Saturday, September 28, 2024
Saturday, September 28, 2024

Kargil Vijay Diwas ಚಿಕ್ಕಮಗಳೂರಿನಲ್ಲಿ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ವಿಶೇಷ ಕಾರ್ಯಕ್ರಮ

Date:

Kargil Vijay Diwas ಕಾರ್ಗಿಲ್ ವಿಜಯದ ದಿನದಂದು ನಗರದಲ್ಲಿ ಸುಮಾರು ೧ ಕಿ.ಮಿ ಉದ್ದದ ತ್ರಿವರ್ಣ ಧ್ವಜದ ಸಾಂಕೇತಿಕ ಪ್ರತಿಕೃತಿಯನ್ನು ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕರಿಗೆ ಹಾಗೂ ಯುವ ಪೀಳಿಗೆಗೆ ಕಾರ್ಗಿಲ್ ವಿಜಯದ ದಿನದ ಅರಿವು ಮೂಡಿಸಲಾಗುವುದು ಮತ್ತು ಶಾಲಾಕಾಲೇಜಿನ ಮಕ್ಕಳು ಸೇರಿದಂತೆ ಎಲ್ಲರಿಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಅವರನ್ನು ಹುರಿದುಂಬಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸ್ವಸ್ಥ ಭೂಮಿ ಸಂಸ್ಥಾನದ ಸಂಸ್ಥಾಪಕರಾದ ಅನಿಲ್ ಆನಂದ್ ತಿಳಿಸಿದರು.

ಚಿಕ್ಕಮಗಳೂರು ನಗರದ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ಅವರು ಭೂಮಿಕ ಟಿ.ವಿ ಹಾಗೂ ಕಲ್ಯುಗ್ ಇವೆಂಟ್ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಜುಲೈ 26 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಪೂರ್ವದಲ್ಲಿ ಉದ್ಘಾಟನೆಯನ್ನು ನಗರದ ಹನುಮಂತಪ್ಪ ವೃತ್ತದಲ್ಲಿ ನೆರವೇರಿಸಿ ಎಂಜಿ ರಸ್ತೆಯ ಮಾರ್ಗವಾಗಿ ಕುವೆಂಪು ಕಲಾಮಂದಿರದವರೆಗೂ ಸುಮರು 2 ಸಾವಿರ ಜನರ ಸಹಾಯದಿಂದ 1 ಕಿಲೋಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಮೆರವಣಿಗೆ ಮಾಡುವ ಮೂಲಕ ಕಾರ್ಗಿಲ್ ವಿಯಜ ದಿನದ ಅರಿವು ಮೂಡಿಸಲಾಗುವುದು ಮತ್ತು ವಿಜಯದ ಸಂಕೇತವಾಗಿ ನಗರದ ವಿವಿದೆಡೆ ಗಿಡ ನೆಡಲಾಗುವುದು ಎಂದರು.

ಕಲ್ಯುಗ್ ಇವೆಂಟ್ಸ್ನ ಮುಖ್ಯಸ್ಥರಾಗಿರುವ ದೀಪಕ್ ಶಾಸ್ತ ಅವರು ಮಾತನಾಡಿ ಕಾರ್ಗಿಲ್‌ಯುದ್ದದಲ್ಲಿ ಭಾಗವಹಿಸಿದ ಯೋಧರಾದ ಪ್ರಕಾಶ್, ಶಂಕರ್, ಪ್ರದೀಪ್, ಲೋಕೇಶಯ್ಯ, ಸಲೀಂ ಹಾಗೂ ಡಿಸೋಜಾ ಅವರನ್ನು ಸನ್ಮಾನಿಸಲಾಗುವುದು, ಪತ್ರಿಕೋದ್ಯಮದಲ್ಲಿ ಪ್ರಸಕ್ತ ಸಾಲಿನಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಜಿಲ್ಲೆಯ ಪತ್ರಕರ್ತರಿಗೆ ಹಾಗೂ ಹಿರಿಯ ಮಾಧ್ಯಮ ಪ್ರತಿನಿದಧಿಗಳಿಗೆ ಗೌರವಿಸಲಾಗುವುದು ಮತ್ತು ಅತಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಅಲ್ಲದೆ ರಕ್ತದಾನ, ನೇತ್ರದಾನ ಹಾಗೂ ದೇಹದಾನ ಮಾಡಿ ಸಾರ್ಥಕತೆ ಮೆರೆದಂತಹ ದಾನಿಗಳಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಗುವುದು ಎಂದರು.

ಜೆಸಿಐ ಮಲ್ನಾಡ್‌ನ ಅಧ್ಯಕ್ಷೆ ಚೈತ್ರ ಮಾತನಾಡಿ ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ದದ ಕುರಿತು ವಿವಿಧ ವಯೋಮಿತಿಯವರಿಗೆ ವಿವಿಧ ಹಂತದಲ್ಲಿ ಭಾಷಣ ಸ್ಪರ್ದೆ, ದೇಶ ಭಕ್ತಿಗೀತೆಯ ನೃತ್ಯಸ್ಪರ್ಧೆ ಸೇರಿದಂತೆ ಕಿರುಚಿತ್ರ ಪ್ರದರ್ಶನದ ಸ್ಪರ್ದೆ ಏರ್ಪಡಿಸಲಾಗಿದ್ದು ಈ ಮೂಲಕ ನಗರದಲ್ಲಿನ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

Kargil Vijay Diwas ಸುದ್ದಿಗೋಷ್ಟಿಯಲ್ಲಿ ಗಂಗಾಧರ್, ಕರುಣ ವಿನಯ್, ಸೌರಭ ಪ್ರವೀಣ್, ಪುನೀತ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...