Uttaradi Math ಹೊಳೆಹೊನ್ನೂರು, ಎಲ್ಲ ಜೀವದಲ್ಲೂ ಭಗವಂತನ ನಿತ್ಯ ಸನ್ನಿಧಾನ ಇರುತ್ತದೆ ಎಂದು ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ಬುಧವಾರ 28ನೇ ಚಾತುರ್ಮಾಸ್ಯ ಸಂದರ್ಭ ಇಲ್ಲಿನ ಶ್ರೀ ಸತ್ಯಧರ್ಮ ತೀರ್ಥರ ವೃಂದಾವನ ಸನ್ನಿಧಾನದಲ್ಲಿ ಭಾಗತ ದಶಮ ಸ್ಕಂದ ಪ್ರವಚನ ನೀಡಿದ ಅವರು, ಆಂತರ ಮತ್ತು ಬಾಹ್ಯ ಎಂಬ ಎರಡು ರೀತಿಯಲ್ಲಿ ದೇವರ ಸನ್ನಿಧಾನ ವಿರುತ್ತದೆ ಎಂದರು.
ಜೀವರಲ್ಲಿ ಅನಾದಿ ಕಾಲದಿಂದಲೂ ಇರುವ ಸ್ವಾಭಾವಿಕವಾದ ಆಂತರಿಕ ಸನ್ನಿಧಾನ ಮತ್ತು ಪ್ರತಿಮೆಗಳಲ್ಲಿ ಹಾಗೂ ತೀರ್ಥ ಕ್ಷೇತ್ರಗಳಲ್ಲಿ ಬಾಹ್ಯವಾದ ಸನ್ನಿಧಾನ. ಹೀಗಾಗಿ ಜೀವ ಸ್ವರೂಪಿಯಲ್ಲಿ ಪರಮಾತ್ಮನ ಸನ್ನಿಧಾನ ಇರುತ್ತದೆ. ನಮ್ಮಲ್ಲಿ, ಮತ್ತು ಎದುರು ಇದ್ದವರಲ್ಲಿ, ಎಲ್ಲರಲ್ಲಿ. ಅಲ್ಲದೆ ಎಲ್ಲ ಪ್ರಾಣಿಗಳಲ್ಲೂ ದೇವರ ಸನ್ನಿಧಾನ ಇದೆ ಎಂಬ ಚಿಂತನೆ ನಾವು ಮಾಡಬೇಕು ಎಂದರು.
ಇದಕ್ಕೂ ಮೊದಲು ರಾಮಾಚಾರ್ಯ ಉಮರ್ಜಿ ಪ್ರವಚನ ನೀಡಿದರು.
Uttaradi Math ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಸುಬ್ಬಣ್ಣಾಚಾರ್ಯ, ಮಠದ ವ್ಯವಸ್ಥಾಪಕ ನವರತ್ನ ಶ್ರೀನಿವಾಸಾಚಾರ್ಯ ಇತರರು ಇದ್ದರು.