Sunday, December 14, 2025
Sunday, December 14, 2025

Davanagere District Sharan Sahitya ಪಂಚೇಂದ್ರಿಯಗಳಿಗತೀತವಾದುದೇ ಅನುಭಾವ- ಎಚ್.ಬಿ.ಮಂಜುನಾಥ್

Date:

Davanagere District Sharan Sahitya ಅರ್ಥ ಕಾಮಗಳಿಗೆ ಆದ್ಯತೆ ಇಲ್ಲದ ಸಹಜ ಬದುಕೇ ಶರಣ ಸಂಸ್ಕೃತಿಯಾಗಿದ್ದು ಇದರ ವಾಚಿಕ ಅಭಿವ್ಯಕ್ತಿ ಅಥವಾ ಪ್ರತಿಪಾದನೆ ವಚನ ಸಾಹಿತ್ಯವಾಗಿದೆ, ವಚನ ಸಾಹಿತ್ಯದ ಪ್ರಚಾರ ಎಷ್ಟು ಮುಖ್ಯವೋ ಪ್ರಯೋಗ ಅಂದರೆ ಅನುಷ್ಠಾನವೂ ಅಷ್ಟೇ ಮುಖ್ಯ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.

ಸರಸ್ವತಿ ಬಡಾವಣೆಯ ಬಸವ ಬಳಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಬಸವ ಬಳಗದ ಸಹಯೋಗದಲ್ಲಿ ಏರ್ಪಾಡಾಗಿದ್ದ ಡಾ.ಫ.ಗು. ಹಳಕಟ್ಟಿಯವರ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯ ಮತ್ತು ಡಾ.ಫ.ಗು.ಹಳಕಟ್ಟಿ’ ಎಂಬ ವಿಷಯವಾಗಿ ಅನುಭಾವ ಉಪನ್ಯಾಸ ನೀಡುತ್ತಾ ‘ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯವಾಗಿದ್ದು ಶಬ್ದ ಸ್ಪರ್ಶ ರೂಪ ರಸಗಂಧಾದಿ ಪಂಚ ಜ್ಞಾನೇಂದ್ರಿಯಗಳ ಅತೀತವಾದ ಆತ್ಮಾನುಭವವೇ ‘ಅನುಭಾವ’ವಾಗಿದ್ದು ಮನೋವಿಕಾರಗಳಿಂದ ದೂರವಾದಾಗ ಆತ್ಮಕ್ಕಾಗುವ ಅನುಭವವೇ ಅನುಭಾವವೆನ್ನಬಹುದು ಎಂದರು.

Davanagere District Sharan Sahitya ಇದರಿಂದ ಆತ್ಮ ಪರಿಶುದ್ಧತೆ ತನ್ಮೂಲಕ ‘ಆತ್ಮೋದ್ಧಾರ’,ಹಾಗೆಯೇ ಜಾತಿ ಮತ ಲಿಂಗ ವರ್ಗ ಭೇದವಿಲ್ಲದ ‘ಸಮ ಸಮಾಜ’, ನಾನು ದುಡಿಯಬೇಕು ಎನ್ನುವ ‘ಕಾಯಕ’ ಪ್ರಜ್ಞೆ, ಸೇವಿಸುವಲ್ಲಿ ‘ನಾವು’ ಎನ್ನುವ ವಿಶಾಲ ‘ದಾಸೋಹ’ ಪ್ರಜ್ಞೆ ಬಗ್ಗೆ ವಿವರಿಸಿದರು.

12ನೆಯ ಶತಮಾನದ ಬಸವಾದಿ ಶಿವ ಶರಣರ ವಚನಗಳು ಭಾಷೆಯಲ್ಲಿ ಕರ್ನಾಟಕಕ್ಕೆ ಸೀಮಿತವಾದವರೂ ವಿಷಯ ವ್ಯಾಪ್ತಿಯು ವಿಶ್ವವಿಸ್ತಾರವಾದದ್ದು ಎಂದರು.

