Rajesh Khanna “ಮೆರೆ ಸಪನೋಂಕಿ ರಾನಿಕಬ್ ಆಯೆಗಿತು…?.”
ಎಂಬ ಹಾಡು ಕಿವಿಗೆ ಬಿದ್ದಾಕ್ಷಣ
ಸುಂದರ ಹಸಿರಿನ ನಡುವಿನ ರಸ್ತೆಯಲ್ಲಿ ಖನ್ನಾಜಿ
ಜೀಪು ಚಲಾಯಿಸುವ ದೃಶ್ತ, ಪಕ್ಕದಲ್ಲೇ ರೈಲಿನ ಡಬ್ಬಿಯಲ್ಲಿ
ನಾಯಕಿ ಶರ್ಮಿಳಾ ಮುಗುಳ್ಗುವ ದೃಶ್ಯ
ಕಣ್ಮುಂದೆ ನಿಲ್ಲುತ್ತದೆ.
ಸಿನಿಮಾ ಯಾವ್ದು ಹೇಳಿ ಅಂದರೆ ” ಆರಾಧನಾ” ಅಂತ ಥಟ್ಟನೆ ಉತ್ತರಿಸುತ್ತೇವೆ.
1969-71 ರ ನಡುವೆ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿ ಮಿಂಚಿದ ಪ್ರತಿಭೆ.
ಬಾಲಿವುಡ್ ನ ಮೊದಲ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆಯೂ ರಾಜೇಶ್ ಖನ್ನಾಗೆ
ಸಲ್ಲುತ್ತದೆ.
ಒಂದಿಲ್ಲೊಂದು ಸಾಲಾಗಿ ಹದಿನೈದು ಚಿತ್ರಗಳು ಗಲ್ಲಾಪೆಟ್ಟಿಗೆ ಭರ್ಜರಿ ತುಂಬಿದವು. ತಮ್ಮ ಅದ್ವಿತೀಯ ಮುಖಭಾವ, ಆಂಗಿಕ ನಟನೆಯಿಂದ ಯುನಿಕ್ ಆಗಿ ಮೆರೆದ ಕಲಾವಿದ ರಾಜೇಶ್ ಖನ್ನ. ಹೀಗಾಗಿ
ಅತಿ ಹೆಚ್ವು ಸಂಭಾವನೆ ಪಡೆಯುವ ನಾಯಕ ನಟರೂ ಆಗಿದ್ದರು.
ಮೊದಲ ಹೆಸರು ಜತಿನ್ ಖನ್ನ ನಂತರ ಬೆಳ್ಳಿಪರದೆಗೆ ಬಂದಾಗ ರಾಜೇಶ್ ಖನ್ನ ಆಗಿ ಅಚ್ಚೊತ್ತಿದರು.ಅವರ ಕೇಶ ವಿನ್ಯಾಸ ಆಗಿನ ಯುವ ಪೀಳಿಗೆಯ ಮೇಲೆ ಅತ್ಯಂತ ಪ್ರಭಾವ ಬೀರಿತ್ತು. ಮುಂದಲೆಯಲ್ಲೇ ಬೈತಲೆ ಬಾಚುವ ಯುವಕರೇ ಹೆಚ್ಚಾಗಿದ್ದರು.
ಇದು “ರಾಜೇಶ್ ಖನ್ನ ಸ್ಟೈಲ್ ” ಎಂದು ಫೇಮಸ್ ಆಗಿಬಿಟ್ಟಿತ್ತು .
ಅವರ ಖ್ಯಾತಿ ರಾಜಕೀಯಕ್ಕೂ ವ್ಯಾಪಿಸಿತ್ತು. ಕಾಂಗ್ರೆಸ್ ಪಕ್ಷದಿಂದ 1992 ರ ಉಪಚುನಾವಣೆಯಲ್ಲಿ ದೆಹಲಿ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.
Rajesh Khanna ನಾಲ್ಕು ಬಾರಿ ಅತ್ಯುತ್ತಮ ನಟ ,ಒಮ್ಮೆ ಫಿಲ್ಮಫೇರ್ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದರು.
ಈ ಸೂಪರ್ ಸ್ಟಾರ್ ಜುಲೈ ತಿಂಗಳಲ್ಲೇ ಇಹಲೋಕ ತ್ಯಜಿಸಿದರು( ಜುಲೈ 18).