Department of Social Welfare ಶಿವಮೊಗ್ಗ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು 2023-24ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ 6ನೇ ತರಗತಿಗೆ ವಿಶೇಷ ದುರ್ಬಲ ವರ್ಗದಡಿ ಗುರುತಿಸಲ್ಪಟ್ಟ ಪೌರ ಕಾರ್ಮಿಕರ/ ಸಫಾಯಿ ಕರ್ಮಚಾರಿ/ ಮ್ಯಾನ್ಯುಯಲ್ ಸ್ಯಾ0ವೆಂಜರ್/ ಸ್ಮಶಾನ ಕಾರ್ಮಿಕರ/ ದೇವದಾಸಿ/ ಅಲೆಮಾರಿ/ ಅರೆ ಅಲೆಮಾರಿ ಸಮುದಾಯದ ಮಕ್ಕಳಿಗೆ ಪ್ರವೇಶ ಪರೀಕ್ಷೆಯಿಲ್ಲದೆ ಪ್ರವೇಶ ಕಲ್ಪಿಸಲು ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಉಚಿತ ವಸತಿ, ಊಟ ಸಹಿತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಆಸಕ್ತರು ಹತ್ತಿರದ ಯಾವುದಾದರೂ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಶ್ರೀಮತಿ ಇಂದಿರಾ ಗಾಂಧಿ/ ಡಾ. ಬಿ.ಆರ್. ಅಂಬೇಡ್ಕರ್/ ಅಟಲ್ ಬಿಹಾರಿ ವಾಜಪೇಯಿ/ ಶ್ರೀ ನಾರಾಯಣ ಗುರು ವಸತಿ ಶಾಲೆಗಳಿಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿ ಪಡೆದು ೬ನೇ ತರಗತಿ ದಾಖಲಾತಿಗಾಗಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಮನವಿಯನ್ನು ಜುಲೈ- ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Department of Social Welfare ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಪ್ರಾಂಶುಪಾಲರು 9964760766 , ಭದ್ರಾವತಿ-990220754, ತೀರ್ಥಹಳ್ಳಿ-9972662860, ಸಾಗರ – 9449758378, ಹೊಸನಗರ-9620793267, ಶಿಕಾರಿಪುರ 9901325156 ಹಾಗೂ ಸೊರಬ-9740934526 ಗಳನ್ನು ಸಂಪರ್ಕಿಸಬಹುದು.