Friday, September 27, 2024
Friday, September 27, 2024

Belur Gopalakrishna ಪತ್ರಿಕೆಗಳು ವಾಸ್ತವ ಸಂಗತಿ ತಿಳಿಸಿದಾಗ ಜನರ ನಂಬಿಕೆ ವಿಶ್ವಾಸಗಳಿಸಲು ಸಾಧ್ಯ- ಶಾಸಕ ಬೇಳೂರು ಗೋಪಾಲಕೃಷ್ಣ

Date:

Belur Gopalakrishna ಪತ್ರಿಕೆಗಳು ಜನಸೇವೆಯ ಜೊತೆಗೆ ಜನರ ಅಹವಾಲುಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾ ವಿತರಕರಿಗೆ ಸೈಕಲ್, ರಿಫ್ಲೆಕ್ಟ್ ಜಾಕೇಟ್ ವಿತರಿಸಿ, ಹಾಗೂ ಹಿರಿಯ ಪತ್ರಕರ್ತರನ್ನು ಸನ್ಮಾ£ಸಿ ಅವರು ಮಾತನಾಡಿ, ಪತ್ರಿಕೆಗಳು ವಾಸ್ತವ ಸಂಗತಿಗಳನ್ನು ತಿಳಿಸಿದಾಗ ಜನರ ನಂಬಿಕೆ, ವಿಶ್ವಾಸ ಗಳಿಸಲು ಸಾಧ್ಯ ಎಂದರು.
ಪತ್ರಿಕಾ ವಿತರಕರು ಬಹಳ ಜಾಗ್ರತೆಯಿಂದ ವಿತರಣಾ ಕೆಲಸದಲ್ಲಿ ತೊಡಗಿಕೊಳ್ಳಬೇಕು. £ಮ್ಮನ್ನು ನಂಬಿ ನಮ್ಮ ಕುಟುಂಬ ಇರುತ್ತದೆ ಎಂಬ ಪ್ರಜ್ಞೆ ಇರಬೇಕು.

ಆಕಸ್ಮಿಕ ಅವಘಡ ಸಂಭವಿಸಿದರೆ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬುದಕ್ಕೆ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಇಂಥವರಿಗೆ 10 ಲಕ್ಷ ರೂ. ವಿಮೆ ಅಳವಡಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಪತ್ರಕರ್ತರನ್ನು ಸನ್ಮಾನಿಸುವುದರಿಂದ ಅವರ ಜವಾಬ್ದಾರಿ ಹೆಚ್ಚುತ್ತದೆ. ಅವರು ಇನ್ನಷ್ಟು ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಾರೆ. ಪತ್ರಕರ್ತರು ಅನಾರೋಗ್ಯಕ್ಕೆ ತುತ್ತಾದಾಗ ಸರ್ಕಾರ ಅಗತ್ಯ ಕ್ರಮಗಳನ್ನು ಸೌಲಭ್ಯ ಕಲ್ಪಿಸಬೇಕು. ಆದರೆ ಆಯುಷ್ಮಾನ್ ಕಾರ್ಡ್ ನಿಂದ ಅನಾರೋಗ್ಯಕ್ಕೆ ತುತ್ತಾದ ಪತ್ರಕರ್ತರಿಗೆ ಚಿಕಿತ್ಸೆ ನಿರಾಕರಣೆ ಸರಿಯಲ್ಲ. ಜನರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು. ಇಲ್ಲವಾದರೆ ಯೋಜನೆ ಕೈ ಬಿಡಬೇಕು ಎಂದವರು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸರಸ್ವತಿ ಮೇಜರ್ ಎಂ.ನಾಗರಾಜ್ ಕುಟುಂಬದವರು ಕೊಡಮಾಡುವ ‘ಉತ್ತಮ ಪತ್ರಕರ್ತ’ ಪ್ರಶಸ್ತಿಯನ್ನು ಮೊದಲ ಬಾರಿಗೆ ಹಿರಿಯ ಪತ್ರಕರ್ತ ಗಣಪತಿ ಶಿರಳಗಿ ಅವರಿಗೆ ಪ್ರಾಯೋಜಕರಾದ ಮೇಜರ್ ಎಂ.ನಾಗರಾಜ್ ಪ್ರದಾನ ಮಾಡಿದರು. ಹಿರಿಯ ಪತ್ರಕರ್ತ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ದೃಶ್ಯ ಮಾಧ್ಯಮದವರ ಹಾವಳಿ ನಂತರ ಇದೀಗ ಸಾಮಾಜಿಕ ಜಾಲತಾಣಗಳು ಹೆಚ್ಚು ಸದ್ದು ಮಾಡುತ್ತಿವೆ. ತಮಗೆ ತಿಳಿದಂತೆ ನಡೆದ ಘಟನೆಯನ್ನು ವಿಡಿಯೋ ಮಾಡಿ ಸುದ್ದಿ ಬಿತ್ತರಿಸುತ್ತವೆ. ಆದರೆ ಮುದ್ರಣ ಮಾಧ್ಯಮದಿಂದ ಮಾತ್ರ ವಾಸ್ತವಿಕ ಸಂಗತಿಗಳನ್ನು ತಿಳಿಯಲು ಸಾಧ್ಯ. ಇವು ನಿಖರ ಸುದ್ದಿಗಳನ್ನು ಮಾಡುತ್ತಿವೆ ಎಂದರು.

