Friday, November 22, 2024
Friday, November 22, 2024

Trade License Fair ಸ್ಥಳದಲ್ಲಿಯೇ ಟ್ರೇಡ್ ಲೈಸನ್ಸ್ ನೀಡುವ ವಿನೂತನ ಮೇಳ- ಉದ್ಯಮಿಗಳ ಮೆಚ್ಚುಗೆ

Date:

Trade License Fair ಶಿವಮೊಗ್ಗ ನಗರದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವುದು ಹಾಗೂ ವ್ಯಾಪಾರದ ಲೈಸೆನ್ಸ್ ಪ್ರಕ್ರಿಯೆ ಸುಲಭಗೊಳಿಸುವ ಆಶಯದಿಂದ ಮೇಳ ಆಯೋಜಿಸಲಾಗಿದೆ. ಶಿವಮೊಗ್ಗ ನಗರದ ಉದ್ಯಮಿಗಳು ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮೂರನೇ ಬಾರಿ ಆಯೋಜಿಸಿದ್ದ “ಟ್ರೇಡ್ ಲೈಸೆನ್ಸ್ ಮೇಳ” ಉದ್ಘಾಟಿಸಿ ಮಾತನಾಡಿ, ಲೈಸೆನ್ಸ್ ಪಡೆಯಲು ಉದ್ಯಮಿಗಳಿಗೆ ಆಗುವ ತೊಂದರೆಗಳನ್ನು ಪರಿಹರಿಸುವ ಆಶಯದಿಂದ ಮೇಳ ನಡೆಸುತ್ತಿದ್ದು, ದಾಖಲೆಗಳ ಜತೆಯಲ್ಲಿ ಅರ್ಜಿ ಸಲ್ಲಿಸಿ ಕೂಡಲೇ ಲೈಸೆನ್ಸ್ ಪಡೆಯಬೇಕು. ಇದರಿಂದ ಉದ್ಯಮಿಗಳಿಗೆ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಎಇಇ ಅಮೋಘ್ ಮಾತನಾಡಿ, ಏಕಬಳಕೆಯ ಪ್ಲಾಸ್ಟಿಕ್ ಎಲ್ಲ ಕಡೆಗಳಲ್ಲಿ ನಿಷೇಧ ಮಾಡಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಸಾರ್ವಜನಿಕರು ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡಬಾರದು. ನಿಷೇಧಿತ ಪ್ಲಾಸ್ಟಿಕ್ ಬಳಸಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್ ಮಾತನಾಡಿ, ಎರಡು ದಿನಗಳ ಕಾಲ ಟ್ರೇಡ್ ಲೈಸೆನ್ಸ್ ಮೇಳ ನಡೆಯುತ್ತಿದ್ದು, ವ್ಯಾಪಾರ ವಹಿವಾಟು ನಡೆಸುವವರು ಲೈಸೆನ್ಸ್ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ ಸಾವಿರಕ್ಕೂ ಅಧಿಕ ವ್ಯಾಪಾರಸ್ಥರು ಮೇಳದ ಪ್ರಯೋಜನ ಪಡೆದಿದ್ದರು. ಪಾಲಿಕೆ ಸಹಯೋಗದಲ್ಲಿ ನಡೆಯುತ್ತಿರುವ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪಾಲಿಕೆ ಅಧಿಕಾರಿಗಳು, ಆರೋಗ್ಯ ನೀರಿಕ್ಷಕರು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿದಾರರಿಂದ ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಿ ಲೈಸೆನ್ಸ್ ನೀಡುವ ಕೆಲಸ ಮಾಡುತ್ತಿದ್ದಾರೆ. ಎರಡು ದಿನ ( ಮಂಗಳವಾರ ಮತ್ತು ಬುಧವಾರ ) ನಡೆಯುವ ಮೇಳದ ಸದುಪಯೋಗ ವ್ಯಾಪಾರಸ್ಥರು ಪಡೆದುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ ಎಂದರು.

Trade License Fair ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕರಾದ ಗಣೇಶ್ ಅಂಗಡಿ, ಮಂಜೇಗೌಡ, ಜವಳಿ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಕಾರ್ಯದರ್ಶಿ ಪ್ರಭಾಕರ್, ಪಾಲಿಕೆ ಆರೋಗ್ಯ ನೀರಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...