Tuesday, October 1, 2024
Tuesday, October 1, 2024

Uttaradi Math ನಮ್ಮವರ ಕ್ಷೇಮ ನಮ್ಮನಾಡು ನಮ್ಮದೇಶ ಎಂಬುದನ್ನ ಅಭ್ಯಾಸಮಾಡಿಕೊಂಡರೆ ಜೀವನ ಸುಖಮಯ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Math ಹೊಳೆಹೊನ್ನೂರು : ನನ್ನದು, ನನಗೆ , ನನ್ನಿಂದ ಎಂಬ ಸ್ವಾರ್ಥದಿಂದ ಹೊರಬಂದು ನಮ್ಮವರು, ನನ್ನ ಪರಿವಾರ, ನಮ್ಮವರ ಕ್ಷೇಮ, ನಮ್ಮ ನಾಡು, ನಮ್ಮ ದೇಶ ಎಂಬುದನ್ನು
ಅಭ್ಯಾಸ ಮಾಡಿಕೊಂಡರೆ ಜೀವನ ಸುಖಮಯವಾಗಿರುತ್ತದೆ ಎಂದು ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.

28ನೇ ಚಾತುರ್ಮಾಸ್ಯ ಸಂದರ್ಭ ಇಲ್ಲಿನ ಶ್ರೀ ಸತ್ಯಧರ್ಮ ತೀರ್ಥರ ವೃಂದಾವನ ಸನ್ನಿಧಾನದಲ್ಲಿ ಭಾಗತ ದಶಮ ಸ್ಕಂದ ಪ್ರವಚನ ನೀಡಿದ ಅವರು, ನಮ್ಮಲ್ಲಿರುವ ಸ್ವಾರ್ಥಗಳ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಂಡರೆ ವಿಶ್ವವೇ ನಮ್ಮದಾಗುತ್ತದೆ ಎಂದರು.

ಕೇವಲ ನನಗಲ್ಲದೆ ನನ್ನ ಪರಿವಾರಕ್ಕೆ, ನನ್ನ ಬಂಧು ಮಿತ್ರರಿಗೆ ಸಮಸ್ತ ವಿಶ್ವದ ಸಜ್ಜನರಿಗೆಲ್ಲ ದೇವರು ಮಾಡಿದ ಉಪಕಾರ ಎಷ್ಟೆಂದು ಸ್ಮರಿಸಬೇಕು. ಮಹಾಭಾರತದ ಪರೀಕ್ಷಿತನಿಗೆ ಗರ್ಭದಿಂದಲೇ ರಕ್ಷಣೆ ಮಾಡಿದಂತೆ ದೇವರು ನಮ್ಮನ್ನೂ ಸದಾಕಾಲ ಕಾಪಾಡಿದ್ದಾನೆ. ಕಾಪಾಡುತ್ತಲೇ ಇರುತ್ತಾನೆ. ಒಂದು ರೀತಿಯಲ್ಲಿ ನಾವೆಲ್ಲರೂ ಸಹ ವಿಷ್ಣುವಿನಿಂದ ರಕ್ಷಣೆಗೊಂಡ ಪರೀಕ್ಷಿತರೇ ಸರಿ ಎಂದರು.

ಮಹಾಭಾರತವನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಕೆಲ ಪ್ರಸಂಗಗಳನ್ನು ಶ್ರೀಗಳು ಉಲ್ಲೇಖಿಸಿದರು.

