2023 Karnataka Budget ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಜನಪರ, ರೈತಾಪಿ ವರ್ಗ ಹಾಗೂ ಸಾರ್ವಜನಿಕರ ಹಿತ ಕಾಪಾಡುವ ಬಜೆಟ್ ಆಗಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್. ದೇವರಾಜ್ ಸ್ವಾಗತಿಸಿದ್ದಾರೆ.
ಈ ಸಂಬಂಧ ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು ಕಳೆದ ಚುನಾವಣಾ ಸಮಯದಲ್ಲಿ ನೀಡಿದಂತಹ ಐದು ಗ್ಯಾರಂಟಿಗಳನ್ನು ಈಡೇರಿಸುವ ಸಲುವಾಗಿ ಹಣ ಮೀಸಲಿಡಲಾಗಿದೆ. ನೀರಾವರಿ ಆದ್ಯತೆ ಹಾಗೂ ಅಂಗನವಾಡಿ ಶಿಕ್ಷಕರು ಹಾಗೂ ಆಶಾಕಾರ್ಯಕರ್ತೆಯರಿಗೆ ವೇತನ ಪರಿಷ್ಕರಣೆ ಮಾಡುವ ಮೂಲಕ ನೀಡಿದಂತಹ ಭರವಸೆ ಈಡೇರಿಸಲಾಗಿದೆ ಎಂದಿದ್ದಾರೆ.
ಗ್ರಾಂಡ್ ಬೆಂಗಳೂರಿಗೆ 42 ಸಾವಿರ ಕೋಟಿ ಮೀಸಲಿಡುವ ಮೂಲಕ ಇತಿಹಾಸ ದಾಖಲು ಮಾಡಲಾಗಿದೆ. ರೈತರಿಗೆ 3 ಲಕ್ಷದವರೆಗೆ ಬಡ್ಡಿ ಸಾಲವನ್ನು 5 ಲಕ್ಷ ಹಾಗೂ ಅಭಿವೃದ್ದಿ ಸಾಲವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಲಾಗಿದೆ.
2023 Karnataka Budget ಗಿರಿತಪ್ಪಲಿನ ಬೆಳೆಗಾರರಿಗೂ ಕಾಫಿ ಬ್ರಾಂಡ್ ಮಾಡುವ ಮೂಲಕ ಅನುಕೂಲ ಕಲ್ಪಿಸಲಾಗಿದೆ ಎಂದಿದ್ದಾರೆ.
ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 15ನೇ ಬಾರಿಗೆ ಮಂಡಿಸಿರುವ ಬಜೆಟ್ ಸಾರ್ವಜನಿಕ, ಜನಪರ ಹಾಗೂ ಅಭಿವೃದ್ದಿಪರ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.
