Chamber Of Commerce ಶತಮಾನಗಳಿಂದಲೂ ಸಂಗೀತಕ್ಕೆ ವಿಶೇಷ ಸ್ಥಾನಮಾನ ಇದ್ದು, ಸಂಗೀತದಿಂದ ಧ್ವನಿ ಸಂಸ್ಕರಣದ ಜತೆಯಲ್ಲಿ ನಮ್ಮಲ್ಲಿನ ಖಿನ್ನತೆ ದೂರವಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.
ಶಿವಮೊಗ್ಗದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಕಿಮ್ ಸ್ಟಾರ್ ವತಿಯಿಂದ ಆಯೋಜಿಸಿದ್ದ ಜಾನಪದ ಹಾಗೂ ಫಾಸ್ಟ್ ಸಾಂಗ್ಸ್ ಕನ್ನಡ ಚಿತ್ರಗೀತೆಗಳ ಗ್ರ್ಯಾಂಡ್ ಫಿನಾಲೆ ಕೋಸ್ಟಲ್ ಐಕಾನ್ ಸೀಸನ್ 2 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಕಲಿಕೆಯಲ್ಲಿ ವಿದ್ಯಾರ್ಥಿಗಳು ನಿರಂತರ ಆಸಕ್ತಿ ವಹಿಸಬೇಕು. ಪರಿಶ್ರಮ ಪಟ್ಟಲ್ಲಿ ಯಶಸ್ಸು ನಿಶ್ಚಿತವಾಗಿ ಲಭಿಸುತ್ತದೆ. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಉನ್ನತ ಹಂತಕ್ಕೆ ತಲುಪಲು ಸಂಪೂರ್ಣ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಕಾಶವಾಣಿ ದೂರದರ್ಶನ ಕಲಾವಿದೆ ವಿದ್ಯಾ ಮಂಜುನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಂಗೀತ ಸಾಧಕನ ಸ್ವತ್ತಾಗಿದ್ದು, ಏಕಾಗ್ರತೆ, ಭಕ್ತಿ ಹಾಗೂ ಶ್ರದ್ಧೆಯಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಕರ್ನಾಟಕವು ಸಂಗೀತದ ತವರೂರು. ಬಾಲ್ಯದಿಂದಲೇ ಸಂಗೀತದ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
Chamber Of Commerce ಆಕಾಶವಾಣಿ ಕಲಾವಿದೆ ಉಮಾ ದಿಲೀಪ್ ಮಾತನಾಡಿ, ಪಾಶ್ಚಿಮಾತ್ಯ ಸಂಗೀತದ ಅಬ್ಬರದಲ್ಲಿ ಶಾಸ್ತ್ರೀಯ ಸಂಗೀತ ಮರೆಯಾಗುತ್ತಿದೆ. ಸಂಗೀತವನ್ನು ಗುರುವಿನ ಮೂಲಕ ಅಭ್ಯಾಸ ಮಾಡಿದರೆ ಪರಿಪೂರ್ಣನಾಗಲು ಸಾಧ್ಯ ಎಂದು ಹೇಳಿದರು.
ಕಿಮ್ ಸ್ಟಾರ್ ಉಡುಪಿಯ ಜಯಶೀಲನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಹೊಸ ಪ್ರತಿಭೆಗಳಿಂದ ಇಂತಹ ವೇದಿಕೆಗಳಿಂದ ಅವಕಾಶ ದೊರೆಯುತ್ತದೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾದ 9 ಜನ ಹಾಡುಗಾರರಿಗೆ ಗುರುತಿಸಿ ಪದಕ ನೀಡಿ ಗೌರವಿಸಲಾಯಿತು. ರೋಟರಿ ಕ್ಲಬ್ ಮಿಡ್ ಟೌನ್ ಸದಸ್ಯ ಸಂತೋಷ್, ರಾಜೇಶ್. ಸುಮಂತ್, ಧನಂಜಯ್, ವಿಭಾ ಉಪಸ್ಥಿತರಿದ್ದರು.