Friday, November 22, 2024
Friday, November 22, 2024

Rotary Club Shivamogga ತಾಯಂದಿರು ಮತ್ತು ಮಕ್ಕಳ ಪೌಷ್ಠಿಕತೆ ಬಗ್ಗೆ ರೋಟರಿ ಸಂಸ್ಥೆಯಿಂದ ಉದಾರ ಕೊಡುಗೆ

Date:

Rotary Club Shivamogga ಬಾಣಂತಿಯರು ಪೌಷ್ಠಿಕ ಆಹಾರ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ರೋಟರಿ ವಲಯ ಹತ್ತರ ಸಹಾಯಕ ಗರ‍್ನರ್ ರೋ.ರಾಜೇಂದ್ರ ಪ್ರಸಾದ್ ಸಲಹೆ ನೀಡಿದರು.

ಶಿವಮೊಗ್ಗದ ಅಶೋಕನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕ್ಲಬ್ ವತಿಯಿಂದ ನಡೆದ ಬಾಣಂತಿಯರ ಮಡಿಲು ಕಿಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದ ಎಲ್ಲ ರೋಟರಿ ಕ್ಲಬ್‌ಗಳು ಜುಲೈ ತಿಂಗಳನ್ನು ಮಕ್ಕಳ ಹಾಗೂ ತಾಯಿಯ ಆರೋಗ್ಯದ ಉನ್ನತಿಗಾಗಿ ಮೀಸಲಿಟ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತವೆ. ತಾಯಂದಿರು ಹಾಗೂ ಮಕ್ಕಳ ಪೌಷ್ಠಿಕಾಂಶ ಉತ್ತಮಗೊಳಿಸುವ ಹಾಗೂ ಅವರಿಗೆ ಉಪಯೋಗವಾಗುವಂತಹ ವಸ್ತುಗಳನ್ನು ನೀಡುವುದಕ್ಕೆ ರೋಟರಿ ಸಂಸ್ಥೆ ಉದಾರ ಕೊಡುಗೆಗಳನ್ನು ನೀಡುತ್ತದೆ ಎಂದರು.

ಭಾರತದಂತಹ ದೇಶದಲ್ಲಿ ಪೌಷ್ಠಿಕಾಂಶ ಕೊರತೆಯ ಅನೇಕ ಉದಾಹರಣೆಗಳು ಇಂದಿಗೂ ಇವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಕೆಲಸ ಮಾಡುತ್ತಿದೆ. ಈಗಾಗಲೇ ಪೋಲಿಯೋ ನಿರ್ಮೂಲನೆಗೆ ಕಳೆದ 40 ವರುಷಗಳಿಂದ ಕೆಲಸ ಮಾಡಿ ಭಾರತ ಪೊಲೀಯೋ ಮುಕ್ತ ಎಂದು ಗುರುತಿಸಲು ಕಾರಣವಾಗಿದೆ ಎಂದು ವಿವರಿಸಿದರು.

ರೋಟರಿ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯದಂತಹ ಮುಖ್ಯ ವಿಷಯಗಳ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿದೆ. ದೇಶದ ಮಕ್ಕಳು ಸುಶಿಕ್ಷಿತರಾಗುವ ಕಡೆಗೆ ಗಮನ ನೀಡಬೇಕು ಹಾಗೂ ಅವರ ಆರೋಗ್ಯದ ಬಗ್ಗೆಯೂ ಸಾಮಾಜಿಕವಾಗಿ ಕಾಳಜಿ ತೆಗೆದುಕೊಳ್ಳಬೇಕು ಎಂಬುದು ನಮ್ಮ ಧ್ಯೇಯ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಪಂಚದ 35 ಸಾವಿರ ಕ್ಲಬ್‌ಗಳು ಕೆಲಸ ಮಾಡುತ್ತಿವೆ ಎಂದು ವಿವರಿಸಿದರು.

