Saturday, November 23, 2024
Saturday, November 23, 2024

Rovers and Rangers Test Camp ನಮ್ಮಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು-ಬಿ.ಕೃಷ್ಷಪ್ಪ

Date:

Rovers and Rangers Test Camp ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರದೆ, ಮಕ್ಕಳ ಸವೋತೋಮುಖ ಬೆಳವಣಿಗೆಗೆ ಸೀಮಿತವಾಗಿರಬೇಕು. ಪುಸ್ತಕದ ಕಲಿಕೆಯಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ್ಲ. ಜೀವನದ ಪ್ರತಿಯೊಂದು ಕ್ಷಣವನ್ನು ಸದುಪಯೋಗ ಮಾಡಿಕೊಂಡು ನಮ್ಮಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಮಕ್ಕಳು ಪರಿಸರದೊಂದಿಗೆ ಬೆರೆತು ಕಲಿಯಬೇಕು, ಸಮಾಜಸೇವೆ ಮತ್ತು ದೇಶ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾನ್ಯ ಶ್ರೀ ಬಿ. ಕೃಷ್ಣಪ್ಪ ರವರು ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದ ರೋವರ‍್ಸ್ ಮತ್ತು ರೇಂಜರ‍್ಸ್ ಪರೀಕ್ಷಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಹ 7ನೇ ತರಗತಿಯಲ್ಲಿ ಸ್ಕೌಟ್ ಆಗಿ ತುಂಬಾ ಅನುಭವವನ್ನು ಪಡೆದುಕೊಂಡಿದ್ದೇನೆ. ತೀರ್ಥಹಳ್ಳಿಯಲ್ಲಿ ಹೋಗಿ ಶಿಬಿರ ಮಾಡಿದ್ದು ಮರೆಯಲು ಅಸಾದ್ಯ ಎಂದು ತಿಳಿಸಿದರು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಆಯುಕ್ತರಾದ ಶ್ರೀ ಕೆ.ಪಿ.ಬಿಂದುಕುಮಾರ ಇಂದಿನ ಯುವ ಪೀಳಿಗೆ ತಮ್ಮ ಅಮೂಲ್ಯವಾದ ಸಮಯವನ್ನು ಅಂತರ್ಜಾಲದಲ್ಲಿ ಕಳಿಯುತ್ತಿರುವುದು ವಿಷಾದನಿಯ. ಸಮಯದ ಸದುಪಯೋಗ ಪಡಿಸಿಕೊಂಡು ಜೀವನದ ಗುರಿಯತ್ತ ಗಮನವಹಿಸಬೇಕೆಂದು ನುಡಿದು ಪರೀಕ್ಷೆಗೆ ಎಲ್ಲರಿಗೂ ಶುಭಕೋರಿದರು.

ಈ ಶಿಬಿರಕ್ಕೆ ಜಿಲ್ಲೆಯ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ 194 ರೇಂಜರ್ಸ (ವಿದ್ಯಾರ್ಥಿನಿಯರು) ೧೪೫ ರೋವರ‍್ಸ್ (ವಿದ್ಯಾರ್ಥಿಗಳು) ಒಟ್ಟು 339 ಶಿಬಿರಾರ್ಥಿಗಳು 21ಕಾಲೇಜಿನಿಂದ ಭಾಗವಹಿಸಿದ್ದರು.

ಈ ಶಿಬಿರದ ಸಂಘಟನೆಯನ್ನು ಹಾಗೂ ನಾಯಕರಾಗಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ ರವರು ಕಾರ್ಯನಿರ್ವಹಿಸುತ್ತಿದ್ದು, ರೋವರ್ ವಿಭಾಗಕ್ಕೆ ಎ.ವಿ.ರಾಜೇಶರವರು ಕಾರ್ಯನಿರ್ವಹಿಸಿದರು. ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಶ್ರೀ ಮಲ್ಲಿಕಾರ್ಜುನ ಕಾನೂರು ವಹಿಸಿದ್ದರು.

Rovers and Rangers Test Camp ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ, ಜಿಲ್ಲಾ ಕಾರ್ಯದರ್ಶಿ ಶ್ರೀ ಹೆಚ್. ಪರಮೇಶ್ವರ್, ಜಂಟಿ ಕಾರ್ಯಾರ್ಶಿ ವೈ.ಆರ್. ವೀರೇಶಪ್ಪ, ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಹೆಚ್. ಶಿವಶಂಕರ್, ಪರಮೇಶ್ವರಯ್ಯ, ವಿಜಯಲಕ್ಷ್ಮಿ ಸುನಿತಾ, ಗಿರಿಜಮ್ಮ, ಹೇಮಲತಾ, ಚಂದ್ರಶೇಖರಯ್ಯ, ಬಸವಣ್ಣಪ್ಪ ಕಾಲೇಜಿನ ರೇಂಜರ್ ಲೀಡರ್‌ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...