DVS Arts and Science college ಪ್ರತಿಯೊಬ್ಬರಲ್ಲಿಯೂ ನಾಯಕತ್ವ ಗುಣ, ಮನೋಭಾವದ ಅಗತ್ಯ ಇದ್ದು, ಸದೃಢ ನಾಯಕರ ಮುಂದಾಳತ್ವದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಜೀವನದಲ್ಲಿ ಉನ್ನತ ಸಾಧನೆ ಮಾಡಲು ನಾಯಕತ್ವ ಮನೋಭಾವ ಸಹಕಾರಿ ಎಂದು ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಹೇಳಿದರು.
ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಪದವಿಪೂರ್ವ ( ಸ್ವತಂತ್ರ ) ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ ನಾಯಕತ್ವ ತರಬೇತಿ ಶಿಬಿರ ” ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ದೃಷ್ಠಿಯಿಂದ ಇಂತಹ ತರಬೇತಿ ಶಿಬಿರಗಳು ತುಂಬಾ ಉಪಯುಕ್ತ ಆಗಲಿದೆ. ಸಂಪನ್ಮೂಲ ವ್ಯಕ್ತಿಗಳು ನೀಡುವ ಜೀವನ ಮೌಲ್ಯಯುತ ಅಂಶಗಳನ್ನು ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸದೃಢ ವ್ಯಕ್ತಿತ್ವ ನಿರ್ಮಾಣವಾಗುವ ಜತೆಯಲ್ಲಿ ಸಮಾಜದಲ್ಲಿ ಉನ್ನತ ಹಂತಕ್ಕೇರಲು ನೆರವಾಗುತ್ತದೆ ಎಂದು ತಿಳಿಸಿದರು.
ಮುಂಬೈನ ಎಂ.ಆರ್.ಪೈ ಫೌಂಡೇಷನ್‌ನ ವಿವೇಕ್ ಡಿ.ಪಾಟಕಿ ಮಾತನಾಡಿ, ಸಂವಹನ ಕೌಶಲ್ಯ ಪ್ರತಿಯೊಬ್ಬರಿಗೂ ಅವಶ್ಯ. ಗಟ್ಟಿ ಧ್ವನಿಯಲ್ಲಿ ವಿಷಯ ಪ್ರಸ್ತುತಪಡಿಸುವ ಸಂವಹನ ನಡೆಸಲು ಬರಬೇಕು. ಇದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಆತ್ಮಸ್ಥೈರ್ಯದ ಕೊರತೆ ಇದ್ದರೆ ಸಂವಹನ ನಡೆಸುವುದು ಸಹ ಕಷ್ಟವಾಗುತ್ತದೆ. ನಾಯಕರಲ್ಲಿ ಇರುವ ಕೌಶಲ್ಯ ಶ್ರೇಷ್ಠ ಸಂವಹನ ನಡೆಸುವುದು ಎಂದು ಹೇಳಿದರು.
ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಪದವಿಪೂರ್ವ ( ಸ್ವತಂತ್ರ ) ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಶಕ್ತಿ ಸಾಮಾರ್ಥ್ಯ ಹೊಂದಿದ್ದು, ಯಾವುದೇ ವಿದ್ಯಾರ್ಥಿ ನಕರಾತ್ಮಕ ಆಲೋಚನೆ ಹೊಂದಬಾರದು. ಸಕರಾತ್ಮಕ ಮನಸ್ಥಿತಿ ನಮ್ಮಲ್ಲಿ ಒಳ್ಳೆಯ ಆಲೋಚನೆಗಳನ್ನು ಮೂಡಿಸುತ್ತದೆ. ಇದರಿಂದ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲು ಸಾಧ್ಯವಿದೆ ಎಂದು ತಿಳಿಸಿದರು.
DVS Arts and Science college ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಮುಂಬೈ ಎಂ.ಆರ್.ಪೈ ಫೌಂಡೇಷನ್‌ನ ಸಚಿನ್ ಕಾಮತ್, ದೇಶಿಯ ವಿದ್ಯಾಶಾಲಾ ಸಮಿತಿಯ ಶಿಕ್ಷಕ ಪ್ರತಿನಿಧಿ ಉಮೇಶ್ ಎಚ್.ಸಿ. ಮತ್ತಿತರರು ಉಪಸ್ಥಿತರಿದ್ದರು.