Sunday, December 14, 2025
Sunday, December 14, 2025

Chikkamagaluru Helmet Theft ಚಿಕ್ಕಮಗಳೂರಿನಲ್ಲಿ ಹೆಲ್ಮೆಟ್ ಕಳ್ಳತನ ಹೆಚ್ಚುತ್ತಿದೆ

Date:

Chikkamagaluru Helmet Theft ಚಿಕ್ಕಮಗಳೂರು ನಗರದಲ್ಲಿ ಹೆಚ್ಚಾಗುತ್ತಿರುವ ಬೈಕ್ ಹೆಲ್ಮೆಟ್ ಕಳ್ಳತನ ಪ್ರಕರಣಗಳು
ಕಳೆದ ಕೆಲವು ದಿನಗಳಿಂದ ದ್ವಿಚಕ್ರ ವಾಹನ ಸವಾರರ ಉತ್ತಮ ಗುಣಮಟ್ಟದ ಐಎಸ್‌ಐ ಹೆಲ್ಮೆಟ್‌ಗಳು ಕಳ್ಳತನವಾಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಬೈಕ್ ಸವಾರರಿಗೆ ಮತ್ತೊಂದು ಹೆಲ್ಮೆಟ್‌ಗೆ ಖರೀದಿಸುವ ಮೂಲಕ ಸಾವಿರಾರು ರೂ.ಗಳು ಜೇಬಿಗೆ ಕತ್ತರಿ ಬೀಳು ವಂತಾಗಿದೆ.

ಚಿಕ್ಕಮಗಳೂರು ನಗರದ ದ್ವಿಚಕ್ರವಾಹನ ಸವಾರರಿಗೆ ಸರ್ಕಾರವು ಹಲವು ಸುರಕ್ಷತೆ ದೃಷ್ಟಿಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಕಾನೂನು ನಿಯಮ ಪಾಲನೆ ದೃಷ್ಟಿಯಿಂದ ಬೈಕ್ ಸವಾರರು ಗುಣಮಟ್ಟದ ಹೆಲ್ಮೆಟ್‌ಗಳನ್ನು ಖರೀದಿಸಿದ್ದು ಇದನ್ನು ಸಹ ಕಳ್ಳತನ ಮಾಡುವ ಪ್ರಕರಣಗಳು ಪ್ರತಿನಿತ್ಯ ಹೆಚ್ಚಳಗೊಂ ಡಿರುವ ಬಗ್ಗೆ ಬೈಕ್ ಸವಾರರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ನಗರದ ಪ್ರಮುಖ ಸರ್ಕಲ್‌ಗಳಲ್ಲಿ ದ್ವಿಚಕ್ರ ವಾಹನಗಳ ನಿಲ್ಲಿಸಿದಂತಹ ಜಾಗಗಳಲ್ಲಿ ಕೆಲವು ಹೆಲ್ಮೆಟ್ ಕಳ್ಳತನ ವೃತ್ತಿಯಲ್ಲಿ ತಮ್ಮನ್ನು ತೊಡಗಿರುವ ಕಿಡಿಕೇಡಿಗಳು ಇದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಪರಿಣಾಮ ಬಡವರು ಅತ್ಯಂತ ಕಷ್ಟಪಟ್ಟು ಕೊಂಡ0ತಹ ಹೆಲ್ಮೆಟ್‌ಗಳನ್ನು ಕಳವು ಮಾಡಲಾಗುತ್ತಿದೆ.
ಬೈಕ್ ಸವಾರರು ಕೇವಲ 10-15ನಿಮಿಷಗಳ ಕಾಲ ವಾಹನದಲ್ಲೇ ಹೆಲ್ಮೆಟ್ ಇರಿಸಿ ಅಂಗಡಿ ಮುಂಗಟ್ಟುಗಳಿಗೆ ತೆರಳುತ್ತಾರೆ. ಇದನ್ನು ಕಾಯ್ದು ಕೊಂಡಿರುವ ಕಿಡಿಕೇಡಿಗಳು ರಾಜಾರೋಷವಾಗಿ ತಮ್ಮ ಹೆಲ್ಮೆಟ್‌ಗಳೆಂದೇ ತಿಳಿದು ಅಲ್ಲಿಂದ ಕಳ್ಳತನ ಮಾಡುವ ಮೂಲಕ ಪರಾರಿಯಾಗುತ್ತಿದ್ದಾರೆ.
ನಗರದ ಐ.ಜಿ.ರಸ್ತೆ, ಎಂ.ಜಿ.ರಸ್ತೆ, ಮಲ್ಲಂದೂರು ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ಅತಿಹೆಚ್ಚು ಬೈಕ್ ಸವಾರರು ಅನಿವಾರ್ಯ ಕೆಲಸಗಳ ಒತ್ತಡದಿಂದ ಅಲ್ಲಿಯೇ ಇರಿಸಿ 10 ನಿಮಿಷಗಳ ಕಾಲಕ್ಕೆ ಬೇರೆಡೆ ತೆರಳುತ್ತಾರೆ. ಇದನ್ನೇ ಕಾಯ್ದುಕೊಂಡ ಖದೀಮರ ತಂಡವೊಂದು ರಸ್ತೆಯ ಮೂಲೆಗಳ ಅಲ್ಲಲ್ಲಿ ನಿಲ್ಲುವ ಮೂಲಕ ನೇರವಾಗಿ ಬೈಕ್ ಸವಾರರ ಹೆಲ್ಮೆಟ್‌ಗಳನ್ನೇ ಗುರಿಯಾಗಿಸಿಕೊಂಡಿದ್ದಾರೆ.
ಇಂತಹ ಹೆಲ್ಮೆಟ್ ಕಳ್ಳತನ ಪ್ರಕರಣಗಳು ರಾತ್ರಿ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹೆಲ್ಮೆಟ್ ಕಳ್ಳತನ ಮಾಡುವ ಕಿಡಿಕೇಡಿಗಳು ಎಲ್ಲೂ ಮೂಲೆ ಯಲ್ಲಿ ತಮ್ಮ ಬೈಕ್‌ಗಳನ್ನು ನಿಲ್ಲಿಸಿ ಸುಖಸುಮ್ಮನೆ ಅಂಗಡಿ ಮುಂಗಟ್ಟುಗಳ ನಿಲ್ಲುವುದು, ಯಾರೊಂ ದಿಗೋ ಮಾತನಾಡುತ್ತಾ ಐಎಸ್‌ಐ ಮಾರ್ಕ್ ಹೊಂದಿರುವ ಹೆಲ್ಮೆಟ್‌ಗಳ ಕಳ್ಳತನಕ್ಕೆ ಮುಂದಾಗು ತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಫ್‌ಹೆಲ್ಮೆಟ್‌ಗಳನ್ನು ಬೈಕ್ ಸವಾರರಿಗೆ ಸುರಕ್ಷತೆಯಿಲ್ಲದಿರುವ ಪರಿಣಾಮ ಪೊಲೀಸ್ ಇಲಾಖೆ ಸವಾರರಿಂದ ಹೆಲ್ಮೆಟ್ ಪಡೆದು ದಂಡ ಹಾಕುವುದು. ನಂತರ ಬೈಕ್‌ಸವಾರರು ದಂಡ ಕಟ್ಟುವ ಬದಲಾಗಿ ಗುಣಮಟ್ಟದ ಹೆಲ್ಮೆಟ್‌ಗಳ ಖರೀದಿಗೆ ಮುಂದಾದರೆ, ಹೆಲ್ಮೆಟ್‌ಗಳ ಕಳ್ಳರ ಹಾವಳಿಯಿಂದ ಎರಡೆರಡು ಬಾರಿ ಖರೀದಿಸುವ ಮೂಲಕ ಹಣವನ್ನು ಕಳೆದುಕೊಳ್ಳಲಾಗುತ್ತಿದೆ ಎಂದು ಸವಾರರು ಹೇಳಿದ್ದಾರೆ.

