Anna Bhagya Scheme ಚಿಕ್ಕಮಗಳೂರು, ಎಸ್ಸಿ, ಎಸ್ಟಿ ನಿಗಮದಿಂದ ಭೂ ಒಡೆತನದಲ್ಲಿರುವ ಭೂಮಿಯನ್ನು ಗುರುತು ಮಾಡಿ ಸರ್ಕಾರವೇ ಭೂಮಿಯನ್ನು ಖರೀದಿಸುವ ಮೂಲಕ ಅರ್ಜಿ ಸಲ್ಲಿಸಿದ ಜನಾಂಗದ ಫಲಾನುಭವಿಗಳಿಗೆ ಒದಗಿಸಿಕೊಡಬೇಕು ಎಂದು ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಬಣ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸಿದ್ದಾರೆ.
ಈ ಸಂಬoಧ ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ದಸಂಸ ಮುಖಂಡರುಗಳು ಮನವಿ ಸಲ್ಲಿಸಿ ಮಾತನಾಡಿ ಎಸ್ಸಿಎಸ್ಟಿ ನಿಗಮದಿಂದ ಭೂ ಒಡೆತನದಲ್ಲಿ ಭೂಮಿ ಖರೀದಿಸಲು ಸರ್ಕಾರ ವಾಸವಿರುವ ಮನೆಯಿಂದ 7 ಕಿ.ಮೀ. ಗುರುತಿಸಿರುವ ಪರಿಣಾಮ ಸರ್ಕಾರವೇ ಭೂಮಿ ಖರೀದಿಸಿ ಫಲಾನುಭವಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್‌ಕುಮಾರ್ ಪ.ಜಾತಿ, ಪ.ಪಂಗಡದ ಫಲಾನುಭವಿಗಳಿಗೆ ಭೂ ಒಡೆತನದಲ್ಲಿ ಭೂಮಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಆ ನಿಟ್ಟಿನಲ್ಲಿ ಸರ್ಕಾರದ ಆದೇಶ ವನ್ನು ಕೈಬಿಟ್ಟು ಇಡೀ ತಾಲ್ಲೂಕಿನಲ್ಲಿ ಫಲಾನುಭವಿಗಳಿಗೆ ಭೂಮಿ ಗುರುತು ಮಾಡಿ ಸರ್ಕಾರವೇ ಖರೀದಿಸಿ ಜನಾಂಗಕ್ಕೆ ನೀಡುವ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.
ಎಸ್ಸಿಎಸ್ಟಿ ಫಲಾನುಭವಿಗಳಿಗೆ 5 ಲಕ್ಷ ನೇರ ಸಾಲವನ್ನು ಸರ್ಕಾರ ಮಂಜೂರು ಮಾಡಬೇಕು. ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ 10 ಘೋಷಿಸಿದೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಪ್ರತಿ ತಿಂಗಳು ೫ ಕೆಜಿ ಕೇಂದ್ರದ ಅನುದಾನ ಇದೆ. ಆ ಹಿನ್ನೆಲೆಯಲ್ಲಿ ಕೇಂದ್ರ 5 ಕೆಜಿ ಹಾಗೂ ರಾಜ್ಯದಿಂದ 10 ಸೇರಿ ಒಟ್ಟು 15 ಕೆಜಿ ಅಕ್ಕಿ ವಿತರಿಸಬೇಕು ಎಂದರು.
Anna Bhagya Scheme ಇದನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಫಲಾನುಭವಿಗಳ ಖಾತೆಗೆ ಹಣ ಹಾಕಬಾರದು. ರಾಜ್ಯ ಸರ್ಕಾರ ಬಡವರ ಬಗ್ಗೆ ಕಾಳಜಿಯಿದ್ದರೆ ಎಲ್ಲಾ ಜಾತಿ, ಧರ್ಮದ ಬಡಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕಾದರೆ ಸರ್ಕಾರಿ, ರಾಜಕಾರಣಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.