ಮನುಷ್ಯನಿಗೆ ಸಂಕುಚಿತ ಬುದ್ಧಿ ಸರ್ವೇಸಾಮಾನ್ಯ. ತಾನು ಪರರಿಗೆ ಮಾಡಿದ ಸಣ್ಣಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಆದರೆ ಇನ್ನೊಬ್ಬರು ಮಾಡಿದ ಮಹಾ ಉಪಕಾರವನ್ನು ಎಂದಿಗೂ ಸ್ಮರಿಸುವುದಿಲ್ಲ. ಹಾಗೆಯೇ ತಾನು ಇನ್ನೊಬ್ಬರಿಗೆ ಎಷ್ಟೇ ಅಪಕಾರ ಮಾಡಿದರೂ ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಆದರೆ ಇನ್ನೊಬ್ಬರು ಮಾಡಿದ ಸಣ್ಣ ಅಪಕಾರವನ್ನು ಜೀವನವಿಡಿ ಮರೆಯುವುದಿಲ್ಲ. ಇದು ಮನುಷ್ಯನ ಸಹಜ ಸ್ವಭಾವ. ಇಂತಹ ಮನೋಧರ್ಮದಲ್ಲಿ ದೇವರನ್ನು ನೆನೆಯುವುದಾದರೂ ಹೇಗೆ..? ಅದಕ್ಕೆ ಪರೀಕ್ಷಿತ ನಂತೆ ಕೇವಲ ತನಗೆ ಮಾಡಿದ ಉಪಕಾರವನ್ನು ಸ್ಮರಿಸಿದೇ ತನ್ನ ಹಿರಿಯರಿಗೆ ಹಾಗೂ ತನ್ನ ಬಂಧು ಮಿತ್ರರಿಗೆ, ನಂತರ ಇಡೀ ವಿಶ್ವಕ್ಕೆ ದೇವರು ಮಾಡುವ ಉಪಕಾರವನ್ನೆಲ್ಲ ನಾವು ಸ್ಮರಿಸಬೇಕು. ಆಗ ಶ್ರದ್ಧೆ ಭಕ್ತಿ ಇಮ್ಮಡಿಯಾಗುವುದು. ವರ್ತಮಾನದ ಬದುಕು ಬಂಗಾರಮಯವಾಗುವುದು ಎಂದರು.

ಕೇವಲ ನನ್ನ ಕಷ್ಟಗಳು ಅಂತ ನೋಡದೆ ನನ್ನೊಂದಿಗೆ ಎಲ್ಲ ವಿಶ್ವವೇ ನನ್ನ ಪರಿವಾರ ಎಲ್ಲ ಸಜ್ಜನರು ನನ್ನ ಬಾಂಧವರು ಎಂದು ತಿಳಿದು, ದೇವರು ಎಲ್ಲರ ಕಷ್ಟಗಳನ್ನು ಪರಿಹಾರ ಮಾಡಲಿ ಹಾಗೂ ಮಾಡುತ್ತಾನೆ ಎಂಬ ಚಿಂತನೆಯೇ ನಮ್ಮದಾಗಬೇಕು. ಕೇವಲ ಬಂದ ಕಷ್ಟಗಳನ್ನು,ಆದ ರೋಗಗಳನ್ನು ದೇವರ ಮುಂದೆ ತೋಡಿಕೊಂಡು ಸದಾ ರೋದಿಸುವುದಕ್ಕಿಂತ, ಬಾರದೇ ಇರುವ ಕಷ್ಟಗಳನ್ನು ಪಟ್ಟಿಮಾಡಿ. ಆಗದೇ ಇರುವ ಮಹಾ ಮಹಾ ರೋಗಗಳನ್ನು ಪಟ್ಟಿ ಮಾಡಿ. ನೆನೆದಾಗ ಅದನ್ನು ಸಂತೋಷದಿಂದ ದೇವರ ಮುಂದೆ ಹೇಳಿಕೊಂಡಾಗ ನಿಶ್ಚಿತವಾಗಿ ಮನಸ್ಸಿಗೆ ದುಃಖಕ್ಕಿಂತಲೂ ಸುಖ ಸಮಾಧಾನಗಳೇ ದೊರಕುವುದು ನಿಶ್ಚಿತ ಎಂದರು.

Uttaradi Math ಇದಕ್ಕೂ ಮೊದಲು ಭಾರತೀರಮಣಾಚಾರ್ಯ ಪ್ರವಚನ ನೀಡಿದರು.

ಶಶಿಆಚಾರ್ಯ,
ಪಂಡಿತರಾದ ನವರತ್ನ ಸುಬ್ಬಣ್ಣಾಚಾರ್ಯ, ಮಠದ ವ್ಯವಸ್ಥಾಪಕ ನವರತ್ನ ಶ್ರೀನಿವಾಸಾಚಾರ್ಯ, ಪ್ರಕಾಶಾಚಾರ್ಯ
ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...