Lions Club ಲಯನ್ಸ್ ಶಿರಾಳಕೊಪ್ಪ, ಲಯನ್ಸ್ ಕ್ಲಬ್ ತೊಗರ್ಸಿ ಮತ್ತು ಲಿಯೋ ಕ್ಲಬ್ ಶಿರಾಳಕೊಪ್ಪದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಿರಾಳಕೊಪ್ಪದ ಶ್ರೀ ವಾಸವಿ ಸಮುದಾಯ ಭವನ ನೆರವೇರಿತು.
ಪದವಿ ಪ್ರಧಾನ ಕಾರ್ಯಕ್ರಮವನ್ನು ನಿಕಟಪೂರ್ವ ಮಾಜಿ ಜಿಲ್ಲಾ ಗವರ್ನರ್ ಎಂ ಕೆ ಭಟ್ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಕೆಎಸ್ ವೇದಮೂರ್ತಿ ವಲಯ ಅಧ್ಯಕ್ಷ ಕೆ ಶಿವಾನಂದ್ ಮಾಜಿ ಜಿಲ್ಲಾ ಗವರ್ನರ್ ಎಚ್ ಎಸ್ ಮಂಜಪ್ಪ ಹಾಗೂ ಕ್ಲಬ್ ನ ಪದಾಧಿಕಾರಿಗಳು ಭಾಗವಹಿಸಿದ್ದರು.
ಪದಗ್ರಹಣಾಧಿಕಾರಿಗಳು ಮಾತನಾಡುತ್ತಾ ಲಯನ್ಸ್ ಕ್ಲಬ್ ಶಿರಾಳಕೊಪ್ಪದ ಸಾಧನೆಗಳನ್ನು ಸಮಾಜಮುಖಿ ಸೇವೆಯನ್ನು ಮತ್ತು ಅವರ ತಂಡದ ವಿಶೇಷತೆ ಶ್ಲಾಘಿಸಿದರು.
ಲಯನ್ಸ್ ಕ್ಲಬ್ ಶಿರಾಳಕೊಪ್ಪ ಎಲ್ಲಾ ವಿಭಾಗಗಳಲ್ಲಿ ಅವರದೇ ಆದ ವಿಶೇಷ ಕೊಡುಗೆಗಳನ್ನು ಲಯನ್ಸ್ ಇಂಟರ್ನ್ಯಾಷನಲ್ ಗೆ ನೀಡಿರುತ್ತಾರೆ. ಇದೊಂದು ಜಿಲ್ಲೆಯ ಅತ್ಯುತ್ತಮ ಮಾಡೆಲ್ ಕ್ಲಬ್ ಎಂದು ತಿಳಿಸಿದರು.
Lions Club ಕೆ ಕಣ್ಣನ್ ಹಾಗೂ ಕುಟುಂಬದವರ ಕೊಡುಗೆ ನಮ್ಮ ಅಂತರಾಷ್ಟ್ರೀಯ ಫೌಂಡೇಶನ್ ಗೆ ಅತ್ಯಂತ ಅಮೂಲ್ಯವಾದುದು ಎಂದು ಅಭಿನಂದಿಸಿದರು.
2023-24 ನೆ ಸಾಲಿನ ನೂತನ ಪದಾಧಿಕಾರಿಗಳಾಗಿ ಲಯನ್ಸ್ ಕ್ಲಬ್ ಶಿರಾಳಕೊಪ್ಪದ ಅಧ್ಯಕ್ಷರಾಗಿ ಶಿವಯೋಗಿ ಎಂ. ಕಾರ್ಯದರ್ಶಿಯಾಗಿ ಎಂ. ಆರ್ ಗಿರೀಶ್ ಖಜಾಂಚಿಯಾಗಿ ಹೆಚ್ಎಸ್ ಯೋಗಿರಾಜ್ ಲಯನ್ಸ್ ಕ್ಲಬ್ ತೊಗರ್ಸಿಯ ಅಧ್ಯಕ್ಷರಾಗಿ ಮುರಳಿಧರ್ ಕಾರ್ಯದರ್ಶಿಯಾಗಿ ಅರವಿಂದ್ ಖಜಾಂಚಿಯಾಗಿ ಕೃಷ್ಣಮೂರ್ತಿ ಹಾಗೂ ಲಿಯೋ ಅಧ್ಯಕ್ಷರಾಗಿ ನಿಶ್ಮಿತ ಕಾರ್ಯದರ್ಶಿಯಾಗಿ ಪ್ರಬಂಜನ್ ಖಜಾಂಚಿಯಾಗಿ ಮಿಥುನ್ ಅಧಿಕಾರ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಲಬ್ ವತಿಯಿಂದ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡಲಾಯಿತು.
