District Police Community Hall Chikkamagaluru ಚಿಕ್ಕಮಗಳೂರು, ಜುಲೈ ೦೮:- ಬಂದೂಕು ಪರವಾನಗಿ ಹೊಂದಿರುವ ನಾಗರೀಕರಿಗೆ ಆತ್ಮರಕ್ಷಣೆಗಾಗಿ ತರಬೇತಿ ನೀಡಲಾಗಿದ್ದು ಇದರ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಬಾರ್‌ಲೇನ್ ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ಸಮುದಾಯಭವನದಲ್ಲಿ ಶನಿವಾರ ಆಯೋಜಿಸಿದ್ದ ನಾಗರೀಕ ಬಂದೂಕು ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಿಂದ ಬಂದೂಕು ಪರವಾನಗಿ ಹೊಂದಿರುವ ನಾಗರೀಕರಿಗೆ ವನ್ಯಜೀವಿಗಳು ಹಾಗೂ ಆತ್ಮರಕ್ಷಣೆ ಪಡೆಯುವ ಸಲುವಾಗಿ ಐದು ದಿನಗಳ ಕಾಲ ತರಬೇತಿ ನೀಡಲಾಗಿದೆ. ಇವುಗಳನ್ನು ಯಾವುದೇ ಸಂದರ್ಭಗಳಲ್ಲಿ ದುರುಪಯೋಗ ಮಾಡಿಕೊಳ್ಳದೇ ಸುರಕ್ಷತೆ ಹಾಗೂ ರಕ್ಷಣೆಯ ಜವಾಬ್ದಾರಿಯಿಂದ ನಡೆದುಕೊಳ್ಳ ಬೇಕು ಎಂದು ಸಲಹೆ ಮಾಡಿದರು.
ಬಂದೂಕು ಹೊಂದಿರುವ ವ್ಯಕ್ತಿಗಳು ತಮ್ಮ ಮನೆಗಳಲ್ಲಿ ಪ್ರತಿಯೊಬ್ಬರಿಗೂ ಕಾಣುವಂತೆ ಹಾಗೂ ಸಿಗುವಂತಹ ಜಾಗಗಳಲ್ಲಿ ಇಡಕೂಡದು. ಜೊತೆಗೆ ಅವುಗಳಿಗೆ ಸಂಬAಧಿಸಿದ ಮದ್ದುಗುಂಡುಗಳನ್ನು ಮಕ್ಕಳಿಂದ ದೂರವಿಡ ಬೇಕು. ಅಕ್ರಮವಾಗಿ ಪರವಾನಗಿ ಇಲ್ಲದ ಬಂದೂಕುಗಳನ್ನು ಹೊಂದುವುದು ಕಾನೂನಿನ ಪ್ರಕಾರ ಶಿಕ್ಷರ್ಹಾ ಅಪ ರಾಧ. ಆ ಹಿನ್ನೆಲೆಯಲ್ಲಿ ಸೂಕ್ತ ಸಮಯಕ್ಕೆ ನವೀಕರಣಕ್ಕೆ ಮುಂದಾಗಬೇಕು ಎಂದರು.
ತರಬೇತಿ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ ಒಟ್ಟು ೪೧೦ ಮಂದಿ ನಾಗರೀಕರು ಪಾಲ್ಗೊಂಡಿದ್ದು ಪಡೆದ ತರಬೇತಿಯನ್ನು ಅನಾಹುತಗಳಿಗೆ ಆಸ್ಪದ ನೀಡದಂತೆ ಗಮನಹರಿಸಬೇಕು. ಚುನಾವಣೆ ವೇಳೆಯಲ್ಲಿ ಕಾನೂನು ಬಾಹಿರವಾಗ ಪರವಾನಗಿ ಇಲ್ಲದ ಸುಮಾರು ೬೩ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದರು.
ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಸಿಸ್ಟಮ್ ಹೊಂದಿದ ಆಪ್ ಬಿಡುಗಡೆ ಮಾಡಲಾಗಿದೆ. ಸಮಾಜದ ನಾಗರೀಕರು ಪೊಲೀಸ್ ಇಲಾಖೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ತುರ್ತು ಸಂದರ್ಭ ಎದುರಾದಾಗ 112 ರ‍್ತು ಸಂಖ್ಯೆಗೆ ಕರೆ ಮಾಡಬಹುದು. ಸಮಾಜ ಶಾಂತಿ, ಸುವ್ಯವಸ್ಥೆ, ಕಾನೂನು ಕಾಪಾಡಲು ಕಠಿಣ ನಿರ್ಧಾರ ಅವಶ್ಯಕ. ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸುವಲ್ಲಿ ಸಹಕಾರ ನೀಡಬೇಕು ಎಂದರು.
ಹಿರಿಯ ಪತ್ರಕರ್ತ ಜಿ.ಎಂ.ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಂದೂಕು ತರಬೇತಿ ರಕ್ಷಣೆಗಾಗಿ ನೀಡಲಾಗಿದೆ.
District Police Community Hall Chikkamagaluru ಬಳಕೆ ಮಾಡುವಾಗ ಕಡ್ಡಾಯವಾಗಿ ಕಾನೂನಿನ ನಿಯಮಗಳನ್ನು ಪಾಲನೆ ಮಾಡಬೇಕು. ಪೊಲೀಸರು ಕಾಯ್ದೆ ಕಾನೂನುಗಳ ಪಾಲನೆ ಮಾಡುವುದು ನಾಗರೀಕರ ಹಿತರಕ್ಷಣೆಗಾಗಿ. ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಸಂವಿಧಾನದ ಆಶಯಕ್ಕೆ ಬದ್ದರಾಗಿ ಜೀವಿಸಬೇಕು ಎಂದರು.
ದೇಶದಲ್ಲಿ 33.69 ಲಕ್ಷ ಬಂದೂಕು ಪರವಾನಗಿ ಹೊಂದಿದ್ದಾರೆ. ದೇಶದ ಅತಿಹೆಚ್ಚು ಬಂದೂಕು ಹೊಂದಿರುವ ರಾಜ್ಯ ಉತ್ತರ ಪ್ರದೇಶ 12.33 ಲಕ್ಷ ಪರವಾನಗಿ ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಕರ್ನಾಟಕದಲ್ಲಿ 1.13ಲಕ್ಷ ಪರವಾನಗಿ ಹೊಂದಿದ್ದಾರೆ.
ಅದರಂತೆ ಜಿಲ್ಲೆಯಲ್ಲಿ ಇದುವರೆಗೂ ಸುಮಾರು 12 ಮಂದಿ ಬಂದೂಕು ಪರವಾನಗಿ ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸಹದೇವ್, ಅಪರ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ಪುರುಷೋತ್ತಮ್, ಶಿವಪ್ರಕಾಶ್ ಆರ್.ನಾಯಕ್ ತರಬೇತಿ ಸಿಬ್ಬಂದಿಗಳಾದ ಸತೀಶ್, ವಿಷ್ಣುಕುಮಾರ್, ಪ್ರಸನ್ನ ಕುಮಾರ್, ದುರ್ಗಪ್ಪ, ಲೋಹಿತ್ ಸೇರಿದಂತೆ ಮತ್ತಿತರರು ಇದ್ದರು.