Shivamogga Working Journalists Association ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ, ಸಹ್ಯಾದ್ರಿ ಕಲಾ ಕಾಲೇಜು, ಕನ್ನಡ ಸಾಹಿತ್ಯ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಜೂ. 4ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಜಮ್ಮು ಮತ್ತು ಕಾಶ್ಮೀರದ ಪ್ರವಾಸೀ ಕಲಾವಿದ ಲಕ್ಕಿ ಗುಪ್ತರವರ ಏಕ ವ್ಯಕ್ತಿ ರಂಗ ಪ್ರಯೋಗ ಮಾ ಮುಝೆ ಟ್ಯಾಗೋರ್ ಬನಾದೆ ಪ್ರದರ್ಶನಗೊಳ್ಳಲಿದೆ.
ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಏಕ ವ್ಯಕ್ತಿ ಪ್ರಯೋಗವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಬಿ. ಧನಂಜಯ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಲಕ್ಕಿ ಗುಪ್ತರವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆಯ ಉಪಾಧ್ಯಕ್ಷ ಆರ್. ಎಸ್. ಹಾಲಸ್ವಾಮಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಽಕಾರಿ ಡಾ. ಕೆ.ಎನ್. ಮಂಜುನಾಥ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹಾಲಮ್ಮ, ಸಹ್ಯಾದ್ರಿ ಕಲಾ ತಂಡದ ಸಂಚಾಲಕ ಜಿ. ಆರ್. ಲವ ಉಪಸ್ಥಿತರಿರಲಿದ್ದಾರೆ.
Shivamogga Working Journalists Association ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ವಿ. ಟಿ. ಅರುಣ್, ನಗರ ಕಾರ್ಯದರ್ಶಿಗಳಾದ ದೀಪಕ್ ಸಾಗರ್, ಕೆ. ಆರ್. ಸೋಮನಾಥ್, ಗಾ. ರಾ. ಶ್ರೀನಿವಾಸ್ ಕೋರಿದ್ದಾರೆ.
ಲಕ್ಕಿ ಗುಪ್ತರವರ ಪರಿಚಯ ಹೀಗಿದೆ...
ಜಮ್ಮು ಮತ್ತು ಕಾಶ್ಮೀರ ಮೂಲದವರು. ಇವರು ಪ್ರವಾಸೀ ರಂಗ ಕಲಾವಿದರು. ಕಳೆದ 25 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಇವರು, ದೇಶದಾದ್ಯಂತ ಏಕ ವ್ಯಕ್ತಿ ರಂಗ ಪ್ರದರ್ಶನಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಇವರ ಬಹು ಚರ್ಚಿತ ಮಾ ಮುಝೆ ಟ್ಯಾಗೋರ್ ಬನಾದೆ ಏಕ ವ್ಯಕ್ತಿ ರಂಗ ಪ್ರಯೋಗ, ಈಗಾಗಲೇ ದೇಶದ 25 ರಾಜ್ಯಗಳಲ್ಲಿ ನಾಲ್ಕುವರೆ ಲಕ್ಷಕ್ಕೂ ಹೆಚ್ಚು ಕಿ.ಮಿ. ಸಂಚರಿಸಿ, 800 ನಗರಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ಕಂಡಿದೆ.
ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ, ಪ್ರೇಕ್ಷಕರೇ ಪಾತ್ರವಾಗುವ ವಿಶಿಷ್ಟ ಪ್ರಯೋಗ ಇದು.
ಆಸಕ್ತರು ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