Friday, September 27, 2024
Friday, September 27, 2024

Kuvempu University ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ-ಥಾವರ್ ಚಂದ್ ಗೆಹ್ಲೋಟ್ ಕೆಲಸವನ್ನು ಗೌರವಿಸಿ,ಯಶ ಹಿಂಬಾಲಿಸುತ್ತದೆ-ಡಾ.ಸುರೇಶ್

Date:

Kuvempu University ಪದವಿ ಪಡೆದ ವಿದ್ಯಾರ್ಥಿಗಳು ಸುಸ್ಧಿರ ಅಭಿವೃದ್ಧಿ, ನೀರು, ತ್ಯಾಜ್ಯ ವಿಲೇವಾರಿ, ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಇಂಧನ, ಹವಾಮಾನ ಬದಲಾವಣೆ ಮುಂತಾದ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುವಂತೆ ತಿರುವನಂತಪುರಂನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಾಧಿಪತಿಗಳು ಹಾಗೂ ಬೆಂಗಳೂರು ಇಸ್ರೋ ಸಂಸ್ಥೆಯ ವಿಶಿಷ್ಟ ಪ್ರಾಧ್ಯಾಪಕ ಪದ್ಮಭೂಷಣ, ಪದ್ಮಶ್ರೀ ಡಾ.ಸುರೇಶ್ ಬಿ.ಎನ್.ಅವರು ಹೇಳಿದರು.

ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 33ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.

ಪ್ರತಿಭಾವಂತ ಯುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಪಡೆದ ಆರೋಗ್ಯಕರ ಮೌಲ್ಯ ಮತ್ತು ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕೆಂದವರು ನುಡಿದರು.

ದೇಶದ ಆರ್ಥಿಕಾಭಿವೃದ್ಧಿ ಮತ್ತು ರೂಪಾಂತರ ಶಿಕ್ಷಣ ಮತ್ತು ಕೌಶಲ್ಯದೊಂದಿಗೆ ಅಂತರ್ಗತವಾಗಿ ಅವಿನಾಭಾವ ಸಂಬಂಧ ಹೊಂದಿದೆ. ಸುಶಿಕ್ಷಿತ ದೇಶ ಮಾತ್ರ ಅಭಿವೃದ್ಧಿ ಹೊಂದುವ ದೇಶವಾಗಬಲ್ಲದು. ಆವಿಷ್ಕಾರಿ ಮನೋಭಾವವನ್ನು ರೂಪಿಸುವ ಶಿಕ್ಷಣ ಮಾತ್ರವೇ ಜನಸಂಖ್ಯೆಯ ವಯಸ್ಸಿನ ರಚನೆಯಲ್ಲಿನ ಬದಲಾವಣೆಯ ಪ್ರಯೋಜನಗಳನ್ನು ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ಬಳಸಲು ಇರುವ ಏಕೈಕ ಸಾಧನವಾಗಿದೆ ಎಂದವರು ನುಡಿದರು.

ದೇಶದಲ್ಲಿನ ಬಾಹ್ಯಾಕಾಶದ ಬೆಳವಣಿಗೆಯು ಮುಂದುವರೆದ ರಾಷ್ಟçಗಳಿಗೆ ಸಮಾನವಾಗಿ ನಿಲ್ಲುವಷ್ಟು ಪ್ರಗತಿಯನ್ನು ಸಾಧಿಸಿದೆ. ನೈಸರ್ಗಿಕ ಸಂಪನ್ಮೂಲ ಸಮೀಕ್ಷೆ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ವಿಪತ್ತು ನಿರ್ವಹಣೆ ಮತ್ತು ಇತರ ಅನೇಕ ಅನ್ವಯಿಕೆಗಳಿಗಾಗಿ ಸುಧಾರಿತ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಬಳಸುವುದು ಬಾಹ್ಯಾಕಾಶ ಸಂಶೋಧಕರ ಕನಸಾಗಿತ್ತು ಎಂದರು.

ದೇಶವು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಕಟಣೆಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಎಂದವರು ನುಡಿದರು.

