Monday, February 2, 2026
Monday, February 2, 2026

Uttaradi Math ನಮ್ಮನ್ನು ಪೊರೆಯುವ ಭಗವಂತನೇ ಸರಿಯಾದ ಗುರು- ಶ್ರೀಸತ್ಯಾತ್ಮ ತೀರ್ಥರು

Date:

Uttaradi Math ಹೊಳೆಹೊನ್ನೂರು : ಮೃತ್ಯು, ನರಕ ಮತ್ತು ತಮಸ್ಸಿಗೆ ಕಾರಣವಾಗುವ ಮಾರ್ಗದಲ್ಲಿ ನಾವಿದ್ದಾಗ ಯಾರು ಅದನ್ನು ತಪ್ಪಿಸುವುದಿಲ್ಲವೋ ಅಥವಾ ತಿಳುವಳಿಕೆ ಹೇಳುವುದಿಲ್ಲವೋ ಆತ ತಂದೆ, ಗುರು ಅಥವಾ ರಾಜನಾಗಲು ಸಾಧ್ಯವಿಲ್ಲ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.

ಭಾನುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ನಾವು ತಪ್ಪು ದಾರಿಯಲ್ಲಿದ್ದಾಗ ನಮಗೆ ಸನ್ಮಾರ್ಗದ ಬೋಧನೆ ಮಾಡಬೇಕು. ಅದು ಬಿಟ್ಟು ನೀನು ಮಾಡಿದ್ದೇ ಸರಿ. ನಿನ್ನ ಇಷ್ಟಕ್ಕೆ ಬಂದ ಹಾಗೆ ಇರು. ಬಂದ ಎಲ್ಲ ಅನರ್ಥವನ್ನೂ ನಾನು ನೋಡಿಕೊಳ್ಳುತ್ತೇನೆ. ನನ್ನ ಬಳಿ ಬೇಕಾದಷ್ಟು ಸಂಪತ್ತು ಇದೆ ಎಂದು ಪೋಷಿಸಿದರೆದು ಅನರ್ಥಕ್ಕೆ ಕಾರಣವಾಗುತ್ತದೆ ಎಂದರು.

ಯಾರಿಗೆ ಯಾವುದು ಹಿತವಾಗುತ್ತದೆಯೋ ಅದನ್ನು ಹೇಳಬೇಕೇ ಹೊರತು ವ್ಯಕ್ತಿಯ ಮೆಚ್ಚಿಸಲು ಮಾಡಿದ್ದನ್ನೆಲ್ಲಾ ಸರಿ ಎನ್ನಬಾರದು. ಹೀಗಾಗಿ ನಾವು ತಪ್ಪು ಮಾಡಿದಾಗ ತಿದ್ದುವ ಮತ್ತು ಶಾಸ ವಿಹಿತವಾಗಿ ಬದುಕಿದಾಗ ಪೊರೆವ ಭಗವಂತನೇ ನಮಗೆ ಸರಿಯಾದ ಗುರು ಎನಿಸಿದ್ದಾನೆ. ಇಂತಹ ಭಗವಂತ ಎಲ್ಲರ ಹೃದಯದಲ್ಲಿದ್ದಾನೆ. ಹೀಗಿರುವಾಗ ಯಾರೂ ಬಡವರಲ್ಲ, ದುರ್ಬಲರಲ್ಲ. ಕಷ್ಟ ಬಂದಾಗ ಒಳಗಿರುವ ಪರಮಾತ್ಮನನ್ನು ಎಬ್ಬಿಸಿ. ಅವನಿಗೆ ಶರಣುಹೋಗಿ. ಅನಂತ ಜೀವರಾಶಿಯಲ್ಲಿದ್ದೂ ಅವರ ಯೋಗಕ್ಷೇಮ ನೋಡುವಾತ ಭಗವಂತನೊಬ್ಬನೇ ಎಂದರು.

ಪ0ಡಿತ ಜೀವೇಶಾಚಾರ್ಯ ಸಭಾ ಕಾರ್ಯಕ್ರಮದ ಆರಂಭದಲ್ಲಿ ಪ್ರವಚನ ಮಾಡಿದರು. ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ ಮೊದಲಾದವರಿದ್ದರು.

Uttaradi Math ರಘೂತ್ತಮಾಚಾರ್ಯ ಸಂಡೂರು ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...