Saturday, September 28, 2024
Saturday, September 28, 2024

History of Bidanur ಬಿದನೂರಿನ ಇತಿಹಾಸ ಮನೆಮನೆಗೂ ತಲುಪಿಸಬೇಕು- ಅಂಬ್ರಯ್ಯ ಮಠ

Date:

History of Bidanur ಕೆಳದಿಯಸರು ಬಿದನೂರನ್ನು ತಮ್ಮ ರಾಜದಾನಿಯನ್ನಾಗಿ ಮಾಡಿಕೊಂಡ ನಂತರ ಇಲ್ಲಿ
ನಡೆದ ಘಟನಾವಳಿಗಳಾಗಲೀ, ಇಲ್ಲಿ ನಿರ್ಮಿಸಿದ ಸ್ಮಾರಕಗಳಾಗಲೀ, ಕೋಟೆ ಕೊತ್ತಲಗಳಾಗಲೀ, ಸಾಧಿಸಿದ
ವಿಜಯಗಳಾಗಲೀ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೇ ತಿಳಿಯ ದಿರುವುದಾಗಲೀ, ಅದರ ಕುರಿತು
ಆಸಕ್ತಿ ಇಲ್ಲದಿರುವುದು ದುರಂತ.

ಬಿದನೂರಿನ ಇತಿಹಾಸವನ್ನು ಮನೆ ಮನಗಳಿಗೆ ತಲುಪಿಸುವ ಕೆಲಸ
ಆಗಬೇಕೆಂದು ಇತಿಹಾಸ ಸಂಶೋಧಕ ಅಂಬ್ರಯಮಠ ತಿಳಿಸಿದ್ದಾರೆ.

ಕಾರಣಗಿರಿಯ ಗ್ರಾಮಭಾರತಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಸ್ಕೃತಿ ಸಹದೊಂದಿಗೆ ನಡೆದ
‘ಬಿದನೂರು-ಒಂದು ನೆನಪು’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿದನೂರಿನ ಇತಿಹಾಸ ರೋಚಕ, ಪ್ರೇರಣಾದಾಯಿ, ಇದರ ಕುರಿತು ಇನ್ನಷ್ಟು ಅಧ್ಯಯನ
ನಡೆಯಬೇಕೆಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಡಾ.ಶಾಂತರಾಮ ಪ್ರಭು ಇತಿಹಾಸ ತಿಳಿಯದವರು
ಇತಿಹಾಸವನ್ನು ಸೃಷ್ಟಿ¸ಸಲಾರರು. ಬಿದನೂರಿನ ಸಮೃದ್ಧ ಇತಿಹಾಸವನ್ನು ಶಾಲಾ ಕಾಲೇಜುಗಳ ಮೂಲಕ
ತಿಳಿಸುವ ಕೆಲಸ ಆಗಬೇಕೆಂದರು.

ಬಿದನೂರಿನ ಇತಿಹಾಸದ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ನಿವೃತ್ತ ಉಪನ್ಯಾಸಕ ಡಾ.
ಕೆ. ಜಿ. ವೆಂಕಟೇಶ್ ಶಿವಾಜಿಯ ಮಗ ರಾಜರಾಮನಿಗೆ ಆಶ್ರಯ ನೀಡಿದ, ಔರಂಗಜೇಬನ ಸೇನೆಯನ್ನು
ಹಿಮ್ಮೆಟಿಸಿದ ವೀರ ರಾಣಿ ಚೆನ್ನಮಾಜಿಯ ಶೌರ್ಯ ಸಾಹಸಗಳನ್ನು ಬಿಚ್ಚಿಟ್ಟರು.

ಸುಧೀಂದ್ರ ಭಂಡಾರ್ಕರ್ ಬಿದನೂರಿನ ಸ್ಮಾರಕಗಳ ಕುರಿತು ಮಾತನಾಡಿ ಒಂದೊಂದೂ ಸ್ಮಾರಕಗಳು
ರೋಮಾಂಚಕ ಕಥೆಗಳನ್ನು ಕೇಳುತ್ತೇವೆ. ಅದರ ರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಶಿಸ್ತಿನ ಶಿವಪ್ಪನಾಯಕನ ಆಡಳಿತ ಪರಿಚಯ ಮಾಡಿದ ಸುಪ್ರಕಾಶ್, ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನ ಅಂದಿನ ಹಲವು ಘಟನೆಗಳಿಗೆ ಸಾಕ್ಷಿಂಯಾಗಿದೆ.

