CBI Investigation ಭಯೋತ್ಪಾದನಾ ಕೃತಿಗೆ ಸಂಚರಿಸಿದ ಪ್ರಕರಣದಲ್ಲಿ ಬಂಧಿಸಿರುವ ಶಂಕಿತರಿಂದ ಜಪ್ತಿ ಮಾಡಲಾಗಿರುವ ವಾಕಿ ಟಾಕಿಗಳು , ಬಾಂಬ್ ಸ್ಫೋಟಕ್ಕೆ ಬಳಸುವ ಟ್ರಿಗರ್ ಗಳು ಎಂಬ ಮಾಹಿತಿಯಿಂದ ಸಿಬಿಐ ತನಿಖೆಯಿಂದ ಹೊರ ಬಿದ್ದಿದೆ .
ಬೆಂಗಳೂರಿನ ಹೆಬ್ಬಾಳ ಠಾಣೆ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಜುಲೈ 18ರಂದು ಕಾರ್ಯಾಚರಣೆ ನಡೆಸಿದ್ದ ಸಿಬಿಐ ಪೊಲೀಸರು, ಐವರು ಶಂಕಿತರನ್ನು ಬಂಧಿಸಿದ್ದರು. 7 ನಾಡ ಪಿಸ್ತೂಲ್ , 45 ಗುಂಡುಗಳು 12 ಮೊಬೈಲ್ ಡ್ಯಾಗರ್ ಮತ್ತು ನಾಲ್ಕು ವಾಕಿಟಾಕಿ ಮಾದರಿ ಉಪಕರಣಗಳನ್ನು ಜಪ್ತಿ ಮಾಡಿದ್ದರು.
ಈ ಎಲ್ಲಾ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಈ ಸಾಧನೆಗಳ ಪರೀಕ್ಷೆ ನಡೆಸಿರುವ ತಜ್ಞರು ಪ್ರಾಥಮಿಕ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಾಕಿ ಟಾಕಿ ಮಾದರಿ ಉಪಕರಣದಲ್ಲಿ ತಂತಿಗಳನ್ನು ಜೋಡಿಸಲಾಗಿದೆ . ಇದು ಬೇರೆ ರೀತಿಯ ಉಪಕರಣವಿರುವ ಅನುಮಾನವಿದೆ . ವಿಧಿ ವಿಜ್ಞಾನ ತಜ್ಞರಿಂದ ನಿಖರ ವರದಿ ಬರಬೇಕಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ತಿಳಿಸಿದ್ದಾರೆ.
ಉಗ್ರರ ಬಂಧನ ಪ್ರಕರಣವನ್ನು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
CBI Investigation ಶಂಕಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಹೆಬ್ಬಾಳ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ . ಹೀಗಾಗಿ ಎನ್ಐಎ ಅಧಿಕಾರಿಗಳು ಸಹ ತನಿಖೆ ಆರಂಭಿಸಿದ್ದಾರೆ. ಸಿಬಿಐ ಪೊಲೀಸರ ಜೊತೆ ಎನ್ ಐ ಎ ಅಧಿಕಾರಿಗಳು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.