Chikkamagaluru ದಲಿತ ಯುವಕ ಮತ್ತು ಮೇಲ್ವರ್ಗದ ಯುವತಿ ಪರಸ್ಪರ ಪ್ರೇಮಿಸಿದ ಕಾರಣ ಕುಟುಂಬದವರು ಮಗಳನ್ನು ಹತ್ಯೆಗೈದು ಯುವಕನ ಸಾವಿನ ಕಾರಣವಾಗಿದೆ. ಅಂತಹವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಿ ಗಡಿಪಾರು ಮಾಡಬೇಕು ಎಂದು ಜಿಲ್ಲಾ ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸರ್ಕಾರವನ್ನು ಒತ್ತಾಯಿ ಸಿದ್ದಾರೆ.
ಈ ಸಂಬಂಧ ಗುರುವಾರ ಹೇಳಿಕೆಯಲ್ಲಿ ತಿಳಿಸಿರುವ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಕುಮಾರ್ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗಂಗಾರಾಜು ಎಂಬುವ ದಲಿತ ಯುವಕ ಮೇಲ್ವರ್ಗದ ಯುವತಿ ಕೀರ್ತಿ ಪರಸ್ಪರ ಪ್ರೇಮಿಸುತ್ತಿದ್ದರು. ಇದನ್ನು ಸಹಿಸಲಾಗದ ಆಕೆಯ ಕುಟುಂಬದವರು ಕತ್ತುಹಿಸುಕಿ ಕೊಲೆಗೈದಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಕೀರ್ತಿ ಕುಟುಂಬದವರು ಹೀನಾಯವಾಗಿ ಹತ್ಯೆಗೈದಿರುವ ಪರಿಣಾಮ ಇದನ್ನು ಸಹಿಸಿಕೊಳ್ಳಲಾರದ ಯುವಕ ಗಂಗಾರಾಜು ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ಸಂಭವಿಸಿದೆ. ಈ ಸಂಬಂಧ ರಾಜ್ಯಸರ್ಕಾರ ಯುವತಿ ಯ ಕುಟುಂಬದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Chikkamagaluru ಜಾತ್ಯಾತೀತ ದೇಶದಲ್ಲಿ ಹೊಸ ಉತ್ಸಾಹವನ್ನಿಟ್ಟುಕೊಂಡು ಪ್ರೇಮಿಸಿದ ಜೋಡಿಗಳನ್ನು ಕೇವಲ ಜಾತಿ ಆಧಾರದ ಹೆಸರಿನಲ್ಲಿ ಕತ್ತುಹಿಸುಕಿ ಕೊಲೆಗೈದಿರುವುದು ದುರ್ದೈವದ ಸಂಗತಿ. ಇಂತಹ ಹೀನಾಮನಸ್ಸಿನ ವ್ಯಕ್ತಿಗಳಿ ಗೆ ರಾಜ್ಯಸರ್ಕಾರ ಕಠಿಣ ಶಿಕ್ಷೆ ವಿಧಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದಿದ್ದಾರೆ.