Parliament Monsoon Session ಇಂದಿನಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭ.
ಇದು ಪ್ರಸಕ್ತ ಸಂಸತ್ತಿನ ಸದಸ್ಯರಿಗೆ ಕೊನೆಯ ಮಳೆಗಾಲದ ಅಧಿವೇಶನ.
ಇತ್ತೀಚೆಗೆ ತಾನೆ ಬಿಜೆಪಿಯೇತರ ವಿರೋಧ ಪಕ್ಷಗಳು ಇಂಡಿಯಾ ( I.N.D.I.A.)
ಎಂಬ ಮೋದಿ ವಿರೋಧಿ ಬಣ ಆರಂಭಿಸಿವೆ.
ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲು ಉದ್ಯುಕ್ತವಾಗಿವೆ.
ಆಗಸ್ಟ್ 11 ರವರೆಗೆ ಅಧಿವೇಶನ ನಡೆಯಲಿದೆ.
Parliament Monsoon Session ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ,ದೆಹಲಿ ಸುಗ್ರೀವಾಜ್ಞೆ ಸಂಬಂಧಿಸಿದ ಸಂಘರ್ಷಗಳ ಬಗ್ಗೆ ಸಂಸತ್ತಿನಲ್ಲಿ ವಿಪಕ್ಷಗಳು ತಮ್ಮ ಧ್ವನಿ ಒಗ್ಗೂಡಿಸಲಿವೆ.ಪ್ರಧಾನಿ ಮೋದಿ ಅವರು ಇದೂವರೆಗೂ ತಾಳಿದ ಮೌನದ ಬಗ್ಗೆಯೇ ವಿರೋಧಿ ಬಣ ಅಸ್ತ್ರ ಪ್ರಯೋಗಿಸಲಿವೆ.
ಅಧಿವೇಶನಕ್ಕೆ ಮುನ್ನ ಈಗಾಗಲೇ ಪ್ರತಿಪಕ್ಷಗಳ ಸಹಕಾರ ಕೋರಿ ಸಭೆ ನಡೆಸಿದ್ದಾರೆ.
ಪ್ರತಿಪಕ್ಷಗಳ ಸವಾಲುಗಳನ್ನ ಮೋದಿಯವರು ಸಮರ್ಥವಾಗಿ ಎದುರಿಸುತ್ತಾರೆ ಎಂದು ಸಚಿವ ಪ್ರಹ್ಲಾದ ಜೋಷಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ದೇಶದ ಈಗಿನ ವಿದ್ಯಮಾನಗಳ ಬಗ್ಗೆ ಮೋದಿ ಅವರು ಏನು ಉತ್ತರ ಕೊಡುತ್ತಾರೆ ಎಂಬುದೇ ಎಲ್ಲರ ಕುತೂಹಲವಾಗಿದೆ.