ಶಿವಪ್ಪನಾಯಕನ ಆಡಳಿತ ಇಂದಿನ ನಾಯಕರಿಗೆ
ಮಾದರಿಯಾಗಿದೆ. ಆಗಿನ ಆಡಳಿತದಲ್ಲಿದ್ದ ಮನೆತನಗಳು ಈಗಲೂ
ಅದೇ ಜೀವನಶೈಲಿಯನ್ನೂ
ಮುಂದುವರರಿಸಿಕೊಂಡು ಬರುತ್ತಿದ್ದಾರೆ. ಅದರ ಕುರಿತಾಗಿ ಇಂದಿನ ಪೀಳಿಗೆ ಹೆಮ್ಮಪಡಬೇಕೆಂದರು.

ಬಿದನೂರಿನ ಹಿಂದಿನ ಪರಿಸ್ಥಿತಿಯನ್ನು ಅವಲೋಕಿಸಿದ ಇತಿಹಾಸ ಸಂಶೋಧಕ ಅಜಯಕುಮಾರ್
ಶರ್ಮ ಬಿದನೂರು ಸಂಸ್ಥಾನದ ಆಳ ಅಗಲ ಮತ್ತು ಆ ಕುರಿತು ಅನೇಕ ದಾಖಲೆಗಳ ಲಂಡನ್ ಮತ್ತಿತ್ತರೆಡೆ
ಇದ್ದು ಅದರ ಅಧ್ಯಯನದ ಮೂಲಕ ಇನ್ನಷ್ಟು ತಿಳಿಯಬಹುದಾಗಿದೆ. ಆ ದಾಖಲೆಗಳೂ ಬಿದನೂರಿನ
ಇತಿಹಾಸದ ಕುರಿತು ಬೆಳಕು ಚಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ
ಡಾ|| ಕೆಳದಿ ವೆಂಕಟೇಶ ಜೋಯಿಸ್ ಹಂಪಿ ಉತ್ಸವ,, ಆನೆಗೊಂದಿ ಉತ್ಸವ
ಆಚರಿಸುವ ನಮಗೆ ಕೆಳದಿ ಉತ್ಸವ, ಬಿದನೂರಿನ ಉತ್ಸವ ಆಚರಿಸಲು ಆಗುತ್ತಿಲ್ಲ ಕೆಳದಿ ಅರಸರು ಇಕ್ಕೇರಿ,
ಬಿದನೂರನ್ನು ರಾಜದಾನಿಯನ್ನಾಗಿ ಮಾಡಿಕೊಂಡ ನಂತರದ ಇತಿಹಾಸದ ಕುರಿತಾಗಲೀ ಇಲ್ಲಿನ ಸ್ಮಾರಕದ ಕುರಿತಾಗಲೀ ನಿರ್ಲಕ್ಷ ತಾಳಲಾಗುತ್ತಿದೆ.

ಸೋಲಿನ ಇತಿಹಾಸವನ್ನೇ ಬೋಧಿಸುವ ನಾವು ಅದ್ಬುತ ಸಾಮ್ರಾಜ್ಯದ
ಪರಿಚಯ ಮಾಡಿಕೊಟ್ಟು ಇಂದಿನ ಹಾಗೂ ಮುಂದಿನ ಪೀಳಿಗೆ ಇಲ್ಲಿ ಹುಟ್ಟಿ ಬೆಳೆದುದ್ದಕ್ಕೆ ಹೆಮ್ಮೆ
ಪಡುವಂತಾಗಬೇಕೆಂದರು.

ಕಾರಣಗಿರಿಯ ಸದಭಿರುಚಿ ಪ್ರಕಾಶನ ಪ್ರಕಾಟಿಸಿದ ಅಂಬ್ರಯಮಠ ಬರೆದ ಬಿದನೂರಿನ ಸಂಕ್ಷಿಪ್ತ
ಇತಿಹಾಸದ ಕೃತಿ ಬಿಡುಗಡೆ ಮಡಲಾಯಿತು.

ಗ್ರಾಮಭಾರತಿ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್,
ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಉಪಸ್ಥಿತರಿದ್ದರು.

ರವಿ ಪ್ರಾಸ್ತಾವಿಕ ಮಾತನಾಡಿದರು
ಶ್ರೀಮತಿ ವಸುಧಾ ಚೈತನ್ಯ ನಿರೂಪಿಸಿದರು. ಗಣೇಶ್ ಐತಾಳ್ ವಂದಿಸಿದರು.

History of Bidanur ಹೊಸಸನಗರ ತಾಲ್ಲೂಕು ಮಟ್ಟದ
ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬಿದನೂರು ಇತಿಹಾಸದ ಕುರಿತು ಸ್ಪರ್ಧೆ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...