Friday, November 22, 2024
Friday, November 22, 2024

Karangiri Gramabharati Trust ಮಹತ್ವ ಕಳೆದು ಕೊಂಡ ಯುವಜನ ಮೇಳ:ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕೊರತೆ- ಶೀಲಾ ರಾಮನ್

Date:

Karangiri Gramabharati Trust ಇಂದಿನ ದಿನದಲ್ಲಿ ಯುವಜನ ಮೇಳಗಳು ಮಹತ್ವ ಕಳೆದುಕೊಂಡ ನಂತರ ಗ್ರಾಮೀಣ ಪ್ರತಿಭೆಗಳ
ಅರಳುವಿಕೆಗೆ ಅವಕಾಶವಿಲ್ಲವಾಗಿದೆ.

ಪ್ರತಿಭಾವಂತರಿಗೆ ಹೆಚ್ಚಿನ ವೇದಿಕೆ ಕಲ್ಪಿಸುವಂತಾಗಬೇಕೆಂದು ನಿವೃತ್ತ ಪ್ರಾಚಾರ್ಯ,
ಸಂಗೀತ ವಿದುಷಿ ಶ್ರೀಮತಿ ಶೀಲಾರಾಮನ್ ಹೇಳಿದರು.

ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ನಡೆದ ಸಂಸ್ಕೃತಿ ಉತ್ಸವ 2023 ನ್ನು ಉದ್ಘಾಟಿಸಿ ಅವರು ಮಾತನಾಡಿದರು.

Karangiri Gramabharati Trust ಶಾಲೆಗಳಲ್ಲಿ ಹಿಂದೆ ನಡಯುತ್ತಿದ್ದಂತೆ ವಾರ್ಷಿಕೋತ್ಸವವೂ ಇಲ್ಲ. ಊರಿನ ಯಾವುದೋ ಯುವಕ, ಯು ವತಿಮಂಡಳಿಗಳ ವಾರ್ಷಿಕೋತ್ಸವವೂ ನಡೆಯುತ್ತಿಲ್ಲ. ಇದರಿಂದಾಗಿ ಸಾಂಸ್ಕೃತಿಕ ಲೋಕಕ್ಕೆ ಧಕ್ಕೆ ಉಂಟಾಗಿದೆ. ಈ ನಿಟ್ಟಿನಲ್ಲಿ
ಗ್ರಾಮಭಾರತಿ ಟ್ರಸ್ಟ್ ನಡೆಸಿದ ಸಾಂಸ್ಕೃತಿಕ ಉತ್ಸವ ಸಮಯೋಚಿತವಾಗಿದ್ದು ಶ್ಲಾಘನೀಯ.

ಸುರಿವ ರಣಮಳೆಯಲ್ಲೂ 250ಕ್ಕೂ ಹೆಚ್ಚು ಜನ ಸ್ಪರ್ಧಾಳುಗಳು ಹಾಗೂ ಅಷ್ಟೇ ಪ್ರಮಾಣದ ಪ್ರೇಕ್ಷಕರು ಭಾಗವಹಿಸಿದ್ದು ಜನರಲ್ಲಿರುವ ಹಸಿವನ್ನು ವ್ಯಕ್ತಪಡಿಸುತ್ತದೆ
ಎಂದರು.

ಗಾಯಕ ಸುರೇಶ್ ಕುಮಾರ್, ನಿವೃತ್ತ ಸೈನಿಕ ಕೆ. ಪಿ. ಕೃಷ್ಣಮೂರ್ತಿ, ಕಲಾವಿದ ಮತ್ತಿಮನೆ ರಾಮಚಂದ್ರ, ಸಂಗೀತ
ಶಿಕ್ಷಕಿ ಗಾಯತ್ರಿ ನಾಗರಾಜ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ನಿವೃತ್ತ ಉಪನ್ಯಾಸಕ ಗಣೇಶ್ ಐತಾಳ್, ಗ್ರಾಮಭಾರತಿ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ಕಾರ್ಯದರ್ಶಿ ಹನಿಯ ರವಿ ಮತ್ತಿತರಿದ್ದರು.
ಬೆಳಿಗ್ಗೆಯಿಂದ ಸಂಜೆವರೆಗೆ ಎರಡು ವೇದಿಕೆಗಳಲ್ಲಿ ಭಾವಗೀತೆ, ಜಾನಪದ ಗೀತೆ ಕರ್ನಾಟಕ ಶಾಸ್ತ್ರೀಯ ಸಂಗೀತ,
ಸಮೂಹ ಗಾಯನ, ಭಜನೆ, ಜಾನಪದ ನೃತ್ಯ ಕೋಲಾಟ ಮುಂತಾದ ಕಾರ್ಯಕ್ರಮಗಳು ಜನಮನ ರಂಜಿಸಿದವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...