.
ರೋಟರಿ ಮಾಜಿ ಅಧ್ಯಕ್ಷೆ ಸುಮತಿ ಕುಮಾರ್ ಸ್ವಾಮಿ ಮಾತನಾಡಿ , ಮರ ಗಿಡ ಪರಿಸರ ಸಂರಕ್ಷಣೆಯಿಂದ ಉತ್ತಮ ಆಮ್ಲಜನಕ ಪಡೆಯುವುದರ ಜೊತೆಗೆ ಆರೋಗ್ಯ ಸಹ ಚನ್ನಾಗಿರುತ್ತದೆ. ಪರಿಸರ ಪ್ರಜ್ಞೆಯನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು ಎಂದರು.
Rotary East Shivamogga ಈ ಸಂದರ್ಭದಲ್ಲಿ ಮಾಜಿ ಕಾರ್ಯದರ್ಶಿ ಕುಮಾರ ಸ್ವಾಮಿ, ಕಾರ್ಯದರ್ಶಿ ಕಿಶೋರ್, ಶಾಲಾ ಮಕ್ಕಳು ಉಪಸ್ಥಿತರಿದ್ದರು