Patanjali Yoga Committee ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯ ಆಗಿದ್ದು, ರಕ್ತದಾನ ಮಾಡುವ ಪ್ರತಿಯೊಬ್ಬರು ಸಮಾಜದ ಆಸ್ತಿಯಾಗಿದ್ದಾರೆ. ಆರೋಗ್ಯವಂತ ಯುವ ಜನರು ರಕ್ತದಾನ ಮಾಡಬೇಕು ಎಂದು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಸಿ.ಆರ್.ಶ್ರೀನಿವಾಸ್ ಹೇಳಿದರು.
ಶಿವಮೊಗ್ಗ ನಗರದ ಆರ್ಯವೈಶ್ಯ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ, ಯುವ ಭಾರತ, ಕಿಸಾನ್ ಪಂಚಾಯಿತ್ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ರಕ್ತದಾನಿಗಳಿಗೆ ಸನ್ಮಾನಿಸಿ ಮಾತನಾಡಿದರು.
ಸ್ಥಳೀಯ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಸಮಾಜಸೇವೆ ಮನೋಭಾವದಿಂದ, ನಿಸ್ವಾರ್ಥದಿಂದ ರಕ್ತದಾನ ಮಾಡುವ ಕಾರ್ಯ ಎಲ್ಲಕ್ಕಿಂತ ಮಹತ್ತರವಾಗಿದೆ. ಇದರಿಂದ ಜೀವ ಉಳಿಸಿದ ಪುಣ್ಯ ಸಿಗುತ್ತದೆ ಎಂದು ತಿಳಿಸಿದರು.
Patanjali Yoga Committee, ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರನ್ನು ಸನ್ಮಾನಿಸುವುದರಿಂದ ಇತರರಿಗೂ ಪ್ರೇರಣೆ ಸಿಗುತ್ತದೆ. ಯೋಗ ಪ್ರಸ್ತುತ ನೂರಾರು ದೇಶಗಳಿಗೂ ತಲುಪಿದೆ. ಭಾರತದ ಶ್ರೇಷ್ಠ ಪರಂಪರೆ ಯೋಗವು ವಿಶ್ವಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ಹೇಳಿದರು.
ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್, ರಕ್ತದಾನಿ ಧರಣೇಂದ್ರ ದಿನಕರ್, ಶ್ರೀನಿವಾಸ ಮಂಜು ಅವರನ್ನು ಸನ್ಮಾನಿಸಲಾಯಿತು. ಗುರುನಾಥ್, ಗೋಪಿನಾಥ್ ಶೆಟ್ಟಿ, ಸುಮನ ಪೈ, ನಾಗರತ್ನ, ಮೇರಾ ರಾಮ್ ಪಟೇಲ್, ರಾಘವೇಂದ್ರ, ಗುಂಡು ರಾವ್, ರವಿ, ಶ್ರೀಧರ್ ಆಚಾರ್, ಗಂಗಾಧರ್, ಸತೀಶ್, ಸುಬ್ರಹ್ಮಣ್ಯ ಆಚಾರ್, ಕಿರಣ್, ನಾಗರಾಜ್ ಶೇಟ್, ಗೋಪಾಲ್ ಕೃಷ್ಣ, ಶಶಿ ಮೌಳಿ ಮತ್ತಿತರರು ಉಪಸ್ಥಿತರಿದ್ದರು.