Dandavathi River ಸೊರಬ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಮೈದುಂಬಿದ ದಂಡಾವತಿ ನದಿಗೆ ಬಾಗಿನ ಸಮರ್ಪಿಸಲಾಯಿತು.
ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗಂಗೇ ಪೂಜೆ ಸಲ್ಲಿಸಿ, ನಂತರ ನದಿಗೆ ಬಾಗಿನ ಸಮರ್ಪಿಸಲಾಯಿತು.
ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ದಂಡಾವತಿ ನದಿಗೆ ನೀರು ಬಂದಿರುವುದರಿಂದ ರೈತರಲ್ಲಿ ಸಂತಸ ತಂದಿದೆ.
ಮಳೆಯಾಗದೇ ರೈತರಲ್ಲಿ ಚಿಂತೆ ಮೂಡಿತ್ತು. ಇದೀಗ ದಂಡಾವತಿ ನದಿ ಮೈದುಂಬಿದೆ. ಯಾವುದೇ ಅನಾಹುತ ಸೃಷ್ಟಿಯಾಗದಿರಲಿ. ರೈತರಿಗೆ ಉತ್ತಮ ಬೆಳೆ ಕೈಸೇರಲಿ, ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಲಭಿಸಲಿ ಎಂದು ಪ್ರಾರ್ಥಿಸಿ ಸಮಿತಿಯಿಂದ ಬಾಗಿನ ಅರ್ಪಿಸಲಾಗುತ್ತಿದೆ ಎಂದರು.
ಗೋ ಸಂರಕ್ಷಣಾ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ, ತಾಲೂಕಿನಲ್ಲಿ ಹರಿದು ಹೋಗಿರುವ ಎರಡು ಪ್ರಮುಖ ನದಿಗಳಲ್ಲಿ ಒಂದಾದ ದಂಡಾವತಿ ನದಿಯು ತುಂಬಿ ಹರಿಯುತ್ತಿರುವುದು ಸಂತಸದ ವಿಷಯ. ಭಾರತೀಯ ಸಂಸ್ಕೃತಿಯಲ್ಲಿ ಬಾಗಿನ ಅರ್ಪಣೆಗೆ ವಿಶೇಷವಾದ ಮಹತ್ವವಿದೆ. ಇದನ್ನು ಪದ್ದತಿಯಾಗಿ ರೂಢಿಸಿಕೊಂಡು ಬರಲಾಗಿದೆ. ಜನತೆಗೆ ಒಳಿತಾಗಲಿ ಎಂದರು.
Dandavathi River ಈ ಸಂದರ್ಭದಲ್ಲಿ ಗೋ ಸಂರಕ್ಷಣಾ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ, ಸಹ ಕಾರ್ಯದರ್ಶಿ ಶರತ್ ಸ್ವಾಮಿ, ಪ್ರಮುಖರಾದ ಬಂಗಾರಪ್ಪ ಶೇಟ್, ಗುರುಶಾಂತಪ್ಪ ಗೌಡ, ಸುಮನಾ ಚಿದಾನಂದ ಗೌಡ, ಪುಷ್ಪ ಸಿದ್ದಲಿಂಗೇಶ್ವರ ಗುತ್ತಿ, ಪ್ರವೀಣ್ ಕುಮಾರ್ ಸೇರಿದಂತೆ ಇತರರಿದ್ದರು.