Shirdi Saibaba ಚಿಕ್ಕಮಗಳೂರು, ಜಯನಗರದಲ್ಲಿರುವ ಶ್ರೀ ಕ್ಷೇತ್ರ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರದಂದು ಗುರು ಪೂರ್ಣಿಮ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು.
ಮಧ್ಯಾಹ್ನ ಸುಮಾರು 2 ಗಂಟೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾಬಾರವರಿಗೆ ಅಭಿಷೇಕ ಮಾಡಲಾಯಿತು. ಭಕ್ತರು ತಮ್ಮ ಸ್ವ ಹಸ್ತದಿಂದ ಶ್ರೀಗಳಿಗೆ ಅಭಿಷೇಕ ಹಾಗೂ ರಥಾರತಿ ಮಾಡುವುದರ ಮೂಲಕ ಬಾಬಾ ರವರ ಕೃಪೆಗೆ ಪಾತ್ರರಾದರು.
ನಂತರ ನಡೆದ ಅನ್ನ ಸಂತರ್ಪಣಾ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡರು. ಅನ್ನ ಸಂತರ್ಪಣಾ ಕಾರ್ಯ ತಡರಾತ್ರಿ ವರೆಗೂ ನಿರಂತರವಾಗಿ ನಡೆಯಿತು.
ಬಾಬಾರವರ ಮಂದಿರಕ್ಕೆ ಶ್ರೀ ಕ್ಷೇತ್ರ ಕಣಿವೆ ದಾಸರಹಳ್ಳಿಯ ಪವಾಡ ಬಸವ ಎಂದೇ ಖ್ಯಾತಿ ಪಡೆದಿರುವ ಶರಣ್ಯ ಬಸವಣ್ಣ ನವರ ಭೇಟಿಯಿಂದ ಭಕ್ತರು ಅಕ್ಷರಶಃ ಭಕ್ತಸಾಗರದಲ್ಲಿ ಮುಳುಗಿದರು.
ವಿಶೇಷ ವಾಹನದಲ್ಲಿ ಕರೆತರಲಾಗಿದ್ದ ಬಸವಣ್ಣ ವಾಹನದಿಂದ ಇಳಿದ ಕೂಡಲೇ ನೇರವಾಗಿ ಬಾಬಾರವರ ಮಂದಿರಕ್ಕೆ ಭೇಟಿಕೊಟ್ಟು ಬಾಬಾ ರವರ ಎದುರು ಹಲವು ಸಮಯ ಕುಳಿತಿದ್ದು ಬಸವಣ್ಣನವರ ಕಣ್ಣಿನಿಂದ ನೀರು ಹರಿದಿದ್ದು ಭಕ್ತರು ಮೂಕವಿಸ್ಮಿತರಾಗುವಂತೆ ಮಾಡಿತು. ನಂತರ ಬಸವಣ್ಣ ಬಾಬಾರವರ ಪಾದುಕೆಗಳಿಗೆ ತಲೆ ಮುಟ್ಟಿಸಿ ಹಲವು ಹೊತ್ತು ಮೌನವಾಗಿ ನಮನ ಸಲ್ಲಿಸುವ ಭಂಗಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ನೆರದಿದ್ದ ಭಕ್ತರು ಬಾಬಾರವರ ಮಂದಿರವನ್ನು ಅಭಿವೃದ್ದಿಪಡಿಸುವದಾಗಿ ಹೇಳಿಕೊಂಡರು.
ನಂತರ ಬಸವಣ್ಣ ಹೊರ ಬಂದು ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸಲಾಯಿತು.
ಇದೇ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥರಾದ ಎಂ.ಎಲ್.ಮೂರ್ತಿ ಮಾತನಾಡಿ, ಪವಾಡ ಶರಣ್ಯ ಬಸವಣ್ಣ ಬಾಬಾ ರವರ ಮಂದಿರಕ್ಕೆ ಭೇಟಿ ಕೊಟ್ಟಿರುವುದರಿಂದ ನಮಗೆ ಮಂದಿರದ ಜೀಣೋದ್ಧಾರ ಶೀಘ್ರದಲ್ಲಿ ಮಾಡುವ ಪ್ರೇರಣೆ ಉಂಟಾಗಿದೆ ಎಂದು ತಿಳಿಸಿದರು.
Shirdi Saibaba ನೆರದಿದ್ದ ಭಕ್ತರು ಬಾಬಾ ರವರ ಯಶಸ್ವಿ ಗುರು ಪೂರ್ಣಿಮ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದ ರಾಜೇಶ್ ಕೆ.ಎಸ್,ಶಿವಣ್ಣ,ಪ್ರಜ್ವಲ್ ಮುಂತಾದವರನ್ನು ಅಭಿನಂದಿಸಿದರು.