Shri Uttaradi Math ಅಧಿಕ ಮಾಸ ಸಾಧನೆ ಮಾಡುವುದಕ್ಕೆ ಅತ್ಯಂತ ಪವಿತ್ರ ಹಾಗೂ ಉತ್ತಮವಾದ ಕಾಲ. ಈಗ ಮಾಡಿದ ಕಾರ್ಯಗಳು ಭಗವಂತನ ವಿಶೇಷ ಪ್ರೀತಿಗೆ ಕಾರಣ ಆಗಲಿದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
28ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಮಂಗಳವಾರ ಶ್ರೀಪಾದಂಗಳವರು ಅಧಿಕ ಶ್ರಾವಣ ಮಾಸದಲ್ಲಿ ಮಕ್ಕಳು, ಯುವಕರು ಮತ್ತು ಯುವತಿಯರು ಏನು ಮಾಡಬೇಕು? ಮತ್ತು ಏನು ಮಾಡಬಾರದೆಂಬ ಕುರಿತು ಸಂದೇಶ ನೀಡಿದರು.
ಅಧಿಕ ಮಾಸದಲ್ಲಿ ಹಿರಿಯರಿಗೆ ಆಚರಿಸಲು ಅನೇಕ ಕಠಿಣವಾದ ವ್ರತ ನೇಮಗಳಿವೆ. ಆದರೆ ಮಕ್ಕಳು ಮತ್ತು ಯುವಕರು ಕೂಡ ಸರಳವಾಗಿ ಸಾಧನಾ ಮಾರ್ಗದಲ್ಲಿ ಸಾಗಬಹುದು ಮತ್ತು ವಿಶೇಷ ಪುಣ್ಯ ಗಳಿಸಬಹುದು ಎಂದರು.
ಆರ0ಭದಲ್ಲೇ ಕಠಿಣ ನೇಮಗಳ ಆಚರಣೆ ಅಸಾಧ್ಯ. ಹೀಗಾಗಿ ಮಕ್ಕಳು ಅಧಿಕ ಮಾಸದ ಈ ಒಂದು ತಿಂಗಳ ಅವ ಯಲ್ಲಿ ಪ್ರತಿ ದಿನ 33 ಬಾರಿ ಹರಿನಾಮ ಸ್ಮರಣೆ ಮಾಡಬೇಕು. (ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ. ಇದೂ ಕಠಿಣವಾದರೆ ಶ್ರೀರಾಮ್ ಜೈರಾಮ್ ಇಷ್ಟೇ ಸಾಕು). ಹತ್ತಿರದಲ್ಲಿ ದೇವಸ್ಥಾನವಿದ್ದರೆ ನಿತ್ಯವೂ ಪ್ರದಕ್ಷಿಣಾ ನಮಸ್ಕಾರ ಮಾಡಬೇಕು. ತಂದೆ ತಾಯಂದಿರು ಇದನ್ನು ಮಾಡಿಸಬೇಕು ಎಂದರು.
Shri Uttaradi Math ಇನ್ನು ಈ ಒಂದು ತಿಂಗಳ ಅವ ಯಲ್ಲಿ ಊಟ ಮಾಡುವಾಗ ಟಿವಿ ಮತ್ತು ಮೊಬೈಲ್ ನೋಡುವುದಿಲ್ಲ ಎಂಬ ಸಂಕಲ್ಪ ಮಾಡಿ. ಊಟದ ವೇಳೆ ಕೂಡ ದೇವರ ಸ್ಮರಣೆ ಮಾಡಿ. ಇದರಿಂದ ತಿನ್ನುವ ಆಹಾರವೂ ಪವಿತ್ರವಾಗುತ್ತದೆ. ಅಧಿಕ ಮಾಸದಲ್ಲಿ ಈ ವ್ರತಗಳನ್ನು ಆಚರಿಸಿ ಇದರಿಂದ ಏಕಾಗ್ರತೆ ಸಾಧ್ಯಘಿ. ನಿಮ್ಮ ಓದಿಗೂ ಅನುಕೂಲ ಆಗುತ್ತದೆ. ದೇವರ ಪ್ರೀತಿಗೂ ಪಾತ್ರರಾಗುತ್ತೀರ ಎಂದು ಮಕ್ಕಳಿಗೆ ಮತ್ತು ಯುವಕರಿಗೆ ಶ್ರೀಗಳು ಸಂದೇಶ ನೀಡಿದರು.