Monday, December 15, 2025
Monday, December 15, 2025

Sahyadri Arts College Shivamogga ಸಿನಿಮಾ ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸತು ಬಂದಿದೆ ಅಧ್ಯಯನದಿಂದ ಅರ್ಥಮಾಡಿಕೊಳ್ಳಬೇಕು- ನಾಗಭೂಷಣ್

Date:

Sahyadri Arts College, Shivamogga ಸಿನಿಮಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯಾಗಿರುವುದರಿಂದ ಸಾಕಷ್ಟು ಬೆಳವಣಿಗೆ, ಹೊಸತನ ಬಂದಿದೆ. ಇದನ್ನು ಅಧ್ಯಯನದ ಮೂಲಕ ಅರ್ಥ ಮಾಡಿಕೊಂಡು ಆ ರಂಗದಲ್ಲಿ ಹೆಜ್ಜೆ ಇಡಬೇಕು ಎಂದು ಬೆಳ್ಳಿಮಂಡಲದ ಕಾರ‍್ಯದರ್ಶಿ, ಪ್ರಾಚಾರ್ಯ ರಾದ ನಾಗಭೂಷಣ ಕರೆ ನೀಡಿದರು.

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅಲ್ಲಿನ ಕನ್ನಡ ಸಾಹಿತ್ಯ ವೇದಿಕೆಯು ಬೆಳ್ಳಿಮಂಡಲದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸಿನಿಮಾ ರಸಗ್ರಹಣ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹಳೆಯ ಸಿನಿಮಾವನ್ನು ನೋಡಬೇಕು. ಸಿನಿಮಾ ಒಂದು ಕಲಾತ್ಮಕ ಜಗತ್ತು. ಅದು ವಿಶಾಲವಾಗಿ ಬೆಳೆದಿದೆ. ಸಿನಿಮಾ ನೋಡುತ್ತಲೇ ಅದನ್ನು ಅರ್ಥ ಮಾಡಿಕೊಂಡು ಸಿನಿಮಾ ತಯಾರು ಮಾಡುವುದನ್ನು ಕಲಿಯಬೇಕು. ಕಾಲೇಜಿನಲ್ಲೇ ಸಿನಿಮಾ ನಿರ್ಮಿಸಬಹುದು. ಸಿನಿಮಾವೂ ಒಂದು ಶಿಕ್ಷಣ . ಅದರ ಮೂಲಕ ಅಬಿವೃದ್ಧಿಯಾಗಬೇಕು. ನಿಜವಾದ ಕಲೆಗೆ ಗಡಿ ಇಲ್ಲ, ಭಾಷೆ ಇಲ್ಲ ಎಂದು ವಿವರಿಸಿದರು.

ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆಯ ಸಂಚಾಲಕಿ ಪ್ರೊ. ಹಾಲಮ್ಮ ಮಾತನಾಡಿ, ಸಿನಿಮಾ ಕೇವಲ ಮನರಂಜನೆಗೆ ಮಾತ್ರವಲ್ಲ, ಅದರಲ್ಲಿ ಬೇರೆ ಬೇರೆ ಆಯಾಮಗಳಿವೆ. ಸಾಮಾಜಿಕವಾದ ಅಂಶಗಳಿವೆ. ಬದುಕಿದೆ, ಕಷ್ಟ-ನಷ್ಟವಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದನ್ನು ಅದು ಕಲಿಸುತ್ತದೆ. ಇಂದಿನ ಸಮಾಜದಲ್ಲಿ ಸಮಾಜ ವಿಘಟನೆಯ ಘಟನೆಗಳು ಹೆಚ್ಚುತ್ತಿವೆ. ಸಿನಿಮಾ ಜನರನ್ನು ಒಂದುಗೂಡಿಸುವ ಅದ್ಭುತ ಶಕ್ತಿಯನ್ನು ಹೊಂದಿರುವುದರಿಂದ ಸಿನಿಮಾ ನೋಡಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವದು ಎಂದು ನಿರ್ಧರಿಸುವ ಶಕ್ತಿ ಬರುತ್ತದೆ ಎಂದು ಹೇಳಿದರು.

ಬೆಳ್ಳಿಮಂಡಲದ ನಿರ್ದೇಶಕ ಜಿ. ವಿಜಯಕುಮಾರ್ ಮಾತನಾಡಿ, ಬದುಕನ್ನು ಮತ್ತು ಮನಸ್ಸನ್ನು ಅರಳಿಸುವ ಕಲೆ ಸಿನಿಮಾದಲ್ಲಿದೆ. ಮನಸನ್ನು ಕೆರಳಿಸುವ ಸಂಗತಿಗಳು ದಿನನಿತ್ಯ ನಮ್ಮೆದುರು ನಡೆಯುತ್ತವೆ. ಅದನ್ನು ಗಣನೆಗೆ ತೆಗದುಕೊಳ್ಳದೆ ಬದುಕನ್ನು ಅರಳಿಸುವ ಕಲೆ ಆಯ್ದುಕೊಳ್ಳಿ, ವಿದ್ಯಾರ್ಥಿಗಳಲ್ಲಿ ಸ್ವಂತಿಕೆಯ ಶಕ್ತಿ ಇದೆ. ಅದನ್ನು ಬಳಸಿಕೊಂಡು ಉತ್ತಮ ಸಿನಿಮಾ ತಯಾರಕರಾಗಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕಾರ್ಯಗಾರ ಕೆ. ಬಿ. ಧನಂಜಯ, ಹಿಂದಿನ ಕಾಲದಲ್ಲಿ ಸಿನಿಮಾ ಎಂದರೆ ಮನೆಮಂದಿಯೆಲ್ಲ ಒಟ್ಟಿಗೆ ಹೋಗುತ್ತಿದ್ದರು. ಆದರೆ ಈಗ ಅದು ಬದಲಾಗಿದೆ. ಆಗ ಮನರಂಜನೆಯನ್ನಾಗಿ ಮಾತ್ರ ಪರಿಗಣಿಸಲಾಗುತ್ತಿತ್ತು. ಈಗ ಮನೆಯಲ್ಲೇ ಕುಳಿತು ಮೊಬೈಲಿನಲ್ಲಿ ಒಬ್ಬರೇ ಸಿನಿಮಾ ನೋಡಬಹುದು. ಅದೇ ಹಿಂದಿನ ಖುಷಿ ಈಗ ಉಳಿದಿಲ್ಲ. ಇತ್ತೀಚೆಗೆ ಕಿರುಚಿತ್ರಗಳು ಹೆಚ್ಚುತ್ತಿವೆ. ಅವು ಕೂಡ ಉತ್ತಮ ಸಂದೇಶವನ್ನು ತಲುಪಿಸುತ್ತಿವೆ. ಇದರಲ್ಲಿ ಸಿನಿಮಾ ತಯಾರಕರ ಕ್ರಿಯಾಶೀಲತೆ ಮತ್ತು ಸೂಕ್ಷ್ಮ ತೆ ಇರುತ್ತದೆ. ಸಿನಿಮಾ ನೋಡುವುದಲ್ಲದೆ, ಅದನ್ನು ಅವಲೋಕಿಸುವ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕೆಂದರು.

Sahyadri Arts College, Shivamogga ವೇದಿಕೆಯಲ್ಲಿ ಬೆಳ್ಳಿಮಂಡಲದ ಸಂಚಾಲಕ ಶಂಕರ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ. ಅವಿನಾಶ್, ಪ್ರಕಾಶ್ ಮರ್ಗನಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...