DVS College Shivamogga ವಿದ್ಯಾರ್ಥಿನಿಯರು ವೈದ್ಯಕೀಯ ತಪಾಸಣೆಗಳ ಸದುಪಯೋಗವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬೇಕು.
ಈ ಮೂಲಕ
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವೈದ್ಯರಲ್ಲಿ ತಮ್ಮ ಗೊಂದಲಗಳನ್ನು
ನಿವಾರಿಸಿಕೊಂಡು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕಾಲೇಜಿನ
ಮಹಿಳಾ ಸಬಲೀಕರಣ ಘಟಕದ ಪ್ರೊ. ಸಾವಿತ್ರಿ ಎಸ್.ಕೆ. ತಿಳಿಸಿದರು.
ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೆಜು, ಮಹಿಳಾ ಸಬಲೀ ಕರಣ ಘಟಕ
ಮತ್ತು ಐಕ್ಯೂಎಸಿ ಯ ಆಶ್ರಯದಲ್ಲಿ ಡಿವಿಎಸ್ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ
ಆರೋಗ್ಯ ಶಿಬಿರದಲ್ಲಿ ಪ್ರಮುಖರಾಗಿ ಮಾತನಾಡಿದರು.
ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚು ಹೆಚ್ಚು
ನಡೆಯಬೇಕು. ವಿದ್ಯಾರ್ಥಿನಿಯರು ಇಂತಹ ತಪಾಸಣೆಗಳಲ್ಲಿ ಭಾಗವಹಿಸಿ
ಮುಕ್ತವಾಗಿ ವೈದ್ಯರೊಂದಿಗೆ ಸಮಾ ಲೋಚನೆ ನಡೆಸಿ ತಮ್ಮ ಆರೋಗ್ಯ
ಸಮಸ್ಯೆಗಳನ್ನು ಬಗೆಹರಿಸಿಕೊಳ್ಳ ಬೇಕೆಂದು ಅವರು ಕರೆ ನೀಡಿದರು.
ಇಂದಿನ ಒತ್ತಡದ ಬದುಕಿನಲ್ಲಿ ನಾವು ಆರೋಗ್ಯದ ಕಡೆ ಗಮನ
ಹರಿಸುವುದನ್ನೇ ಮರೆತಿದ್ದೇವೆ. ಹಣ ಆಸ್ತಿಗಿಂತ ಇಂದು ಆರೋಗ್ಯವನ್ನು
ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆರೋಗ್ಯದಿಂದಿದ್ದರೆ ಏನನ್ನು
ಬೇಕಾದರೂ ಸಾಧಿಸಬಹುದು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ
ಯುವ ಜನಾಂಗದ ಜವಾಬ್ದಾರಿ ಸಾಕಷ್ಟಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ
ಆರೋಗ್ಯ ಕಾಪಾಡಿಕೊಂಡು, ಓದಿನ ಕಡೆ ಹೆಚ್ಚು ಗಮನ ಕೊಡಬೇಕೆಂದು
ಕರೆ ನೀಡಿದರು.
DVS College Shivamogga ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ| ಪುಂಡಲಿಕ ಅವರು ಮಾತನಾಡಿ, ದೈಹಿಕ
ಶುದ್ಧತೆಯು ಮಾನಸಿಕ ಸಬಲತೆಯನ್ನು ಹೆಚ್ಚಿಸಬಲ್ಲದು. ದೈಹಿಕ ಸಬಲತೆಗೆ
ಕೆಲವು ಅಪಾಯಕಾರಿ ವಿಟಮಿನ್ ಮಾತ್ರೆಗಳನ್ನು ತೆಗೆದು ಕೊಳ್ಳುವುದು
ಕೆಲವರಲ್ಲಿ ರೂಡಿಯಲ್ಲಿದೆ. ಯಾವುದೇ ಆರೋಗ್ಯದ ಸಮಸ್ಯೆಗಳಿಗೆ
ವೈದ್ಯರ ಸಲಹೆ ಸೂಚನೆಗಳ ಮೇರೆಗೆ ಮಾತ್ರೆಗಳನ್ನು
ತೆಗೆದುಕೊಳ್ಳುವುದು ಸುಕ್ತ ಎಂದರು.
ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಡಾ. ಸಯ್ಯದ್, ಡಾ. ಪ್ರವಲಿಕ, ಡಾ.
ಪರ್ಣಿಕ ಅವರು ತಪಾಸಣೆ ನಡೆಸಿಕೊಟ್ಟರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ
ಚೇತನ್, ಡಾ. ರಾಜೇಶ್ವರಿ ಮತ್ತು ಪ್ರೊ. ರೂಪ, ಐಕ್ಯೂಎಸಿ ಯ ಪ್ರೊ.
ಕುಮಾರ ಸ್ವಾಮಿ ಉಪಸ್ಥಿತ ರಿದ್ದರು. ಸುಮಾರು 500ಕ್ಕೂ ಹೆಚ್ಚು
ವಿದ್ಯಾರ್ಥಿನಿಯರು ಭಾಗವಹಿಸಿದ್ದರು.