Belur Gopalakrishna ಲಂಕೇಶ್ ಪತ್ರಿಕೆಯಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣುವಂತಾಯಿತು. ತಾವು ನಂಬಿದ ಸಿದ್ಧಾಂತವನ್ನು ಅವರೆಂದೂ ಬಿಡಲಿಲ್ಲ. ಅಧಿಕಾರಸ್ಥರ ಹಿಂದೆ ಅವರೆಂದೂ ಹೋಗಿಲ್ಲ. ಆಡಳಿತ ಪಕ್ಷದ ನಿಲುವನ್ನು ವಿರೋಧಿಸಿ ಒಂದು ಸರ್ಕಾರವನ್ನೇ ಬದಲಾಯಿಸುವಷ್ಟು ಶಕ್ತಿ ಪತ್ರಿಕೆಗಳಿಗಿದೆ. ಇದು ಲಂಕೇಶ್ ಪತ್ರಿಕೆಯಿಂದ ಸಾಧ್ಯವಾಗಿದೆ. ಯಾವುದಕ್ಕೂ ರಾಜಿಯಾಗದೆ, ಹಣದ ಹಿಂದೆ ಹೋಗದೆ, ಸತ್ಯವನ್ನು ನಿಷ್ಠುರವಾಗಿ ಹೇಳುವ, ನ್ಯಾಯದ ಪರ ಪತ್ರಿಕೆಗಳು ಇರಬೇಕು. ಸಾಮಾಜಿಕ ನ್ಯಾಯದ ಪರ ಬರೆಯಬೇಕು ಎಂದು ಸಲಹೆ ನೀಡಿದರು.

ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸ್ರಾಣಿ ಮಾತನಾಡಿ, ಒಂದು ದೇಶ ಸರಿಯಾಗಿ ಹೋಗುತ್ತಿದೆ ಎಂದರೆ ಅಲ್ಲಿ ಪತ್ರಿಕಾ ಮಾಧ್ಯಮ ಸರಿಯಾಗಿ ಕೆಲಸ ಮಾಡುತ್ತಿದೆ ಎಂದರ್ಥ. ನಿಷ್ಠುರವಾಗಿ ಬರೆಯುವ ಪತ್ರಕರ್ತ ಸಮಾಜದಲ್ಲಿ ಬೆದರಿಕೆ ಎದುರಿಸಬೇಕು. ಸತ್ಯ ಬರೆದರೆ ಪ್ರಭುತ್ವದ ವಿರೋಧ ಕಟ್ಟಿಕೊಳ್ಳುವ ಅಪಾಯ ಪ್ರಸ್ತುತ ಎದುರಾಗಿದೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮೂಹವನ್ನು ದೂಷಿಸುವುದು ಸಲ್ಲುದು. ಪತ್ರಕರ್ತರಿಗೆ ಅಗತ್ಯ ರಕ್ಷಣೆ ನೀಡುವ ಜವಾಬ್ದಾರಿ ಸರ್ಕರದ ಮೇಲಿದೆ ಎಂದರು.

