Uttaradi Math ಆಯುರಾತ್ಮ ಆಯುರ್ವೇದ ತಪಾಸಣಾ ಮತ್ತು ಉಚಿತ ಚಿಕಿತ್ಸಾ ಶಿಬಿರಕ್ಕೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಭಾನುವಾರ ಚಾಲನೆ ನೀಡಿದರು.
ಚಾತುರ್ಮಾಸ್ಯ ಕಾಲದ ಪ್ರತೀ ಭಾನುವಾರದಂದು ಈ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಉದ್ಘಾಟನೆಯ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಶರೀರವನ್ನು ನಾವು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳಬೇಕು. ಆಗ ಮಾತ್ರ ಸಾಧನ ಮಾರ್ಗದಲ್ಲಿ ಸಾಗಲು ಸಾಧ್ಯ. ಇಂದಿನ ನಮ್ಮ ಪಾಶ್ಚಾತ್ಯ ಅನುಕರಣೀಯ ಜೀವನ ಶೈಲಿ ಅನೇಕ ಒತ್ತಡಕ್ಕೆ ಕಾರಣವಾಗುತ್ತಿದೆ. ಯೋಗ, ಪ್ರಾಣಾಯಾಮವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿಯ ನವರತ್ನ ಶ್ರೀನಿವಾಸಾಚಾರ್ಯ ಮಾತನಾಡಿ, ಶ್ರೀಪಾದಂಗಳವರ ಆಜ್ಞಾನುಸಾರ ಈ 80 ದಿನಗಳ ಅವಧಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನೂ ನಡೆಸುತ್ತಿದ್ದೆವೆ ಎಂದರು.
ನಂತರ ಭಾಗವಹಿಸಿದ್ದ ಅನೇಕ ಭಕ್ತರು ಇದರ ಪ್ರಯೋಜನ ಪಡೆದರು. ಬಿಪಿ, ಶುಗರ್ ತಪಾಸಣೆ ನಡೆಸಲಾಯಿತು.
ಸ್ತ್ರೀ ಆರೋಗ್ಯ ಸಮಸ್ಯೆಯ ಕುರಿತು ಅನೇಕ ಮಹಿಳೆಯರು ಸಲಹೆ ಪಡೆದರು. ಇದೇ ವೇಳೆ ಅಗತ್ಯ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.
ವೈದ್ಯರಾದ ಬಿಜಾಪುರದ ಡಾ. ಲೋಕನಾಥ ಅವಧಾನಿ, ಆಲ್ಮೇಲ್‌ನ ಡಾ. ಹರೀಶ್ ದೇಶಪಾಂಡೆ, ಡಾ. ಸಂಜನಾ ದೇಶಪಾಂಡೆ, ಯಾದಗಿರಿಯ ಡಾ. ಪ್ರಸಾದ ಕುಲಕರ್ಣಿ, ಗುರುಮಿಠಕಲ್‌ನ ಡಾ. ಅಶ್ವತ್ಥ್ ಮಠ್ ತಪಾಸಣೆ ನಡೆಸಿದರು.
Uttaradi Math ಎಎಲ್‌ಎನ್ ರಾವ್ ಮೆಮೋರಿಯಲ್ ಆಯುರ್ವೇದ ಕಾಲೇಜಿನ ಕೊನೆಯ ವರ್ಷದ ವಿದ್ಯಾರ್ಥಿನಿಯರಾದ ಸಂಜನಾ ರಾವ್, ಸ್ನೇಹಾ, ಮಧುರಾ ಹಾಜರಿದ್ದರು.