ತಾಯಂದಿರು ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನಗಹರಿಸಬೇಕಾಗುತ್ತದೆ. ಕಾಲಕಾಲಕ್ಕೆ ಅವರಿಗೆ ನೀಡಬೇಕಾದ ಪೌಷ್ಠಿಕ ಆಹಾರದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಸರಕಾರಿ ಸಂಸ್ಥೆಗಳು ಇದರ ಬಗ್ಗೆ ಅವರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿವೆ. ಕಾಲದಿಂದ ಕಾಲಕ್ಕೆ ನಿಖರವಾಗಿ ಆರೋಗ್ಯ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳು ನೀಡುವ ಸಲಹೆ ಸೂಚನೆ ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋ.ರೇಣುಕಾರಾಧ್ಯ ಮಾತನಾಡಿ, ತಾಯಂದಿರ ಹಾಗೂ ಮಕ್ಕಳ ಆರೋಗ್ಯಕ್ಕಾಗಿ ನಡೆಸುವ ಅನೇಕ ಕಾರ್ಯಕ್ರಮದಲ್ಲಿ ಮಡಿಲು ಕಿಟ್ ವಿತರಣೆ ಒಂದಾಗಿದೆ. ಈ ಮೂಲಕ ಎಲ್ಲರು ತಮ್ಮ ಬಾಲ್ಯದ ನೆನೆಪುಗಳನ್ನು ಮತ್ತೆ ಸ್ಮರಿಸುವ ಹಾಗೂ ಶ್ರಮಿಕ ಹಾಗೂ ಬಡ ತಾಯಂದಿರ ತೊಂದರೆಗಳನ್ನು ದೂರ ಮಾಡುವ ಸಣ್ಣ ಪ್ರಯತ್ನವಾಗಿದೆ ಎಂದು ಹೇಳಿದರು.

ರೋಟರಿ ಸಂಸ್ಥೆಯಲ್ಲಿ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಸಾಮಾಜಿಕ ಬದ್ಧತೆ ಹಾಗೂ ಸೇವಾ ಕಾರ್ಯಕ್ರಮಗಳು ರೋಟರಿಯಲ್ಲಿ ನಿತ್ಯ ನಡೆಯುತ್ತಿವೆ. ಈ ಮೂಲಕ ರೋಟರಿಯ ಸದಸ್ಯರು ಸಮಾಜಕ್ಕೆ ತಮ್ಮ ಸೇವಾ ಕಾರ್ಯದ ಮೂಲಕ ಕೈಂಕರ್ಯ ಮಾಡುತ್ತಿದ್ದಾರೆ ಎಂದರು.

ಜಗತ್ತಿನ ಅನೇಕ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ರೋಟರಿ ಸಂಸ್ಥೆ ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅದಕ್ಕೆ ರೋಟರಿಯ ಎಲ್ಲ ಸದಸ್ಯರು ದೇಣಿಗೆ ನೀಡಿ ತಮ್ಮ ಸಣ್ಣ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಶೋಕನಗರ, ಚಾನೆಲ್ ಏರಿಯಾ, ಅಶೋಕನಗರ ಕಾಲೋನಿ ಅಂಗನವಾಡಿಯ 10 ಮಂದಿ ಬಾಣಂತಿಯರಿಗೆ ಶ್ರೀಮತಿ ರೂಪಾ ಪುಣ್ಯಕೋಟಿ ಅವರ ತಾಯಿ ದಿ.ಕಸ್ತೂರಿ ಪುಣ್ಯಕೋಟಿ ಅವರ ಸ್ಮರಣಾರ್ಥ ಮಡಿಲು ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಉಸ್ತುವಾರಿಯನ್ನು ಕ್ಲಬ್ ಕಾರ್ಯದರ್ಶಿ ರೋ.ರೂಪಾ ಪುಣ್ಯಕೋಟಿ ಅವರು ವಹಿಸಿದ್ದರು.

Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿಯ ಹಿರಿಯ ಸದಸ್ಯರಾದ ರೋ.ಭಾರದ್ವಾಜ್, ರೋ.ಸುರೇಶ, ರೋ.ಹರಿಶ್ ಪಟೇಲ್ ಹಾಗೂ ರೋ.ರಾಜಶೇಖರ್ ಹಾಜರಿದ್ದರು. ಅಂಗನವಾಡಿ ಶಿಕ್ಷಕಿಯರಾದ ರೇಣುಕಾ, ಜಯಲಕ್ಷ್ಮಿ ನಫೀಜಾ.ಪರ್ವಿನ್ ಹಾಗೂ ನರ್ಸ್ ರಂಜಿತ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...