ಹಿರಿಯ ಪತ್ರಕರ್ತ ಶಿರಸಿಯ ಅಶೋಕ ಹಾಸ್ಯಗಾರ ಅವರು ‘ಮೌಲ್ಯಾಧಾರಿತ ಪತ್ರಿಕೋದ್ಯಮ’ ಕುರಿತು ಮಾತನಾಡಿ, ಪತ್ರಿಕಾ ರಂಗದಲ್ಲಿ ಈಗ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ತಮ್ಮದು ಜನಪರ ನಿಲುವು, ಅಭಿವೃದ್ಧಿಪರ ಎಂದು ಹೇಳುತ್ತಲೇ ತಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತವೆ. ತಾವು ಜನರಿಗೆ ಕೊಟ್ಟ ಸುದ್ದಿಗಳು ಸರಿ ಇದೆಯೋ ಇಲ್ಲವೊ ಎಂಬ ತರ್ಕವನ್ನೂ ಮಾಡುವುದಿಲ್ಲ. ಪಕ್ಷವೊಂದು ಚುನಾವಣೆಯಲ್ಲಿ ಸೋತರೆ ತಮಗೆ ಬೇಕಾದ ಹಾಗೆ ಬರೆದುಕೊಳ್ಳುತ್ತವೆ. ಜನರ ಇಂಗಿತವನ್ನು ಅರಿತು ವಿಶ್ಲೇಷಣೆ ಮಾಡಬೇಕು ಎಂದರು.

ಮೊದಲು ಅಮೇರಿಕಾದಲ್ಲಿ ಚೆಕ್‌ಬುಕ್ ಜರ್ನಲಿಸಂ ಆರಂಭಗೊಂಡಿತು. ಹಣ ಕೊಟ್ಟು ತಮಗೆ ಬೇಕಾದ ಹಾಗೆ ಬರೆಯಿಸಿಕೊಳ್ಳಲಾಯಿತು. ಇದರಿಂದ ಇಡೀ ದೇಶವೇ ಅಲ್ಲೋಲಕಲ್ಲೋಲವಾಯಿತು. ಸುಳ್ಳನ್ನು ವಿಜೃಂಭಿಸುವ ಪತ್ರಿಕೆಗೆ ಗೌರವ ಸಿಗುವ ವಾತಾವರಣ ಸೃಷ್ಟಿಯಾದರೆ ಪತ್ರಿಕೆಗಳ ಮೌಲ್ಯ ಉಳಿಯಲು ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದರು.
ಸರ್ಕಾರ ಪತ್ರಿಕೆಗಳಿಗೆ ಸಬ್ಸಿಡಿ ನೀಡಬೇಕು. ಕೊಡುವ ಸೌಲಭ್ಯಗಳನ್ನು ಕೊಡದಿದ್ದರೆ ಪತ್ರಿಕೆಗಳು ಉಳಿದುಕೊಳ್ಳುವುದು ಕಷ್ಟ. ಇವತ್ತಿನ ಪತ್ರಿಕೆಗಳ ಸ್ವರೂಪ ಬದಲಾಗಿದೆ. ವಾಸ್ತವ ಹೇಳಿದರೆ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಭ್ರಷ್ಟರು ಎಂದು ಬರೆಯಲು ಸಾಧ್ಯವಾ ? ಹೀಗೆ ನಡೆದ ಪ್ರಕರಣದಲ್ಲಿ ಆರೋಪಿಯ ಪತ್ರಿಕೆಯನ್ನು ಸೀಜ್ ಮಾಡಿದ ಘಟನೆ ನಡೆದಿದೆ. ನನ್ನ ಮೇಲೂ 15 ಮಾನನಷ್ಟ ಪ್ರಕರಣ ಇದೆ. ಬೇರೆಯವರ ಗೌರವಕ್ಕೆ ಧಕ್ಕೆ ಬಾರದಂತೆ ಬರೆಯಬೇಕು ಎಂದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎಚ್.ವಿ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಪ್ರೇಮಾ ಸಿಂಗ್, ನಾದಿರಾ ಪರ್ವೀನ್, ಮಾಜಿ ಸದಸ್ಯ ಕೆ.ಸಿದ್ದಪ್ಪ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಎನ್.ರಮೇಶ್, ಪ್ರೆಸ್ ಟ್ರಸ್ಟ್ನ ಎ.ಡಿ.ಸುಬ್ರಹ್ಮಣ್ಯ, ನಗರಸಭೆ ಹಿರಿಯ ಅಭಿಯಂತರ ಎಚ್.ಕೆ.ನಾಗಪ್ಪ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...