Friday, December 5, 2025
Friday, December 5, 2025

Rotary Club Shivamogga ಪೋಷಕರು ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ತಿಳಿಹೇಳಬೇಕು-ಕೆ.ಫಾಲಾಕ್ಷ

Date:

Rotary Club Shivamogga ಪೋಷಕರು ರಸ್ತೆ ಸುರಕ್ಷತಾ ನಿಯಮಗಳನ್ನು ತಮ್ಮ ಮಕ್ಕಳಿಗೆ ಹೇಳಿ ಕೊಡುವ ಮೂಲಕ ದಿನನಿತ್ಯ ಸಾಮಾನ್ಯ ಅಪಘಾತಗಳನ್ನು ತಡೆಗಟ್ಟಬಹುದು ಎಂದು ರೋಟರಿ ನಿಯೋಜಿತ ರಾಜ್ಯಪಾಲ ರೋ.ಕೆ.ಫಾಲಕ್ಷ ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲೆಡೆ ವಾಹನ ಅಪಘಾತಕ್ಕೆ ತುತ್ತಾಗುತ್ತಿರುವವರು ಹದಿಹರೆಯದ ಮಕ್ಕಳು. ಅವರ ಪೋಷಕರು ಈ ಬಗ್ಗೆ ಗಂಭೀರವಾದ ಆಲೋಚನೆ ಮಾಡಬೇಕಾಗಿದೆ. ಯಾವುದೇ ಲೈಸೆನ್ಸ್ ಹೊಂದಿರದ ಮಕ್ಕಳು ವಾಹನವನ್ನು ಚಲಾಯಿಸಿ ಅಪಘಾತ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ರಸ್ತೆ ಸುರಕ್ಷತೆಯ ಬಗ್ಗೆ ನಾವು ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ರೋಟರಿ 3182 ಜಿಲ್ಲೆ ಈ ವರ್ಷ ರಸ್ತೆ ಸುರಕ್ಷತೆಯ ವಿಚಾರವನ್ನು ಜಿಲ್ಲಾ ಯೋಜನೆಯಾಗಿ ತೆಗೆದುಕೊಂಡಿದೆ. 10ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ರೋಟರಿ ಸಂಸ್ಥೆ ವರ್ಷಪೂರ್ತಿ ರಸ್ತೆ ಸುರಕ್ಷತೆ ನಿಯಮಗಳನ್ನು ಅರಿವು ಮೂಡಿಸುವ ಕೆಲಸವನ್ನು ಮಾಡಲಿದೆ ಎಂದು ಹೇಳಿದರು.

ಇದರ ಜೊತೆಗೆ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯದ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಇಂದಿನ ದಿನಗಳಲ್ಲಿ ನಾವು ಪ್ರತಿಯೊಂದಕ್ಕೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಅವಲಂಬಿತರಾಗಿದ್ದೇವೆ. ಇದರ ಪರಿಣಾಮವನ್ನು ನಾವು ಅಂದಾಜು ಮಾಡಿಲ್ಲ. ಇ-ತ್ಯಾಜ್ಯ ಮುಂದೆ ದೊಡ್ಡ ಸಮಸ್ಯೆಯಾಗಿ ಉದ್ಭವಿಸಲಿದೆ. ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಾವು ಪುನರ್ ಬಳಕೆ ಮಾಡುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಈ ವರ್ಷ ಇ-ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸುವ ಹಾಗೂ ಅದನ್ನು ಸಂಗ್ರಹಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರೋಟರಿ ಮಾಜಿ ಸಹಾಯಕ ಗರ್ವನರ್ ರೋ.ಆನಂದಮೂರ್ತಿ ಅವರು ಮಾತನಾಡಿ, ರೋಟರಿ ಜಗತ್ತಿನಲ್ಲಿ ಹಲವು ಸಾಮಾಜಿಕ ಬದ್ಧತೆಗಳನ್ನು ಹೊಂದಿ ಕೆಲಸ ಮಾಡುತ್ತಿದೆ. ಇದರ ವ್ಯಾಪ್ತಿ ಇಂದು ಪ್ರಪಂಚದ ಮೂಲೆ ಮೂಲೆ ತಲುಪಿದೆ. ಪಲ್ಸ್ ಪೋಲಿಯೋದಿಂದ ಹಿಡಿದು ಅನೇಕ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಯನ್ನು ಹೊಂದಿದೆ ಎಂದು ಹೇಳಿದರು.

