Kuvempu University ಶ್ರೀ ಜಯಚಾಮರಾಜೇಂದ್ರ ಒಡೆಯರ್ ಇವರ 104ನೇ ಹುಟ್ಟುಹಬ್ಬದ ಅಂಗವಾಗಿ ಕುವೆಂಪು ವಿಶ್ವವಿದ್ಯಾಲಯ, ರಾಷ್ಟೀಯ ಸೇವಾ ಯೋಜನೆ, ಸಹ್ಯಾದ್ರಿ ವಿಜ್ನಾನ, ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ ಕಾಲೇಜು, ಶಿವಮೊಗ್ಗ ಮತ್ತು ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ “ನೇತ್ರದಾನ ಮಹಾದಾನ” ಎಂಬ ಶೀರ್ಷಿಕೆ ಅಡಿಯಲ್ಲಿ ಉಚಿತ ನೇತ್ರದಾನ ಪ್ರತಿಜ್ಞಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಡಾ ನಾಗರಾಜ ಪರಿಸರ, ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ಎನ್.ಎಸ್.ಎಸ್. ಕುವೆಂಪು ವಿ. ವಿ. ಇವರು ಉದ್ಘಾಟಿಸಿ ಮಾತನಾಡುತ್ತಾ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಕಟ್ಟಿಸಿದಂತಹಾ ಈ ಕಾಲೇಜಿನಲ್ಲಿ ಓದುತ್ತಿರುವ ವಿಧ್ಯಾರ್ಥಿಗಳೇ ಧನ್ಯರು, ಸ್ವತಂತ್ರ್ಯ ಪೂರ್ವದಲ್ಲಿಯೇ ಅವರಿಗಿರುವ ಶಿಕ್ಷಣದ ಬಗ್ಗೆ, ಪರಿಸರದ ಬಗ್ಗೆ ಮಹಿಳೆಯರ ಬಗ್ಗೆ, ಸಾಮಾಜಿಕ ಖಾಳಜಿ ಬಗ್ಗೆ ಇಂದಿನ ನಾವುಗಳು ಸರಿಯಾಗಿ ತಿಳಿಸುಕೊಂಡು ಅವರಹಾದಿಯಲ್ಲಿ ನಡೆಯಬೇಕಾಗಿದೆ ಎಂದು ತಿಳಿಸುತ್ತಾ ನೇತ್ರದಾನ ಮಹತ್ವ ಕುರಿತು ವಿವರಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನ ಮಾಡುವಂತೆ ಪ್ರೇರೇಪಿಸಿದರು.
Kuvempu University ಈ ಕಾರ್ಯಕ್ರಮದಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಡಾ ನಯನಾ ಮತ್ತು ಶ್ರೀ ಪ್ರದೀಪ್ ಆರ್ ಎಸ್ ವಿದ್ಯಾರ್ಥಿಗಳಿಗೆ ನೇತ್ರದಾನದ ಪ್ರಾಮುಖ್ಯತೆ ತಿಳಿಸಿ ಮತ್ತು ನೇತ್ರದಾನದ ಕುರಿತು ವಿಧ್ಯಾರ್ಥಿಗಳಿಗಿದ್ದ ಗೊಂದಲಗಳಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ ರಾಜೇಶ್ವರಿ ಎನ್, ಅಧ್ಯಕ್ಷತೆ ವಹಿಸಿ ಇಂತಹಾ ಸೇವಾ ಕಾರ್ಯಗಳಲ್ಲಿ ಕುವೆಂಪು ವಿ ವಿ ಯ ಎನ್.ಎಸ್.ಎಸ್. ತೊಡಗಿರುವುದು ಅಭಿನಂದನಾರ್ಹ ಎಂದು ಪ್ರಶಂಸಿಸಿದರು. ವೇದಿಕೆಯಲ್ಲಿ ಸಹ್ಯಾದ್ರಿ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ. ವೀಣಾ ಎಂ. ಕೆ, ಡಾ. ಧನಂಜಯ ಕೆ ಬಿ ಮತ್ತು ರಾ.ಸೇ.ಯೋ. ಅಧಿಕಾರಿಗಳಾದ ಡಾ ನಾಗಾರ್ಜುನ, ಡಾ ಪ್ರಕಾಶ್ ಬಿ ಎನ್. ಡಾ ಮುದುಕಪ್ಪ ಮತ್ತು ಶ್ರೀ ಪರುಶುರಾಂ ಎಂ ಮತ್ತು ಶ್ರೀ ನಾಗರಾಜ್ ಎನ್ ವಿಧ್ಯಾರ್ಥಿ ಕ್ಷೇಮಾಧಿಕಾರಿ ಇವರು ಉಪಸ್ಥಿತರಿದ್ದರು.