Water Filling of Lakes through Channels ಭಾರತ ಕೃಷಿ ಪ್ರಧಾನ ದೇಶ. ಶೇ.70 ಮಂದಿ ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಇಂತಹ ಶ್ರಮಜೀವಿಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ವಿವಿಧ ಸವಲತ್ತುಗಳನ್ನು ಒದಗಿಸುವ ಮೂಲಕ ಶಾಶ್ವತ ಕೆಲಸ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು, ತಾಲ್ಲೂಕಿನ ಲಕ್ಯಾ ಗ್ರಾಮದಲ್ಲಿ ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಗ್ರಾಮದಲ್ಲಿ ಬಡಮಕ್ಕಳ ಅನುಕೂಲಕ್ಕಾಗಿ ಅಂಗನವಾಡಿ ಕೇಂದ್ರ ಹಾಗೂ ಗ್ರಾಮದ ಸಣ್ಣಪುಟ್ಟ ಕಾರ್ಯಕ್ರಮ ನಡೆಸಲು ಸಂಜೀವಿನಿ ಭವನ ಸ್ಥಾಪಿಸಲಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಬಳಕೆ ಮಾಡಿಕೊಳ್ಳುವ ಮೂಲಕ ಪಂಚಾಯಿತಿಯನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸಹಕರಿಸಬೇಕು ಎಂದರು.
ಲಕ್ಯಾ ಭಾಗದಲ್ಲಿ ಇತ್ತೀಚೆಗೆ ಕೆರೆಗಳ ಸಮಸ್ಯೆಯಿಂದ ರೈತಾಪಿ ವರ್ಗಕ್ಕೆ ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಹಲವಾರು ಮನವಿಗಳು ಸಲ್ಲಿಕೆಯಾಗಿವೆ. ಇದೀಗ ಮಳೆಯ ವಾತಾವರಣ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚಾನಲ್‌ಗಳ ಮೂಲಕ ಆಯಾ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಕೈಹಾಕಿ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮುಂದಿನ 4 ವರ್ಷಗಳ ನಂತರ ದೊಡ್ಡದೊಂದು ಕನಸಿದೆ. ಆ ಕನಸನ್ನು ಸಹಕಾರಗೊಳಿಸಲು ಪ್ರತಿ ಯೊಬ್ಬರು ಸಹಕಾರ ಅಗತ್ಯವಿದೆ. ಭಗವಂತ ಮನುಷ್ಯನಿಗೆ ವರವವನ್ನು ಕೊಡುವುದಿಲ್ಲ. ಅವಕಾಶವ ನೀಡುವನು. ಆ ಅವಕಾಶವನ್ನು ವರವನ್ನಾಗಿ ಪರಿವರ್ತಿಸಿ ಮುಂದಾಗಬೇಕು. ಅದೇ ರೀತಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ತಮಗೆ ಅವಕಾಶ ನೀಡಿದ್ದು ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಕೆಲಸ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್.ಶೋಭಾ ಮಾತನಾಡಿ ಒಗ್ಗಡ್ಡಿಸುವ ಅನುದಾನದ ಯೋಜನೆಯಡಿ ಯಲ್ಲಿ ಸಂಜೀವಿನಿ ಭವನ ಹಾಗೂ ಅಂಗನವಾಡಿ ಕೇಂದ್ರಕ್ಕೆ ಶಾಸಕರು ಚಾಲನೆ ನೀಡಿದ್ದು ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ರೂಪಿಸಿ ಜನಸೇವೆಗೆ ಸಮರ್ಪಿಸಲಾಗುವುದು ಎಂದು ಹೇಳಿದರು.
Water Filling of Lakes through Channels ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಸಖರಾಯಪಟ್ಟಣ ಅಧ್ಯಕ್ಷ ಮಹಡಿ ಮನೆ ಸತೀಶ್, ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಮುಖಂಡ ಕೆ.ಭರತ್, ಗ್ರಾ.ಪಂ. ಉಪಾಧ್ಯಕ್ಷೆ ಈರಮ್ಮ, ಸದಸ್ಯರುಗಳಾದ ಎಂ.ಎಲ್.ನಾಗರಾಜ್, ವಿ.ಶೋಬಾ, ಈರಮ್ಮ ಈಶ್ವರಪ್ಪ, ಮೊಹಮ್ಮದ್ ಹನೀಫ್, ಎಲ್.ಬಿ.ಶಶಿಧರ್, ಕೆ.ದಿನೇಶ್, ರೇಣುಕಮ್ಮ, ಸಿ.ಶೋಭಾ, ಎಸ್.ಎನ್.ಹಾಲಮ್ಮ, ಲಕ್ಯಾ ಗ್ರಾ.ಪಂ. ಪಿಡಿಓ ಎನ್.ಎ.ಶೇಖರೇಶ್ ಮತ್ತಿತರರು ಹಾಜರಿದ್ದರು.