ಪ್ರಮುಖವಾಗಿ ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ರೋಗಿ ಕುಟುಂಬಕ್ಕೆ 5000 ಆರ್ಥಿಕ ಸಹಾಯ ಮಾಡಲಾಯಿತು.
ಇತ್ತೀಚೆಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೇ ಎರಡನೇ ಮತ್ತು ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಡಾಕ್ಟರ್ ಮಹೇಶ್ ಹಿರಿಯ ವೈದ್ಯಾಧಿಕಾರಿಗಳು ಸರ್ಕಾರಿ ಆಯುರ್ವೇದ ಆಸ್ಪತ್ರೆ ಉದ್ರಿ ಇವರನ್ನು ಕ್ಲಬ್ ವತಿಯಿಂದ ಅವರ ವೈದ್ಯಕೀಯ ಸೇವೆ ಸಮಾಜ ಸೇವೆ ಹಾಗೂ ಪರಿಸರ ಕಾಳಜಿಯ ಸಾಧನೆಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಮಧುಮೇಹ ಕುರಿತಾದ ಮಾಹಿತಿಯ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಸ್ತನ್ಯಪಾನ ಜಾಗೃತಿ ಮೂಡಿಸುವ ಬಿತ್ತಿ ಪತ್ರಗಳನ್ನು ಸಹ ಬಿಡುಗಡೆ ಮಾಡಲಾಯಿತು ಇದಲ್ಲದೆ ಈ ವರ್ಷ ಲಯನ್ಸ್ ಕ್ಲಬ್ ವತಿಯಿಂದ ಒಂದರಿಂದ ಐದನೇ ತರಗತಿಯ ಸರ್ಕಾರಿ ಶಾಲಾ ಗ್ರಾಮಾಂತರ ಮಕ್ಕಳಿಗೆ ಸ್ವೆಟರ್ ಕೊಡುವ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಅದರ ಮಾದರಿಯನ್ನು ಕಾರ್ಯಕ್ರಮದಲ್ಲಿ ಅನಾವರಣ ಗೊಳಿಸಲಾಯಿತು.
ನಿರ್ಗಮಿತ ಲಯನ್ಸ್ ಕ್ಲಬ್ ಶಿರಾಳಕೊಪ್ಪದ ಅಧ್ಯಕ್ಷರಾದ ಅನ್ನಪೂರ್ಣ ನೀಲಕಂಠರವರು ಸ್ವಾಗತಿಸಿದರು.
ಶ್ರುತಿ ಗಿರೀಶ್ ರವರು ಸಂಕ್ಷಿಪ್ತವಾಗಿ ಕ್ಲಬ್ ನ ಸೇವ ಕಾರ್ಯಕ್ರಮಗಳ ವರದಿ ವಾಚಿಸಿದರು. ಆಶಾ ಮಂಜುನಾಥ್ ರವರು ಪ್ರಾರ್ಥಿಸಿದರು. ಎಮ್ ಆರ್ ಗಿರೀಶ್ ರವರು ವಂದಿಸಿದರು. ಲತಾ ಯೋಗಿರಾಜ್ ಕಾರ್ಯಕ್ರಮ ನಿರೂಪಿಸಿದರು.