Friday, December 5, 2025
Friday, December 5, 2025

Kumadwati High School ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜದ ರಥ ನಡೆಸುವವರು-ಡಾ.ಜಿ.ಎಸ್.ಶಿವಕುಮಾರ್

Date:

Kumadwati High School ನಾಯಕನು ಶಾಲೆಯ ನಾಲ್ಕು ಕೋಣೆಯಿಂದ ಹುಟ್ಟುತ್ತಾನೆ. ಅದಕ್ಕೆ ಶಿಕ್ಷಕರ ಪರಿಶ್ರಮ ಕೊಡುಗೆಯೂ ಅಷ್ಟೇ ಮಹತ್ವವಾದುದು. ಶಾಲೆಯ ನಾಯಕತ್ವ ವಹಿಸಿ ಜವಾಬ್ದಾರಿಯನ್ನು ನಿಭಾಯಿಸುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಗುರಿಯು ಸ್ಪಷ್ಟವಾಗುತ್ತದೆ ಎಂದು ಆಡಳಿತ ಮಂಡಳಿಯ ಪ್ರತಿನಿಧಿಗಳು ಮತ್ತು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಶಿವಕುಮಾರ್.ಜಿ.ಎಸ್ ಅವರು ತಿಳಿಸಿದರು.

ಕುಮದ್ವತಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ತು 2023-24ರ ಪದವಿ ಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Kumadwati High School ಶಾಲಾ ನಾಯಕನು ಇತರ ವಿದ್ಯಾರ್ಥಿಗಳಿಗೆ ಮಾದರಿ ಆಗುವುದಲ್ಲದೆ ಅವರನ್ನು ತನ್ನಂತೆ ಪ್ರತಿಭಾವಂತರಾಗುವತೆ ಮಾಡುವಲ್ಲಿ ಶ್ರಮಿಸಬೇಕು. ಇಂದು ಶಾಲೆಯ ಬೇರೆ ಬೇರೆ ಜವಾಬ್ದಾರಿಗಳನ್ನು ನಿಭಾಯಿಸಲು ಆಯ್ಕೆಯಾದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜದ ರಥವನ್ನು ನಡೆಸುವ ಸಾರಥಿಗಳೂ ಆಗಬಹುದು ಶಿಸ್ತು ನಿಯಮಗಳಿಂದ ಬದಲಾವಣೆ ಸಾಧ್ಯವಿದೆ, ನಿಮ್ಮನ್ನು ನೀವು ಬದಲಾಯಿಸಿ ಕೊಳ್ಳದ್ದಿದ್ದರೆ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲ. ಶಿಕ್ಷಕರ ಮಾತು ದೇವರ ಪ್ರಸಾಧವಿದ್ದಂತೆ ಎಂದರು.

ವಿವೇಕಾನಂದರ ತತ್ತ್ವ ವಾಣಿಗಳನ್ನು ಮನದಟ್ಟು ಮಾಡಿಕೊಂಡು ಗುರಿಯತ್ತ ಸಾಗುವ ನಿರ್ಧಾರ ಕೈಗೊಳ್ಳಬೇಕು.ಅಧಿಕಾರ ಶಾಶ್ವತವಲ್ಲ,ನಾವು ಮಾಡುವ ಒಳ್ಳೆಯ ಕೆಲಸಗಳು ಶಾಶ್ವತ,ಮಕ್ಕಳೇ ಆಸ್ತಿಯಾಗಿದೆ ಕವಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಔಶಲ್ಯಧಆರಇತ ಜ್ಞಾನವು ಹೆಚ್ಚು ಮೌಲ್ಯಯುತವಾದ ನೀವೆಲ್ಲರೂ ಅಂತಹ ಸೃಜನಾತ್ಮಕ ಕೌಶಲ್ಯ ಜ್ಞಾನ ವೃದ್ಧಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಸ್ಥಾಪಕ ಸದಸ್ಯರು ಮತ್ತು ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆದ ಶ್ರೀಮತಿ ನಿರ್ಮಲಾ ಪೈ , ರವರು ಮಾತನಾಡಿ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿನ ಪಾತ್ರ ಬಹುಮುಖ್ಯ. ಸಂವಿಧಾನವೆಂಬುದು ದೇಶದ ಧರ್ಮಗ್ರಂಥ. ನಾಯಕತ್ವದ ಅರಿವು ಮೂಡಿಸಲು ಈ ಶಾಲಾ ಸಂಸತ್ತು ರಚನೆಯಾಗುತ್ತದೆ. ಶಾಲೆಯು, ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಬೆಳೆಸುವ ಕೊಂಡಿಯಾಗಿದೆ.ಒಗ್ಗಟ್ಟಿನಿಂದ ಎಲ್ಲರೂ ಒಮ್ಮತದಿಂದ ಅಭಿಪ್ರಾಯಗಳನ್ನು ಸ್ವೀಕರಿ ಮುನ್ನಡೆಯಬೇಕು ಆಗ ಯಶಸ್ಸು ಕಾಣಲು ಸಾಧ್ಯ
ಎಂದು ತಿಳಿಸಿದರು.

ಕಾರ್ಯಕ್ರಮದ‌ ಅಧ್ಯಕ್ಷರು ಶಾಲೆಯ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ .ಪಿ ರವರು ಶಾಲಾ ವಿದ್ಯಾರ್ಥಿ ಸಂಸತ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಶಾಲಾ ಸಂಸತ್ತಿನ ವಿವಿಧ ಜವಾಬ್ದಾರಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಾಲಾ ವಿದ್ಯಾರ್ಥಿ ಸಂಘದ ಚುನಾವಣೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದು ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕು ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಪೋಷಕರಲ್ಲಿ ಮತದಾನದ ಅರಿವು ಮೂಡಿಸುವ ಈ ಸುಂದರ ಪರಿಕಲ್ಪನೆಯು ಭವ್ಯ ಭಾರತಕ್ಕೆ ನಾಂದಿ ಎಂದು ತಿಳಿಸಿದರು. ನಾಯಕರುಗಳು ಸದರಿ ಶೈಕ್ಷಣಿಕ ವರ್ಷದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ವಿವರಿಸಿದರು.

ಮೈತ್ರಿ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದರವರು ತರಗತಿ ನಾಯಕರಿಗೆ ಬ್ಯಾಡ್ಜ್ ವಿತರಿಸಿ ಶುಭ ಹಾರೈಸಿದರು. ಶ್ರೀಮತಿ ನಂದಿನಿಯವರು ಚುನಾಯಿತ ಅಭ್ಯರ್ಥಿಗಳ ಹುದ್ದೆಗಳನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ಆರಾಧ್ಯ ಸ್ವಾಗತಿಸಿ, ಸೃಜನ ವಂದಿಸಿ ವಿದ್ಯಾಲಕ್ಷ್ಮಿ ಮತ್ತು ಅನ್ವಿತ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...