Kuvempu University ಯುವ ವಿದ್ಯಾರ್ಥಿಗಳು ಯಾವುದೇ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಅದರಲ್ಲಿ ಸಂಪೂರ್ಣವಾಗಿ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಿರಿ ಅಂತೆಯೇ ಮಾಡುವ ಕೆಲಸವನ್ನು ಗೌರವಿಸಿ. ಆಗ ಸಹಜವಾಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ನಮ್ಮ ನಿಶ್ಚಿತ ಗುರಿಗಳ ಸಾಧನೆಗಾಗಿ ಉತ್ಸುಕರಾಗಿರಬೇಕು ಮಾತ್ರವಲ್ಲ ಕಠಿಣ ಪರಿಶ್ರಮ ಹೊಂದಿರಬೇಕು. ಆಗ ಭವಿಷ್ಯದಲ್ಲಿ ದೃಢವಾದ ಹೆಜ್ಜೆ ಗುರುತುಗಳನ್ನು ಮೂಡಿಸಲು ಅನುವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಅಗ್ರಾಸನರಾಗಿದ್ದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿ, ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವದ ವಿಕಾಸಗೊಳಿಸಲಿದೆ ಎಂದ ಅವರು ವಿವೇಕಾನಂದರ ಆದರ್ಶದಂತೆ ವಿದ್ಯಾರ್ಥಿಗಳು ಪಡೆದ ಶಿಕ್ಷಣವನ್ನು ತಮ್ಮ ಉನ್ನತಿಗಾಗಿ ಹಾಗೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಗೌರವ ಡಾಕ್ಟರೇಟ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುತ್ತಿರುವುದು ಹರ್ಷದ ಸಂಗತಿ ಎನಿಸಿದೆ ಎಂದರು.

ವಿದ್ಯಾರ್ಥಿಗಳ ಹೊಸಹೊಸ ಸಂಶೋಧನೆಗಳು, ಆವಿಷ್ಕಾರಗಳು ಉತ್ತಮ ಫಲಿತಾಂಶ ಹೊಂದಿದ್ದು, ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಸಹಾಯಕವಾಗಿವೆ. ದೇಶದ ಹಲವು ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳ ಸೃಜನೆಗೂ ಕಾರಣವಾಗಿದೆ. ಇದರಿಂದಾಗಿ ದೇಶ ವಿಶ್ವದ ಪ್ರಗತಿಶೀಲ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿದೆ. ಯುವ ವಿದ್ಯಾರ್ಥಿಗಳು ದೇಶ ಮಾತ್ರವಲ್ಲದೇ ಜಾಗತಿಕ ಸಮಸ್ಯೆಗಳ ಪರಿಹರಿಸುವಲ್ಲಿಯೂ ಗಮನಹರಿಸುವಂತೆಯೂ ಅವರು ಸಲಹೆ ನೀಡಿದರು.

ಘಟಿಕೋತ್ಸವದಲ್ಲಿ ಸದಾನಂದಶೆಟ್ಟಿ, ಎಂ.ಚಂದ್ರಪ್ಪ ಮತ್ತು ಪಂ.ರಾಜಗುರು ಗುರುಸ್ವಾಮಿ ಕಲಿಕೇರಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ 159ಅಭ್ಯರ್ಥಿಗಳಿಗೆ ಡಾಕ್ಟರೇಟ್, 14,250 ವಿದ್ಯಾರ್ಥಿಗಳಿಗೆ ಪದವಿ,74 ವಿದ್ಯಾರ್ಥಿಗಳಿಗೆ 141 ಸ್ವರ್ಣ ಪದಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಸಚಿವೆ ಪ್ರೊ.ಗೀತಾ ಸಿ., ಮೌಲ್ಯಮಾಪನ ಕುಲಸಚಿವ ಪ್ರೊ.ನವೀನ್‌ಕುಮಾರ್ ಎಸ್.ಕೆ. ಸೇರಿದಂತೆ ವಿದ್ಯಾಲಯದ ವಿವಿಧ ನಿಕಾಯಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hassan Manikya Prakashana ಶಿವಮೊಗ್ಗದ ಕವಿ ಶಿ.ಜು.ಪಾಶಾ ಅವರಿಗೆ “ಜನ್ನ ಕಾವ್ಯ ಪ್ರಶಸ್ತಿ”

Hassan Manikya Prakashana ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ ಜನ್ನ ಕಾವ್ಯ...

Vajreshwari Co Operative Society ಶ್ರೀವಜ್ರೇಶ್ವರಿ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

Vajreshwari Co Operative Society ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ...

Inner Wheel Shivamogga ದುರ್ಬಲರಿಗೆ ನೆರವು ನೀಡಿದಾಗ ಸೇವೆ ಸಾರ್ಥಕ- ಶಿಲ್ಪ ಗೋಪಿನಾಥ್

Inner Wheel Shivamogga ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ...

National Education Committee ಬೆಳಗುತ್ತಿ & ಮಲ್ಲಿಗೇನಹಳ್ಳಿಯಲ್ಲಿ ಗಮನ ಸೆಳೆದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

National Education Committee ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿರಂಗಪ್ರಯೋಗದ...