Forest Construction ಸ್ಥಳೀಯ ಜಾತೀಯ ನೈಸರ್ಗಿಕ ಅರಣ್ಯ ಬೆಳೆಸುವ ಕೆಲಸ ವ್ಯಾಪಕವಾಗಿ ನಡೆಯಬೇಕಾಗಿದೆ. ಅದನ್ನು ಸಾಂಕ್ರಾಮಿಕಗೊಳಿಸಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸಿಎಂ ಜೋಷಿ ಅವರು ಹೇಳಿದರು.
ಹೊಸನಗರದ ಅಂಡಗದೋದೂರು ಗ್ರಾಮ ಪಂಚಾಯಿತಿಯಲ್ಲಿ ಸ್ಥಳೀಯ ದೇವಸ್ಥಾನದ ಆವರಣದಲ್ಲಿ ವನ ನಿರ್ಮಾಣವನ್ನು ಗಿಡ ನೆಟ್ಟು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಅರಣ್ಯದ ಮೇಲಿನ ಆಕ್ರಮಣ ಹೆಚ್ಚದ ಪರಿಣಾಮ ಸರ್ವೋಚ್ಚ ನ್ಯಾಯಾಲಯ ಅರಣ್ಯ ರಕ್ಷಣೆಗೆ ಬಿಗಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ದೇಶ ವ್ಯಾಪ್ತಿ ಪರಿಸ್ಥಿತಿ ಅವಲೋಕಿಸಿ ಆದೇಶಿಸಿದಾಗ ಮಲೆನಾಡಿನ ಕೆಲವು ಭಾಗಗಳಿಗೆ ಕೆಲವರಿಗೆ ಸ್ವಲ್ಪ ತೊಂದರೆಯೂ ಆಗಿರಬಹುದು. ಸುನಾಮಿ ಬಂದಾಗ, ಪ್ರಳಯವಾದಾಗ ಅದು ಒಳ್ಳೆಯವರು, ಕೆಟ್ಟವರೆಂದು ನೋಡದೆ ಎಲ್ಲವನ್ನು ಕೊಚ್ಚಿಕೊಂಡು ಹೋಗುತ್ತದೆ. ಅಂಡಗದೋದೂರು ಗ್ರಾಮದಲ್ಲಿ ಸಾರ್ವಜನಿಕರಿಂದ ನಿರ್ಮಾಣವಾಗುತ್ತಿರುವ ಅರಣ್ಯ ಶ್ಲಾಘನೀಯ. ಅರಣ್ಯ ರಕ್ಷಣೆಯ ಪ್ರಾಯೋಜಕತ್ವ ಹೊಂದಿರುವ ಬೆಂಗಳೂರಿನ ಉದ್ಯಮಿ ಶ್ರೀಧರ್ ಹಾಗೂ ನಾಲ್ಕರಿಂದ ಐದು ವರ್ಷಗಳಿಂದ ತಮ್ಮ ಜಮೀನಿನ ಸುತ್ತ ಅರಣ್ಯ ಬೆಳೆಸಿ, ಸಾರ್ವಜನಿಕವಾಗಿ ಅರಣ್ಯ ಬೆಳೆಸಲು ಕಾರಣಕರ್ತರಾದ ಹೈಕೋರ್ಟ್ ವಕೀಲ ರಾದ ಬಿಎಸ್ ಪ್ರಸಾದ್ ಅವರನ್ನ ಅಭಿನಂದಿಸಿ ಈ ಕಾರ್ಯ ಎಲ್ಲೆಡೆ ಹರಡಲಿ. ಅದನ್ನು ಕಾಯಕ ವ್ಯಾಪಕಗೊಂಡಾಗ ಮಲೆನಾಡಿನ ಜನರ ಸಮಸ್ಯೆಗೂ ಪರಿಹಾರ ಸಿಗಬಹುದು ಎಂದರು.
ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಗಿಡ ನೆಟ್ಟು ಮಾತನಾಡಿ, ಇದ್ದ ಜಾಗದಲಿಲ್ಲ ಬಗರ್ ಹುಕುಂ ಮಾಡಿ ಅಡಿಕೆ ಗಿಡ ನೆಡುವ ಈ ಕಾಲದಲ್ಲಿ ಅರಣ್ಯ ಬೆಳೆ ಸುತ್ತಿರುವ ಪ್ರಸಾದ್ ಅವರ ಕಾರ್ಯ ಶ್ಲಾಘನೀಯ ಎಂದರು.
ಮಂಡೆ ಗದ್ದೆ ವಲಯ ಅರಣ್ಯಾಧಿಕಾರಿಗಳಾದ ಆದರ್ಶ್ ಅವರು ಮಾತನಾಡಿ ಸಿಕೊಂಡು ಅರಣ್ಯ ಬೆಳೆಸಲು ಮುಂದಾಗಬೇಕು ಎಂದರು.
Forest Construction ಈ ಸಂದರ್ಭದಲ್ಲಿ ಮಂಡಗದ್ದೆ ವಲಯ ಅರಣ್ಯಾಧಿಕಾರಿಗಳಾದ ಆದರ್ಶ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗವೇಣಮ್ಮ ಪಿ, ಡಿ ಓ ಗಣೇಶ್, ವಕೀಲ ಬಿಎಸ್ ಪ್ರಸಾದ್, ವನ ನಿರ್ಮಾಣದ ಪ್ರಯೋಜಕರಾದ ಶ್ರೀಧರ್, ಹನಿಯ ರವಿ ನಿರೂಪಣೆ ಮಾಡಿದರು. ಶ್ರೀಮತಿ ಸುಮಾ ಅವರು ಸ್ವಾಗತಿಸಿದರು. ಇನ್ನೂ ಮುಂತಾದವರು ಉಪಸ್ಥಿತರಿದ್ದರು.