ಸಾರ್ವಜನಿಕವಾಗಿ ಅರಿವು ಮೂಡಿಸುವ ಕೆಲಸದಲ್ಲಿ ಸಕ್ರಿಯಾವಾಗಿರುವ ರೋಟರಿ ಸಂಸ್ಥೆ ತನ್ನ ಸದಸ್ಯರ ವ್ಯಕ್ತಿತ್ವವನ್ನು ಇನ್ನಷ್ಟು ಪ್ರೌಢಿಮೆಗೊಳಿಸುವ ಕೆಲಸ ಮಾಡುತ್ತಿದೆ. ಇದರಿಂದ ಸಮಾಜದ ವಿವಿಧ ವೃತ್ತಿಯಲ್ಲಿ ಕೆಲಸ ಮಾಡುವವರು ಸಂಸ್ಥೆಯ ಧ್ಯೇಯ್ಯೋದ್ದೇಶಗಳನ್ನು ಸಾಕಾರಗೊಳಿಸಲು ಹಾಗೂ ತಮ್ಮ ದುಡಿಮೆಯ ಹಣದಲ್ಲಿಯೇ ಸಾಮಾಜಿಕ ಕೆಲಸ ಮಾಡಲು ಮುಂದಾಗುವಂತಹ ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಲಯ 10 ರ ಸಹಾಯಕ ಗೌರ್ವನರ್ ರೋ.ರಾಜೇಂದ್ರ ಪ್ರಸಾದ್ ಅವರು ಮಾತನಾಡಿ, ರೋಟರಿ 3182 ಜಿಲ್ಲೆ 2023-24 ರಲ್ಲಿ ಐದು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡಿದೆ.

ಈ ಯೋಜನೆಗಳ ಮೂಲಕ ಇಡೀ ವರ್ಷ ಜಿಲ್ಲೆಯ ಎಲ್ಲ ರೋಟರಿ ಕ್ಲಬ್‌ಗಳು ಸಮಾಜದ ಒಂದು ಭಾಗವಾಗಿ ಕೆಲಸ ಮಾಡಲಿವೆ ಎಂದು ಮಾಹಿತಿ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಲಿಯ ಅಧ್ಯಕ್ಷರಾಗಿ ರೋ.ರೇಣುಕರಾಧ್ಯ, ಕಾರ್ಯದರ್ಶಿಯಾಗಿ ರೋ.ರೂಪಾ ಪುಣ್ಯಕೋಟಿ, ಖಚಾಂಚಿಯಾಗಿ ರೋ.ಲಕ್ಷ್ಮೀನಾರಾಯಣ ಹಾಗೂ ಅವರ ತಂಡ ಅಧಿಕಾರವನ್ನು ವಹಿಸಿಕೊಂಡಿತು.

Rotary Club Shivamogga ನಿರ್ಗಮಿತ ಅಧ್ಯಕ್ಷ ರೋ.ಎನ್.ಜೆ.ಸುರೇಶ ಸ್ವಾಗತ ಮಾಡಿದರೆ, ರೋ.ರೂಪಾ ಪುಣ್ಯಕೋಟಿ ವಂದಿಸಿದರು. ಕಾರ್ಯಕ್ರಮದಲ್ಲಿ ನಿರ್ಗಮಿತ ಕಾರ್ಯದರ್ಶಿ ರೋ.ವೆಂಕಟೇಶಗುತ್ತಲ್ ಸೇರಿದಂತೆ ವಿವಿಧ ಕ್ಲಬ್‌ಗಳ ನೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...