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜೀವನ ಮತ್ತು ಸಾಧನೆಯ ಬಗ್ಗೆ ಅನೇಕ ಅಂಶಗಳನ್ನು ಮನಮುಟ್ಟುವಂತೆ ಹೇಳಿದ ಎಚ್.ಬಿ. ಮಂಜುನಾಥ ಅವರು ಹಳಕಟ್ಟಿಯವರ ಕುರಿತಾಗಿ ಕವಿ ಚನ್ನವೀರ ಕಣವಿ ರವರು ರಚಿಸಿದ ಕವಿತೆಯನ್ನು ಸಹ ಹೇಳುತ್ತಾ ಅದರಲ್ಲಿನ ಸ್ವಾರಸ್ಯಕರ ಸಂಕೇತಾರ್ಥಗಳನ್ನು ಸಹ ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ಬಸವ ಬಳಗದ ಅಧ್ಯಕ್ಷ ಶರಣ ಎ.ಹೆಚ್. ಹುಚ್ಚಪ್ಪ ಮಾಸ್ತರ್ ರವರು ವಿಜಯ ನಗರ ಅರಸರ ಆಳ್ವಿಕೆ ಕಾಲದಲ್ಲಿ ಏಳು ನೂರಕ್ಕೂ ಹೆಚ್ಚು ಶಿವಶರಣರು ಶರಣ ಸಾಹಿತ್ಯವನ್ನು ಪ್ರಚುರ ಪಡಿಸುವ ಹಾಗೂ ಲಿಂಗಾಯತ ಧರ್ಮದ ಪುನರುತ್ಥಾನ ಕಾರ್ಯವು ಸಹ ಆಯಿತು ಎಂದರಲ್ಲದೆ ಉಪನಿಷತ್ತಿನಲ್ಲಿ ಇರುವುದೆಲ್ಲ ವಚನ ಸಾಹಿತ್ಯದಲ್ಲಿ ಇದೆ ಆದರೆ ಉಪನಿಷತ್ತಿನಲ್ಲೂ ಇಲ್ಲದ ವಿಚಾರಗಳು ಸಹ ವಚನ ಸಾಹಿತ್ಯದಲ್ಲಿದೆ ಎಂಬ ಕೀರ್ತಿ ಶೇಷ ರಂಗನಾಥ ದಿವಾಕರರ ಅಭಿಪ್ರಾಯವನ್ನು ಪುನರುಚ್ಚರಿಸಿದರು.

ಗೌರವ ಉಪಸ್ಥಿತರಾಗಿದ್ದ ದಾವಣಗೆರೆ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶರಣೆ ವಿನೋದ ಅಜಗಣ್ಣನವರ್ ಮಾತನಾಡಿ ಸಮಾಜದ ಓರೆ ಕೋರೆ ಅಂಕುಡೊಂಕು ಅಂತರಂಗದ ಕತ್ತಲೆ ಕಳೆಯಲು ವಚನ ಸಾಹಿತ್ಯ ಸಮರ್ಥ ಸಾಧನ, ಇದು ಸಾರ್ವಕಾಲಿಕ ಸತ್ಯ ಎಂದರು.

ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣ ಕೆ ಬಿ ಪರಮೇಶ್ವರಪ್ಪರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಬಸವ ಬಳಗದ ಸದಸ್ಯರು ಹಾಡಿದರೆ ಸ್ವಾಗತವನ್ನು ಕಾರ್ಯದರ್ಶಿ ಶರಣ ಎಂ ಎಸ್ ರಾಜು ಕೋರಿದರು, ದತ್ತಿದಾನಿಗಳಾದ ಶರಣೆ ಹೆಚ್. ಎಂ. ಮಂದಾಕಿನಿ ಸ್ವಾಮಿ, ಲಿಂ. ಸಣ್ಣಮ್ಮ ಲಿಂ.ಸಿದ್ದವೀರಪ್ಪ ಕ ಶೆಟ್ಟರ ದತ್ತಿಯ ಶ್ರೀ ವಿಭೂತಿ ಬಸವಾನಂದ, ಬಸವ ಧರ್ಮ ಪ್ರಚಾರಕರು, ಶ್ರೀಮತಿ ಮೀನಾಕ್ಷಮ್ಮ ಲಿಂ.ದೇವಿಗೆರೆ ವೀರಭದ್ರಪ್ಪ ದತ್ತಿ ಗಿರೀಶ್ ಡಿ.ವಿ. ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿ ಶರಣ ಆರ್.ಸಿದ್ದೇಶ್, ಕಾರ್ಯದರ್ಶಿ ಶರಣೆ ಪಂಕಜ ದಯಾನಂದ ಮುಂತಾದವರು ಭಾಗವಹಿಸಿದರು.

ವಂದನೆಗಳನ್ನು ಶರಣ ಪ್ರಕಾಶ್ ಸಮರ್ಪಿಸಿದರು. ವಚನ ಗಾಯನವೂ ನೆರವೇರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...