Chikkamagaluru Helmet Theft ಹೆಲ್ಮೆಟ್ ಕಳ್ಳತನ ಮಾಡುವ ವ್ಯಕ್ತಿಗಳು ನೋಡುವುದಕ್ಕೆ ಉತ್ತಮ ಉಡುಪುಗಳನ್ನು ಧರಿಸಿ ಯಾರಿಗೂ ಅನು ಮಾನ ಬಾರದ ರೀತಿಯಲ್ಲಿ ಬೀದಿಕಂಬಗಳ ಬದಿಯ ಕತ್ತಲಲ್ಲಿ ನಿಲ್ಲುವ ಮೂಲಕ ಬೈಕ್ ಸವಾರರು ಎಲ್ಲಿ ನಿಲ್ಲಿಸು ವರು ಅಲ್ಲಿಯೇ ಕಾಯುವ ಮೂಲಕ ಹೆಲ್ಮೆಟ್‌ಗಳನ್ನು ಕಳ್ಳತನ ಮಾಡಲಾಗುತ್ತಿದೆ. ಇನ್ನೂ ಕೆಲವು ಕಿಡಿಕೇ ಡಿಗಳು ಅಂಗಡಿ ಮುಂಗಟ್ಟುಗಳಲ್ಲಿ ವಾಹನದ ಮಾಲೀಕರ ಯಾವುದೋ ಕೆಲಸದಲ್ಲಿ ನಿರತರಾ ಗಿದ್ದರೆ ತಕ್ಷಣವೇ ಧಾವಿಸಿ ಕಳ್ಳತನಕ್ಕೆ ಮುಂದಾಗುವ ಪ್ರಕರಣಗಳು ಹೆಚ್ಚಾಗಿವೆ.
ಕೂಡಲೇ ಪೊಲೀಸ್ ಇಲಾಖೆಯ ಸಂಚಾರ ನಿಯಂತ್ರಣಾಧಿಕಾರಿಗಳು ಇವುಗಳ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಕಷ್ಟದಿಂದ ಖರೀದಿಸುವ ಬೈಕ್ ಸವಾರರಿಗೆ ಮತ್ತೊಮ್ಮೆ ಹೊರೆಯಾಗದಂತೆ ಹೆಲ್ಮೆಟ್ ಕಳ್ಳರನ್ನು ಸೆರೆಹಿಡಿಯಲು ಮುಂದಾದರೆ ಮಾತ್ರ ಸವಾರರ ಜೇಬಿಗೆ ಕತ್ತರಿ ಬೀಳುವುದು ತಪ್ಪಲಿದೆ ಎಂದು ತಿಳಿಸಿದ್ದಾರೆ.

ವರದಿ : ಸುರೇಶ್ ಎನ್ ಚಿಕ್ಕಮಗಳೂರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...